ಇದು ಕಪಿ ಚೇಷ್ಟೆಯಲ್ಲ ದ್ವೇಷ.! ಎತ್ತರದಿಂದ ಎಸೆದು 250 ಕ್ಕೂ ಹೆಚ್ಚು ನಾಯಿಗಳನ್ನು ಕೊಂದ ಕೋತಿಗಳು ಸೆರೆ

monkeys killed dogs: ಮಹಾರಾಷ್ಟ್ರದ ಬೀಡ್‌ನಲ್ಲಿ 250 ಕ್ಕೂ ಹೆಚ್ಚು ನಾಯಿಗಳನ್ನು ಕೊಂದ ಎರಡು ಕೋತಿಗಳನ್ನು ಅರಣ್ಯ ಇಲಾಖೆ ಶನಿವಾರ ಸೆರೆಹಿಡಿದಿದೆ. 

Edited by - Zee Kannada News Desk | Last Updated : Dec 19, 2021, 03:34 PM IST
  • ಮಹಾರಾಷ್ಟ್ರದ ಬೀಡ್‌ನಲ್ಲಿ 250 ಕ್ಕೂ ಹೆಚ್ಚು ನಾಯಿಗಳನ್ನು ಕೊಂದ ಕೋತಿಗಳು
  • ಎರಡು ಕೋತಿಗಳನ್ನು ಶನಿವಾರ ಸೆರೆಹಿಡಿದ ಅರಣ್ಯ ಇಲಾಖೆ
  • ಕೋತಿಯ ಮರಿಯನ್ನು ಕೊಂದ ಬಳಿಕ ಈ ರೀತಿ ಪ್ರತೀಕಾರ ತೀರಿಸಿಕೊಂಡ ಮಂಗಗಳು
ಇದು ಕಪಿ ಚೇಷ್ಟೆಯಲ್ಲ ದ್ವೇಷ.! ಎತ್ತರದಿಂದ ಎಸೆದು 250 ಕ್ಕೂ ಹೆಚ್ಚು ನಾಯಿಗಳನ್ನು ಕೊಂದ ಕೋತಿಗಳು ಸೆರೆ  title=
ಮಂಗಗಳು

ಬೀಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಬೀಡ್‌ನಲ್ಲಿ 250 ಕ್ಕೂ ಹೆಚ್ಚು ನಾಯಿಗಳನ್ನು ಕೊಂದ (monkeys killed dogs) ಎರಡು ಕೋತಿಗಳನ್ನು ಅರಣ್ಯ ಇಲಾಖೆ ಶನಿವಾರ ಸೆರೆಹಿಡಿದಿದೆ. 

ಕೆಲವು ನಾಯಿಗಳು ಕೋತಿಯ ಮರಿಯನ್ನು ಕೊಂದ ಬಳಿಕ ಈ ರೀತಿ ಪ್ರತೀಕಾರ ತೀರಿಸಿಕೊಂಡಿವೆ ಎಂದು ನಂಬಲಾಗಿದೆ. ಈ ಮಂಗಗಳನ್ನು ಸಮೀಪದ ಕಾಡಿನಲ್ಲಿ ಬಿಡಲಾಗಿದೆ. 

ಬೀಡ್ ಅರಣ್ಯಾಧಿಕಾರಿ ಸಚಿನ್ ಕಾಂಡ್ ಮಾತನಾಡಿ, ನಾಯಿಗಳ ಹತ್ಯೆಯಲ್ಲಿ ತೊಡಗಿದ್ದ ಎರಡು ಕೋತಿಗಳನ್ನು ನಾಗ್ಪುರ ಅರಣ್ಯ ಇಲಾಖೆಯ ತಂಡ ಬೀಡ್ ನಲ್ಲಿ ಸೆರೆ ಹಿಡಿದಿದ್ದು, ಎರಡೂ ಕೋತಿಗಳನ್ನು ಸಮೀಪದ ಅರಣ್ಯಕ್ಕೆ ಬಿಡಲು ನಾಗ್ಪುರಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

2 monkeys involved in killing of over 250 dogs captured

ಗ್ರಾಮಸ್ಥರ ಪ್ರಕಾರ, ಲಾವೂಲ್ ಗ್ರಾಮದಲ್ಲಿ ಮಂಗಗಳು ತಮ್ಮ ಮಕ್ಕಳನ್ನು ಸಾಕುತ್ತಿದ್ದವು. ಕಳೆದ ಎರಡು-ಮೂರು ತಿಂಗಳುಗಳಲ್ಲಿ, ಈ ಪ್ರದೇಶದಲ್ಲಿ ಅಲೆದಾಡುವ ಕೋತಿಗಳು ನಾಯಿಮರಿಗಳನ್ನು ಹಿಡಿದು ಸಾಕಷ್ಟು ಎತ್ತರವಿರುವ ಸ್ಥಳಕ್ಕೆ ಕೊಂಡೊಯ್ದು ಅಲ್ಲಿಂದ ಎಸೆಯುವ ಘಟನೆಗಳು ನಡೆದಿವೆ. ಇದುವರೆಗೆ ಕನಿಷ್ಠ 250 ನಾಯಿಗಳನ್ನು (monkeys involved in killing of over 250 dogs) ಕೊಂದಿವೆ.

ಮಂಗಗಳು ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನೂ ಎತ್ತಿಕೊಂಡು ಬರಲಾರಂಭಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಕೋತಿಗಳನ್ನು ಸೆರೆ ಹಿಡಿದಿದ್ದಾರೆ.  

ಇದನ್ನೂ ಓದಿ: WATCH: ರಣವೀರ್​ ಸಿಂಗ್​​, ಕ್ರಿಕೆಟರ್​ ಶ್ರೀಕಾಂತ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News