ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಜ್ರ, ಬಸ್ ಪಾಸ್ ದರ ಕಡಿತ, ಪರಿಷ್ಕೃತ ಟಿಕೆಟ್ ರೇಟ್ ಎಷ್ಟು ಗೊತ್ತೇ?

BMTC slashes bus fares: ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ನಗರದಲ್ಲಿ ಹವಾನಿಯಂತ್ರಿತ (ವಜ್ರ) ಸೇವೆಗಳ ಮಧ್ಯಮ ಮತ್ತು ದೂರದ ಪ್ರಯಾಣ ದರಗಳು ಮತ್ತು ಬಸ್ ಪಾಸ್ ದರಗಳನ್ನು ಬಿಎಂಟಿಸಿ (BMTC) ಕಡಿಮೆ ಮಾಡಿದೆ. 

Edited by - Zee Kannada News Desk | Last Updated : Dec 16, 2021, 12:29 PM IST
  • ಹವಾನಿಯಂತ್ರಿತ (ವಜ್ರ) ಸೇವೆಗಳ ಪ್ರಯಾಣ ದರಗಳು ಮತ್ತು ಬಸ್ ಪಾಸ್ ದರಗಳನ್ನು ಬಿಎಂಟಿಸಿ ಕಡಿಮೆ ಮಾಡಿದೆ.
  • ವಜ್ರ ಹವಾನಿಯಂತ್ರಿತ ಸಾರಿಗೆ ಬಸ್​​​​ಗಳ ಪ್ರಯಾಣ ದರ, ದಿನದ ಪಾಸ್ ಮತ್ತು ಮಾಸಿಕ ಪಾಸ್​​​ ಪರಿಷ್ಕೃತ ದರ ಜಾರಿ ಮಾಡಿದೆ.
  • ಈ ದರಗಳನ್ನು ಡಿಸೆಂಬರ್ 17 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಜ್ರ, ಬಸ್ ಪಾಸ್ ದರ ಕಡಿತ, ಪರಿಷ್ಕೃತ ಟಿಕೆಟ್ ರೇಟ್ ಎಷ್ಟು ಗೊತ್ತೇ? title=
ಸಾರಿಗೆ ಬಸ್​​​​ಗಳ ಪ್ರಯಾಣ ದರ

ಬೆಂಗಳೂರು:  ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ನಗರದಲ್ಲಿ ಹವಾನಿಯಂತ್ರಿತ (ವಜ್ರ) ಸೇವೆಗಳ ಮಧ್ಯಮ ಮತ್ತು ದೂರದ ಪ್ರಯಾಣ ದರಗಳು ಮತ್ತು ಬಸ್ ಪಾಸ್ ದರಗಳನ್ನು ಬಿಎಂಟಿಸಿ (BMTC) ಕಡಿಮೆ ಮಾಡಿದೆ. ಆದಾಗ್ಯೂ, ರಿಯಾಯಿತಿಯು ವಿಮಾನ ನಿಲ್ದಾಣದ ಬಸ್‌ಗಳಿಗೆ ಅನ್ವಯಿಸುವುದಿಲ್ಲ.

ವಜ್ರ ಸೇವೆಗಳ ಮೊದಲ ಮೂರು ಹಂತಗಳು, 6 ಕಿ.ಮೀ ವರೆಗೆ ಒಂದೇ ಆಗಿರುತ್ತದೆ. ಹಂತ 4 (8 ಕಿಮೀ) ಮತ್ತು ಆಚೆಗೆ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣದ ದೂರವನ್ನು ಅವಲಂಬಿಸಿ ರೂ 5 ರಿಂದ ರೂ 40 ರವರೆಗಿನ ಕಡಿತವನ್ನು (BMTC slashes bus fares) ಪಡೆಯುತ್ತಾರೆ. 

ವಜ್ರ ಹವಾನಿಯಂತ್ರಿತ ಸಾರಿಗೆ ಬಸ್​​​​ಗಳ ಪ್ರಯಾಣ ದರ, ದಿನದ ಪಾಸ್ ಮತ್ತು ಮಾಸಿಕ ಪಾಸ್​​​ ದರಗಳನ್ನು ಕಡಿಮೆಗೊಳಿಸಿ ಪರಿಷ್ಕೃತ ದರ ಜಾರಿ ಮಾಡಿದೆ.

ವಜ್ರ ದಿನದ ಪಾಸ್ ಬೆಲೆ 120 ರೂ.ನಿಂದ 100 ರೂ.ಗೆ ಇಳಿಕೆಯಾಗಿದ್ದು, ಮಾಸಿಕ ಪಾಸ್ ದರವು 2,000 ರೂ.ನಿಂದ 1,500 ರೂ.ಗೆ ದೊಡ್ಡ ಕಡಿತವನ್ನು ಕಂಡಿದೆ.

ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಜ್ರ ಹವಾನಿಯಂತ್ರಿತ ಸಾರಿಗೆಗಳ ಪ್ರಯಾಣ ದರ ಹಾಗೂ ದೈನಿಕ ಪಾಸಿನ ದರಗಳನ್ನು ಡಿಸೆಂಬರ್ 17 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.

 

 

ಹೊಸ ಸೇವೆಗಳು:

ಕಳೆದ ಎರಡು ತಿಂಗಳುಗಳಲ್ಲಿ, ಅಧಿಕಾರಿಗಳು 83 ಸೇವೆಗಳನ್ನು ಪುನರಾರಂಭಿಸಿದ್ದಾರೆ. ಇದು ಸಾಂಕ್ರಾಮಿಕ ರೋಗದ ಮೊದಲು ಕಾರ್ಯನಿರ್ವಹಿಸುತ್ತಿದ್ದ 650 ಕ್ಕೂ ಹೆಚ್ಚು ದೈನಂದಿನ ಸೇವೆಗಳ ಒಂದು ಭಾಗವಾಗಿದೆ.

ಶುಕ್ರವಾರದಿಂದ 12 ಮಾರ್ಗಗಳಲ್ಲಿ 90 ಹೆಚ್ಚುವರಿ ಎಸಿ ಬಸ್ ಸೇವೆಗಳನ್ನು ಪರಿಚಯಿಸಲಾಗುವುದು, ಒಟ್ಟು ಸೇವೆಗಳ ಸಂಖ್ಯೆಯನ್ನು 173 ಕ್ಕೆ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ ದರ ಕಡಿತವನ್ನು ಸ್ವಾಗತಿಸಿದೆ ಮತ್ತು ಅಧಿಕಾರಿಗಳು ಸಾಮಾನ್ಯ ಬಸ್‌ಗಳಿಗೂ ಇದೇ ವಿಧಾನವನ್ನು ಅನುಸರಿಸಬೇಕು ಎಂದು ಮನವಿ ಮಾಡಿದೆ..

ಇನ್ನು ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ಪ್ರಯಾಣ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತ ನಿಗಮ ತಿಳಿಸಿದೆ.‌ 

ಇದನ್ನೂ ಓದಿ: PHOTOS: ಇವು ಪ್ರಪಂಚದ 7 ನಿಗೂಢ ಸ್ಥಳಗಳು.. ಹೊರಗಿನವರ ಪ್ರವೇಶ ಇಲ್ಲಿ ನಿಷಿದ್ಧ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News