ನವದೆಹಲಿ: ಖಲಿಸ್ತಾನಿ ( Khalistani) ಬೆಂಬಲಿಗರಿಂದ ಸುಪ್ರೀಂ ಕೋರ್ಟ್ನ ವಕೀಲರಿಗೆ (Supreme Court Lawyers) ಬೆದರಿಕೆ ಹಾಕಲಾಗಿದೆ. ಈ ಕರೆಗಳನ್ನು ಇಂಗ್ಲೆಂಡ್ನ ಸಂಖ್ಯೆಯಿಂದ ಮಾಡಲಾಗಿದೆ. ವಕೀಲರಿಗೆ ಸ್ವಯಂಚಾಲಿತ ಫೋನ್ ಕರೆಗಳು ಬಂದಿವೆ.
ಸುಪ್ರೀಂ ಕೋರ್ಟ್ನ ವಕೀಲರಿಗೆ ಬೆದರಿಕೆ:
ಪಂಜಾಬ್ನ ರೈತರು ಮತ್ತು ಸಿಖ್ಖರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಪ್ರಧಾನಿ ಮೋದಿಗೆ ಸಹಾಯ ಮಾಡಬೇಡಿ ಎಂದು ಕರೆ (Threatening Calls) ಮಾಡಿದವರು ಕೇಳಿಕೊಂಡಿದ್ದಾರೆ ಎಂದು ಕರೆಯ ಆಡಿಯೋ ರೆಕಾರ್ಡಿಂಗ್ ಬಹಿರಂಗಪಡಿಸಿದೆ.
ಸಿಖ್ಖರು ಗಲಭೆ ಮತ್ತು ನರಮೇಧದಲ್ಲಿ ಒಬ್ಬ ಅಪರಾಧಿಗೆ ಶಿಕ್ಷೆಯನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು ಎಂದು ಈ ಆಡಿಯೋದಲ್ಲಿ ಹೇಳಲಾಗಿದೆ.
ಸಿಖ್ ಫಾರ್ ಜಸ್ಟೀಸ್:
ಜನವರಿ 5 ರಂದು ಸಿಖ್ ಫಾರ್ ಜಸ್ಟೀಸ್ (Sikhs for Justice) ಪಂಜಾಬ್ನ ಫಿರೋಜ್ಪುರದಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿರುಗಿಸಲು ಸಹ ಮುಖ್ಯ ಪಾತ್ರವಹಿಸಿದೆ. ರೈತರ ಆಂದೋಲನಕ್ಕೆ ಅಕ್ರಮವಾಗಿ ಧನಸಹಾಯ ಮಾಡುವಲ್ಲಿ ಸಿಖ್ ಫಾರ್ ಜಸ್ಟಿಸ್ ಹೆಸರೂ ಮುನ್ನೆಲೆಗೆ ಬಂತು.
ಗಮನಾರ್ಹವಾಗಿ, ಗುರ್ಪತ್ವಂತ್ ಸಿಂಗ್ ಪನ್ನು ಅವರು ಖಲಿಸ್ತಾನ್ ಪರವಾದ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥರಾಗಿದ್ದಾರೆ. ಭಾರತದಲ್ಲಿ ಅಶಾಂತಿಯನ್ನು ಹರಡಲು ಅವರು ಮತ್ತೆ ಮತ್ತೆ ಪ್ರಚೋದನಕಾರಿ ಮತ್ತು ನಕಲಿ ಸುದ್ದಿ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಪನ್ನು ಕ್ಲಿಪ್ಗಳನ್ನು ಭಾರತದಲ್ಲಿ ಇದುವರೆಗೆ ಅನೇಕ ಜನರಿಗೆ ಕಳುಹಿಸಲಾಗಿದೆ.
ಪ್ರಧಾನಿ ಮೋದಿ ಭದ್ರತಾ ಲೋಪ ಪ್ರಕರಣದ ವಿಚಾರಣೆ:
ಇಂದು (ಸೋಮವಾರ) ಪ್ರಧಾನಿ ಮೋದಿಯವರ ಭದ್ರತಾ ಲೋಪ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನಲ್ಲಿ ನಡೆಸಲಾಯಿತು. ಈ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಚಂಡೀಗಢದ ಡಿಜಿಪಿ, ಎನ್ಐಎ ಐಜಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್ನ ಎಡಿಜಿಪಿ ಕೂಡ ಈ ತನಿಖಾ ಸಮಿತಿಯಲ್ಲಿರಲಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಪಿಎಂ ಮೋದಿ ಭದ್ರತಾ ಲೋಪ: ಸುಪ್ರೀಂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.