Telegram, WhatsApp ಮೂಲಕ ಸೂಕ್ಷ್ಮ ಮಾಹಿತಿ ಹಂಚಿಕೆ ಬೇಡ, ಸಲಹೆಗಳನ್ನು ಜಾರಿಗೊಳಿಸಿದ ಸರ್ಕಾರ

Government Advisory - ಸೈಬರ್ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಲಹೆಗಳನ್ನು ನೀಡಿದೆ. ಆಪ್ ಮೂಲಕ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಈ ಸಲಹೆಗಳಲ್ಲಿ ಹೇಳಲಾಗಿದೆ.

Written by - Nitin Tabib | Last Updated : Jan 21, 2022, 12:43 PM IST
  • ಸಚಿವಾಲಯಗಳಿಂದ ವಾಟ್ಸ್ ಆಪ್, ಟೆಲಿಗ್ರಾಂ ಬಳಕೆ ಬೇಡ.
  • ಸಲಹೆಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ.
  • ದೇಶದ ಭದ್ರತೆಗೆ ಧಕ್ಕೆ.
Telegram, WhatsApp ಮೂಲಕ ಸೂಕ್ಷ್ಮ ಮಾಹಿತಿ ಹಂಚಿಕೆ ಬೇಡ, ಸಲಹೆಗಳನ್ನು ಜಾರಿಗೊಳಿಸಿದ ಸರ್ಕಾರ title=
Government Advisory (File Photo)

ನವದೆಹಲಿ: Government Advisory - ದೇಶದ ಭದ್ರತೆಯನ್ನು (Cyber Security) ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ (Government Of India) ತನ್ನ ಎಲ್ಲಾ ಸಚಿವಾಲಯಗಳು ಹಾಗೂ ವಿಭಾಗಗಳಿಗೆ ಸೂಚನೆಗಳನ್ನು ನೀಡಿದ್ದು, ವಾಟ್ಸ್ ಆಪ್ (WhatsApp) ಹಾಗೂ ಟೆಲಿಗ್ರಾಂಗಳಂತಹ (Telegram) ವೇದಿಕೆಗಳ ಮೂಲಕ ಕ್ಲಾಸಿಫೈಡ್ (Classifides) ಅಥವಾ ಸೂಕ್ಷ್ಮ ಮಾಹಿತಿಯನ್ನು (Sensitive Information) ಹಂಚಿಕೊಳ್ಳಬಾರದು ಎಂದು ಹೇಳಿದೆ. ಇದಕ್ಕಾಗಿ ಸರ್ಕಾರ ಒಂದು ಅಡ್ವೈಸರಿ (Government Advisory) ಕೂಡ ಜಾರಿ ಮಾಡಲಾಗಿದೆ.

ಇದನ್ನೂ ಓದಿ-ಕೇವಲ 800 ರೂ. ಗೆ ಖರೀದಿಸಿ Motorola ಸ್ಮಾರ್ಟ್ ಫೋನ್

ಹೆಚ್ಚುವರಿ ಆಪ್ ಗಳ ಸರ್ವರ್ ಗಳು ವಿದೇಶಗಳಲ್ಲಿವೆ
ಹೆಚ್ಚಿನ ಮೊಬೈಲ್ ಆ್ಯಪ್‌ಗಳ ಸರ್ವರ್‌ಗಳು ವಿದೇಶದಲ್ಲಿದ್ದು, ಇಂತಹ ಸಂದರ್ಭದಲ್ಲಿ ಮೊಬೈಲ್ ಆ್ಯಪ್ ಮೂಲಕ ಯಾವುದೇ ಗೌಪ್ಯ ಮಾಹಿತಿ ಹಂಚಿಕೊಳ್ಳುವುದು ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಭದ್ರತಾ ಏಜೆನ್ಸಿಗಳ ವರದಿಯ ನಂತರ ಸರ್ಕಾರ ಎಲ್ಲಾ ಸಚಿವಾಲಯಗಳಿಗೆ ಈ ಸಲಹೆಯನ್ನು ನೀಡಿದೆ. ಇಂತಹ ಸನ್ನಿವೇಶದಲ್ಲಿ ಅತ್ಯಂತ ಸಂವೇದನಶೀಲ ಮಾಹಿತಿ ದೇಶದ ಹೊರಗೆ ಹೋಗುವ ಎಲ್ಲಾ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ-Flipkart Sale: Vivo 5G ಫೋನ್ ಮೇಲೆ ಪಡೆಯಿರಿ ಭರ್ಜರಿ 24,000 ರೂ.ಗಳ ರಿಯಾಯಿತಿ

ವರ್ಚುವಲ್ ಮೀಟಿಂಗ್ ಗಳ ಕುರಿತು ಶಂಕೆ ವ್ಯಕ್ತವಾಗಿದೆ
ಮೂಲಗಳ ಪ್ರಕಾರ, ಭದ್ರತಾ ಏಜೆನ್ಸಿಗಳು ಮನೆಯಿಂದಲೇ ಕೆಲಸದ ಸಮಯದಲ್ಲಿ ನಡೆಸುವ ಹೆಚ್ಚಿನ ವರ್ಚುವಲ್ ಸಭೆಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿವೆ. ವರ್ಚುವಲ್ ಕಾನ್ಫರೆನ್ಸ್ ಸಮಯದಲ್ಲಿ ಬಳಸಿದ ಮಾಹಿತಿಯು ಸೋರಿಕೆಯಾಗುವ ಅಪಾಯವೂ ಇದೆ. ಅಂತಹ ಪರಿಸ್ಥಿತಿಯಲ್ಲಿ, ಎನ್ಐಸಿ ಸೂಚಿಸಿದ ಅಪ್ಲಿಕೇಶನ್ ಅನ್ನು ಮಾತ್ರ ಬಳಸಬೇಕು. ಭದ್ರತಾ ಏಜೆನ್ಸಿಗಳು ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಹ ನೀಡಿವೆ. ಇಂತಹ ಗೌಪ್ಯ ಸಭೆಗಳ ಸಂದರ್ಭದಲ್ಲಿ ಅಧಿಕಾರಿಗಳು ಈ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳನ್ನು ಸಭೆಯ ಕೊಠಡಿಯಿಂದ ಹೊರಗೆ ಇಡಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ-ಜಿಯೋ, ಏರ್‌ಟೆಲ್‌ನ ನಿದ್ದೆಗೆಡಿಸಿದೆ ವೊಡಾಫೋನ್ ಐಡಿಯಾದ ಈ ಪ್ಲಾನ್, ಗ್ರಾಹಕರಿಗೆ ಸಿಗಲಿದೆ ಭರ್ಜರಿ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News