ಬೆಂಗಳೂರು: ನಾಲ್ಕೇ ಕಿಮೀ ನಡೆದು ಸುಸ್ತಾದರೆ ಹೇಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ವ್ಯಂಗ್ಯವಾಗಿ ಪ್ರಶ್ನಿಸಿದೆ. ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ(Mekedatu Project Dispute) ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ‘ಸಿದ್ದರಾಮಯ್ಯನವರೇ ನಿಮ್ಮ ಆರೋಗ್ಯ ಹೇಗಿದೆ?’ ಅಂತಾ ಪ್ರಶ್ನಿಸಿದೆ.
‘ನಾವಿಬ್ಬರೇ (ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ) ನಡೆಯುತ್ತೇವೆ ಎಂದು ಸವಾಲು ಹಾಕಿದ್ದ ನೀವು ನಾಲ್ಕೇ ಕಿಮೀ ನಡೆದು ಸುಸ್ತಾದರೆ ಹೇಗೆ? #ಸುಳ್ಳಿನಜಾತ್ರೆಯಲ್ಲಿ ಡಿಕೆಶಿ(DK Shivakumar) ಅವರಿಗೆ ಅರ್ಧದಲ್ಲೇ ಕೈಕೊಟ್ಟಿದ್ದರ ಹಿಂದೆ ನಿಮ್ಮ ಪೂರ್ವ ನಿಯೋಜಿತ ತಂತ್ರವಿದೆಯೇ?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.
ಅಂದ ಹಾಗೆ, ವಿಪಕ್ಷ ನಾಯಕ @siddaramaiah ಅವರೇ, ನಿಮ್ಮ ಆರೋಗ್ಯ ಹೇಗಿದೆ?
ನಾವಿಬ್ಬರೇ ನಡೆಯುತ್ತೇವೆ ಎಂದು ಸವಾಲು ಹಾಕಿದ್ದ ನೀವು ನಾಲ್ಕೇ ಕಿಮೀ ನಡೆದು ಸುಸ್ತಾದರೆ ಹೇಗೆ?#ಸುಳ್ಳಿನಜಾತ್ರೆ ಯಲ್ಲಿ ಡಿಕೆಶಿ ಅವರಿಗೆ ಅರ್ಧದಲ್ಲೇ ಕೈ ಕೊಟ್ಟಿದ್ದರ ಹಿಂದೆ ನಿಮ್ಮ ಪೂರ್ವ ನಿಯೋಜಿತ ತಂತ್ರವಿದೆಯೇ?
— BJP Karnataka (@BJP4Karnataka) January 10, 2022
ಇದನ್ನೂ ಓದಿ: Mekedatu Padayatre: ಡಿಕೆಶಿ ಕೋವಿಡ್ ಟೆಸ್ಟ್ ಗೆ ನಿರಾಕರಣೆ; "ತಿಹಾರ್ ಜೈಲ್ ಆಯ್ತು ಈಗ ರಾಮನಗರ ಜೈಲು ನೋಡನ"!
‘ಹೋರಾಟದ ಕಿಚ್ಚು ಕಾಂಗ್ರೆಸ್(Congress) ಪಕ್ಷಕ್ಕೆ ರಕ್ತಗತವಾಗಿ ಬಂದಿದೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅಬ್ಬರಿಸಿದ್ದಾರೆ. ಆದರೆ ಒಂದು ವೈಜ್ಞಾನಿಕ ಸತ್ಯವನ್ನು ಕಾಂಗ್ರೆಸ್ಸಿಗರು ನೆನಪಿಟ್ಟುಕೊಳ್ಳಬೇಕು. ರಕ್ತಗತವಾಗಿ ಬರುವುದು ಖಾಯಿಲೆ ಮಾತ್ರ. ಹೋರಾಟ ರಕ್ತಗತವೋ ಮತ್ತೊಂದೋ, ಆದರೆ ಕೋವಿಡ್ ಮಾತ್ರ #ಸುಳ್ಳಿನಜಾತ್ರೆ ಮೂಲಕ ಹಬ್ಬುವುದು ನಿಶ್ಚಿತ’ ಅಂತಾ ಟೀಕಿಸಿದೆ.
ಹೋರಾಟದ ಕಿಚ್ಚು ಕಾಂಗ್ರೆಸ್ ಪಕ್ಷಕ್ಕೆ ರಕ್ತಗತವಾಗಿ ಬಂದಿದೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅಬ್ಬರಿಸಿದ್ದಾರೆ.
ಆದರೆ ಒಂದು ವೈಜ್ಞಾನಿಕ ಸತ್ಯವನ್ನು ಕಾಂಗ್ರೆಸ್ಸಿಗರು ನೆನಪಿಟ್ಟುಕೊಳ್ಳಬೇಕು.
ರಕ್ತಗತವಾಗಿ ಬರುವುದು ಖಾಯಿಲೆ ಮಾತ್ರ. ಹೋರಾಟ ರಕ್ತಗತವೋ ಮತ್ತೊಂದೋ, ಆದರೆ ಕೋವಿಡ್ ಮಾತ್ರ #ಸುಳ್ಳಿನಜಾತ್ರೆ ಮೂಲಕ ಹಬ್ಬುವುದು ನಿಶ್ಚಿತ.
