Dream Girl Hema Malini ಕೆನ್ನೆಗೆ ಬೀದಿ ರಸ್ತೆಗಳನ್ನು ಹೋಲಿಕೆ ಮಾಡಿ ಅಚಾತುರ್ಯ ಮೆರೆದ ಮಹಾ ಮಂತ್ರಿ

Maharastra Road Like Hema Malini Cheeks - ಮಹಾರಾಷ್ಟ್ರದ ಜಳಗಾಂವ್ ಜಿಲ್ಲೆಯ ರಸ್ತೆಗಳನ್ನು ಬಾಲಿವುಡ್ ಖ್ಯಾತ ಹಿರಿಯ ನಟಿ ಹೇಮಾ ಮಾಲಿನಿ  ಕೆನ್ನೆಗೆ ಹೋಲಿಸಿ ಮಹಾರಾಷ್ಟ್ರದ ಸಚಿವ (Maharashtra Minister) ಹಾಗೂ ಶಿವಸೇನೆಯ ಹಿರಿಯ ಮುಖಂಡ ಗುಲಾಬ್ ರಾವ್ ಪಾಟೀಲ್ ವಿವಾದ ಸೃಷ್ಟಿ ಹುಟ್ಟುಹಾಕಿದ್ದಾರೆ. 

Written by - Nitin Tabib | Last Updated : Dec 19, 2021, 10:49 PM IST
  • ಮಹಾರಾಷ್ಟ್ರ ಸಚಿವರ ವಿವಾದಾತ್ಮಕ ಹೇಳಿಕೆ
  • ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಗೆ ಹೋಲಿಸಿದ ಸಚಿವರು
  • ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿ
Dream Girl Hema Malini ಕೆನ್ನೆಗೆ ಬೀದಿ ರಸ್ತೆಗಳನ್ನು ಹೋಲಿಕೆ ಮಾಡಿ ಅಚಾತುರ್ಯ ಮೆರೆದ ಮಹಾ ಮಂತ್ರಿ title=
Maharastra Road Like Hema Malini Cheeks (File Photo)

ಮುಂಬೈ: Hema Malini Cheeks - ಮಹಾರಾಷ್ಟ್ರದ (Maharashtra) ಜಳಗಾಂವ್ (Jalagaon) ಜಿಲ್ಲೆಯ ಬೀದಿಗಳನ್ನು ನಟಿ ಹೇಮಾಮಾಲಿನಿ ಕೆನ್ನೆಗೆ ಹೋಲಿಸಿ ಮಹಾರಾಷ್ಟ್ರದ ಸಚಿವ ಹಾಗೂ ಶಿವಸೇನೆಯ (Shiv Sena) ಹಿರಿಯ ಮುಖಂಡ ಗುಲಾಬ್ರಾವ್ ಪಾಟೀಲ್ (Gulabrao Patil) ಹೇಳಿಕೆ ವಿವಾದ ಹುಟ್ಟುಹಾಕಿದ್ದರೆ. ಅವರ ಈ ಹೇಳಿಕೆಗೆ ಕಠಿಣ ನಿಲುವು ತಳೆದಿರುವ ರಾಜ್ಯ ಮಹಿಳಾ ಆಯೋಗ (Maharashtra State Women Commission), ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಸೂಚಿಸಿದೆ.

ಎದುರಾಳಿಗಳಿಗೆ ಚಾಲೆಂಜ್ ಹಾಕಿದ ಸಚಿವರು
ಪಾಟೀಲ್ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಬೋಧವಾಡ್ ನಗರ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಸಚಿವರು ಈ ಆಪಾದಿತ ಟಿಪ್ಪಣಿ ನಡೆಸಿದ್ದಾರೆ. ಪಾಟೀಲ್ ಭಾಷಣದ ವೇಳೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಉತ್ತಮ ಗುಣಮಟ್ಟದ ರಸ್ತೆಗಳನ್ನು ನೋಡುವಂತೆ ವಿರೋಧಿಗಳಿಗೆ ಚಾಲೆಂಜ್ ಹಾಕಿದ್ದಾರೆ.

ಇದನ್ನೂ ಓದಿ-ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು: ಕೇವಲ 50 ಪೈಸೆಗೆ 1 ಕೀಮಿ ಮೈಲೇಜ್ ನೀಡುತ್ತೆ

ಸಚಿವರ ವಿವಾದಾತ್ಮಕ ಹೇಳಿಕೆ
ಜಲಗಾಂವ್ ಕ್ಷೇತ್ರದಿಂದ ಹಲವಾರು ವರ್ಷಗಳಿಂದ ಶಾಸಕರಾಗಿದ್ದ ಬಿಜೆಪಿಯ ಮಾಜಿ ನಾಯಕ ಏಕನಾಥ ಖಾಡ್ಸೆ ವಿರುದ್ಧ ಮುಸುಕಿನ ಗುದ್ದಾಟ ನಡೆಸುತ್ತಿರುವ ರಾಜ್ಯ ನೀರು ಸರಬರಾಜು ಸಚಿವ ಪಾಟೀಲ್, "30 ವರ್ಷಗಳಿಂದ ಶಾಸಕರಾಗಿದ್ದವರು ನನ್ನ ವಿಧಾನಸಭಾ ಕ್ಷೇತ್ರಕ್ಕೆ ಬಂದು ರಸ್ತೆಗಳನ್ನು ನೋಡಬೇಕು" ಎಂದು ಹೇಳಿದ್ದಾರೆ. ಅವು  ಹೇಮಾ ಮಾಲಿನಿಯ ಕೆನ್ನೆಯಂತಿಲ್ಲದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ-Indian Railways Rule: ಭಾರತೀಯ ರೇಲ್ವೆ ಪ್ರಯಾಣಿಕರಿಗಾಗಿ ಇರುವ ಈ ನಿಯಮ ನಿಮಗೆ ತಿಳಿದಿದೆಯಾ?

ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಹಿಳಾ ಆಯೋಗ
ಸಚಿವ ಪಾಟೀಲ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್, ಪಾಟೀಲ್ ಅವರು ತಮ್ಮ ವಿವಾದಾತ್ಮಕ ಟಿಪ್ಪಣಿಗೆ ಕ್ಷಮೆಯಾಚಿಸಬೇಕು ಎಂದಿದ್ದಾರೆ. ಇಲ್ಲದೆ ಹೋದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-ಕತ್ತೆ ಹಾಲು ಏಕೆ ದುಬಾರಿ ಗೊತ್ತಾ?: ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ಇದರ ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News