ಬೆಂಗಳೂರು: ನಾನು ಹಿಜಾಬ್ ಧರಿಸಿ ವಿಧಾನಸೌಧದೊಳಗೆ ಬಂದಾಗ ತಾಕ್ಕತ್ತಿದ್ದರೆ ತಡೆಯಲಿ ನೋಡೋಣ ಅಂತಾ ಶಾಸಕಿ ಕನೀಝ್ ಫಾತಿಮಾ(Kaneez Fatima) ಸವಾಲು ಹಾಕಿದ್ದಾರೆ. ಹಿಜಾಬ್ ವಿವಾದ ವಿಚಾರ(Karnataka Hijab Row,)ವಾಗಿ ಮಾತನಾಡಿರುವ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಾಗಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಅಡ್ಡಿಪಡಿಸುವ ಕಾಲೇಜು ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರ ವಿರುದ್ಧ ಹರಿಹಾಯ್ದಿದ್ದಾರೆ.
‘ಹಿಜಾಬ್(Hijab) ಅನ್ನು ಸಮವಸ್ತ್ರದೊಂದಿಗೆ ಹೊಂದಿಸಲು ಅದರ ಬಣ್ಣ ಬದಲಾಯಿಸಲು ನಾವು ಸಿದ್ಧರಿದ್ದೇವೆ, ಆದರೆ ನಾವು ಅದನ್ನು ಬಿಡಲು ಸಾಧ್ಯವಿಲ್ಲ. ನಾನು ವಿಧಾನಸಭೆಗೆ ಹಿಜಾಬ್ ಧರಿಸಿಯೇ ಬರುತ್ತೇನೆ. ಸಾಧ್ಯವಾದರೆ ಅವರು ನನ್ನನ್ನು ತಡೆಯಲಿ ನೋಡೋಣ. ಈ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಜ್ಞಾಪಕ ಪತ್ರ ನೀಡಲಿದ್ದು, ಉಡುಪಿಯಲ್ಲಿ ಪತ್ರಿಭಟನೆ ನಡೆಸುತ್ತೇವೆ’ ಅಂತಾ ಕಾಂಗ್ರೆಸ್ ಶಾಸಕಿ ಕನೀಝ್ ಫಾತಿಮಾ(Congress MLA Kaneez Fatima) ಹೇಳಿದ್ದಾರೆ.
ಇದನ್ನೂ ಓದಿ: ಗ್ರಾಮ ಒನ್ ಯೋಜನೆ ಮೂಲಕ ಕಾರ್ಯಕ್ಷಮತೆ ಹೆಚ್ಚಿಸಿ: ಸಿಎಂ ಬಸವರಾಜ ಬೊಮ್ಮಾಯಿ
We're ready for a change in the colour of the hijab in order to match it with the uniform but we cannot leave it. I wear hijab to the Assembly as well, they can stop me if they can. A memorandum will go to the CM & we'll protest in Udupi later: Congress MLA Kaneez Fatima pic.twitter.com/FwkgR3CbR3
— ANI (@ANI) February 6, 2022
ಉಡುಪಿಯಲ್ಲಿ ಹಿಜಾಬ್ ವಿವಾದವನ್ನು ವಿರೋಧಿಸಿ ಶಾಸಕಿ ಕನೀಝ್ ಫಾತಿಮಾ(Kaneez Fatima) ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ‘ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪರೀಕ್ಷೆಗೆ 2 ತಿಂಗಳ ಮೊದಲು ಶಾಲೆಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ, ಹೀಗಾಗಿ ಎಲ್ಲ ಜಾತಿ, ಧರ್ಮದ ಜನರು ಕಲಬುರಗಿಯ ಡಿಸಿ ಕಚೇರಿಯಲ್ಲಿ ಜಮಾಯಿಸಿದ್ದಾರೆ. ಹಿಜಾಬ್ ಧರಿಸುವುದನ್ನು ತಡೆಯುವುದು, ಕೋಮುಸೌಹಾರ್ದ ಕೆಡಿಸುವ ವಿಷಯಗಳು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿವೆ. ಹಿಂದಿನ ಬಿ.ಎಸ್.ಯಡಿಯೂರಪ್ಪ(BS Yediyurappa) ನೇತೃತ್ವದ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲ. ಈಗ ಈ ರೀತಿಯ ಘಟನೆಗಳು ಜಾಸ್ತಿಯಾಗುತ್ತಿವೆ’ ಅಂತಾ ಅವರು ಆರೋಪಿಸಿದ್ದಾರೆ.
‘ಶಾಸಕಿಯಾದ ನಾನು ಕೂಡ ಹಿಜಾಬ್(Hijab) ಧರಿಸಿಯೇ ವಿಧಾನಸಭೆಯೊಳಗೆ ಕುಳಿತುಕೊಳ್ಳುತ್ತೇನೆ. ಯಾರಿಗಾದರೂ ತಾಕತ್ತಿದ್ದರೆ ವಿಧಾನಸೌಧ ಪ್ರವೇಶಿಸುವುದಕ್ಕೆ ನನ್ನನ್ನು ತಡೆಯಲಿ ನೋಡೋಣ. ಹಿಜಾಬ್ ಅಥವಾ ಬುರ್ಖಾ ಧರಿಸುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ, ಬಟ್ಟೆ ಧರಿಸುವ ಹಕ್ಕು ವೈಯಕ್ತಿಕ. ನಮ್ಮ ಸಂಸ್ಕೃತಿಯಲ್ಲಿರುವ ಹಿಜಾಬ್ ಧರಿಸುವ ಸಂಪ್ರದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ವೆಂದು ಹೇಳಿದ್ದಾರೆ.
ಇದನ್ನೂ ಓದಿ: "ಕಾಲೇಜುಗಳಲ್ಲಿ ಕೂಡಾ ಮಂಗಳೂರು ಜೈಲಿನಂತೆ ಹಿಂದೂ ಮುಸ್ಲಿಮರ ನಡುವೆ ಗೋಡೆಯನ್ನು ಕಟ್ಟಿದ್ದೀರಿ"
ಸಾಂಪ್ರದಾಯಿಕ ಧಿರಿಸು ಧರಿಸುವುದನ್ನು ತಡೆಯುವ ಜನರಿಂದ ವಿದ್ಯಾರ್ಥಿಗಳನ್ನು ಕಾಪಾಡುವ ಭರವಸೆಯನ್ನು ನೀಡಿರುವ ಅವರು, ‘ನಮ್ಮದು ಸ್ವತಂತ್ರ ದೇಶ, ದೇಶದ ಸಂವಿಧಾನ ನಮಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನುಕಾಪಾಡುವ ಹಕ್ಕುಗಳನ್ನು ನೀಡಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್(Dr BR Ambedkar) ಅವರು ಜನರಿಗೆ ತಮ್ಮಿಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ನೀಡಿದ್ದಾರೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ’ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.