— BJP Karnataka (@BJP4Karnataka) January 10, 2022
‘ಡಿಕೆಶಿಯವರೇ ಕೋವಿಡ್ ನಿಯಮ ಪಾಲನೆಯೊಂದಿಗೆ ಪಾದಯಾತ್ರೆ(Mekedatu Project) ಮಾಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೀರಿ. ಆದರೆ ಮಾಸ್ಕ್ ಧರಿಸದೇ ನೀವು ಪಾದಯಾತ್ರೆ ನಡೆಸಿದ್ದೀರಿ. ವಿಪರೀತ ಕೆಮ್ಮಿನ ನಡುವೆಯೂ ಕೋವಿಡ್ ಪರೀಕ್ಷೆಗೆ ನಿರಾಕರಿಸಿದ್ದೀರಿ. ನೆಲದ ಕಾನೂನಿನ ಬಗ್ಗೆ ನಿಮಗೆ ಕಿಂಚಿತ್ ಗೌರವ ಇದೆಯೇ?’ ಅಂತಾ ಪ್ರಶ್ನಿಸಿದೆ.
ಇದನ್ನೂ ಓದಿ: 'ಚಂಪಾ' ಇನ್ನಿಲ್ಲ: ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ನಿಧನ, ಸಿಎಂ ಸಂತಾಪ
ಮೇಕೆದಾಟು ವಿಚಾರದಲ್ಲಿ #ಸುಳ್ಳಿನಜಾತ್ರೆ ಹೊರಟಿರುವ @DKShivakumar ಅವರು ದೇಶದಲ್ಲಿ ಕೋವಿಡ್ ಇಲ್ಲ, ಎಲ್ಲವೂ ಬಿಜೆಪಿ ಸೃಷ್ಟಿ ಎನ್ನುತ್ತಿದ್ದಾರೆ.
ಆದರೆ ಅವರದೇ ಪಕ್ಷದ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಕೋವಿಡ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸವಾರಿಗೆ ಹೊರಟಿದೆ.
ಹಾಗಾದರೆ ಯಾರ ಮಾತು ಸರಿ?#ಕೋವಿಡ್ಯಾತ್ರೆ pic.twitter.com/VZDATXor4r
— BJP Karnataka (@BJP4Karnataka) January 10, 2022
‘ಮೇಕೆದಾಟು ವಿಚಾರದಲ್ಲಿ #ಸುಳ್ಳಿನಜಾತ್ರೆ ಹೊರಟಿರುವ ಡಿಕೆಶಿ(DK Sivakumar)ಯವರು ದೇಶದಲ್ಲಿ ಕೋವಿಡ್ ಇಲ್ಲ, ಎಲ್ಲವೂ ಬಿಜೆಪಿ ಸೃಷ್ಟಿ ಎನ್ನುತ್ತಿದ್ದಾರೆ. ಆದರೆ ಅವರದೇ ಪಕ್ಷದ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಕೋವಿಡ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸವಾರಿಗೆ ಹೊರಟಿದೆ. ಹಾಗಾದರೆ ಯಾರ ಮಾತು ಸರಿ? ಕೆಪಿಸಿಸಿ ಅಧ್ಯಕ್ಷ(KPCC President)ರೇ ಮನುಷ್ಯನಿಗೆ ದೇಹ ಸ್ವಾಸ್ಥ್ಯ ಹಾಗೂ ಚಿತ್ತ ಸ್ವಾಸ್ಥ್ಯ ಎರಡು ಮುಖ್ಯ. ಕೋವಿಡ್ ವಿಚಾರದಲ್ಲಿ ನೀವು ಚಿತ್ತ ಸ್ವಾಸ್ಥ್ಯ ಕಳೆದುಕೊಂಡಿದ್ದೀರೋ ಅಥವಾ ನಿಮ್ಮ ರಾಷ್ಟ್ರೀಯ ನಾಯಕರೋ?’ ಅಂತಾ ಬಿಜೆಪಿ ಕುಟುಕಿದೆ.
ಕೆಪಿಸಿಸಿ ಅಧ್ಯಕ್ಷ @DKShivakumar ಅವರೇ,
ಮನುಷ್ಯನಿಗೆ ದೇಹ ಸ್ವಾಸ್ಥ್ಯ ಹಾಗೂ ಚಿತ್ತ ಸ್ವಾಸ್ಥ್ಯ ಎರಡು ಮುಖ್ಯ.
ಕೋವಿಡ್ ವಿಚಾರದಲ್ಲಿ ನೀವು ಚಿತ್ತ ಸ್ವಾಸ್ಥ್ಯ ಕಳೆದುಕೊಂಡಿದ್ದೀರೋ ಅಥವಾ ನಿಮ್ಮ ರಾಷ್ಟ್ರೀಯ ನಾಯಕರೋ?#ಸುಳ್ಳಿನಜಾತ್ರೆ #ಕೋವಿಡ್ಯಾತ್ರೆ
— BJP Karnataka (@BJP4Karnataka) January 10, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.