/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಇಂದು ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್(Aadhaar Card Update) ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳ ಪ್ರಯೋಜನ, ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡುವುದರಿಂದ ಹಿಡಿದು ಮಕ್ಕಳ ಶಾಲಾ ಪ್ರವೇಶ ಮತ್ತು ಸರ್ಕಾರಿ ಪಡಿತರ ಅಂಗಡಿಯವರೆಗೆ ಎಲ್ಲಾ ಕಡೆ ಆಧಾರ್ ಕಡ್ಡಾಯವಾಗಿದೆ. ನೀವು ಆಧಾರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಬಯಸಿದರೆ ಅದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕು.

ಆಧಾರ್ ಕಾರ್ಡ್‌ನಲ್ಲಿ ಈ ರೀತಿಯ ಬದಲಾವಣೆ ಮಾಡಿ

ಆದರೆ ಈಗ ನೀವೇ ಮನೆಯಲ್ಲಿ ಕುಳಿತು ನಿಮ್ಮ ಆಧಾರ್‌ನಲ್ಲಿ ಕೆಲವು ಬದಲಾವಣೆ(Changes In Aadhaar)ಗಳನ್ನು ಮಾಡಬಹುದು. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಜನ್ಮ ದಿನಾಂಕವನ್ನು ನೀವು ಸುಲಭವಾಗಿ ಬದಲಾಯಿಸಬಹುದು(Self Changes In Aadhaar Card). ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್ uidai.gov.in ಪ್ರಕಾರ ನಿಮ್ಮ ಆಧಾರ್‌ನಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲು ಬಯಸಿದರೆ, ನೀವು ಇದಕ್ಕೆ 2 ಅವಕಾಶಗಳನ್ನು ಪಡೆಯುತ್ತೀರಿ. ಆದರೆ ಇದರಲ್ಲಿ ಕೆಲವು ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.

ಇದನ್ನೂ ಓದಿ: Ayushman Card: ಆಯುಷ್ಮಾನ್ ಭಾರತ್ ಕಾರ್ಡ್‌ನಲ್ಲಿ ಹಲವು ಸೌಲಭ್ಯಗಳು! ಸುಲಭವಾಗಿ ಡೌನ್‌ಲೋಡ್ ಮಾಡಿ

ಆಧಾರ್‌ನಲ್ಲಿ ಎಷ್ಟು ಬಾರಿ ತಿದ್ದುಪಡಿ ಮಾಡಬಹುದು?

1) ಹೆಸರು: 2 ಬಾರಿ ಮಾತ್ರ ಬದಲಾಯಿಸಬಹುದು.

2) ಹುಟ್ಟಿದ ದಿನಾಂಕ: ತಿದ್ದುಪಡಿಯನ್ನು ಒಮ್ಮೆ ಮಾತ್ರ ಮಾಡಬಹುದು.

3) ಲಿಂಗ: ಇದರಲ್ಲಿಯೂ ನೀವು ಒಮ್ಮೆ ಮಾತ್ರ ಬದಲಾವಣೆಗಳನ್ನು ಮಾಡಬಹುದು.

ಈ ಬದಲಾವಣೆಗಳಿಗೆ ಯಾವುದೇ ಮಿತಿಯಿಲ್ಲ

ವಿಳಾಸ: ಇದಕ್ಕೆ ಯಾವುದೇ ಮಿತಿಯಿಲ್ಲ, ಏಕೆಂದರೆ ಜನರು ಮನೆ ಅಥವಾ ಸ್ಥಳ ಬದಲಾಯಿಸಿದ ನಂತರ ವಿಳಾಸವನ್ನು ಬದಲಾಯಿಸುತ್ತಾರೆ. ಇದು ಸಹ ತುಂಬಾ ಅಗತ್ಯವಾಗಿದೆ.

ಫೋಟೋ: ಫೋಟೋ ಸ್ಪಷ್ಟವಾಗಿಲ್ಲದಿದ್ದರೆ ಅಥವಾ ಇನ್ನಾವುದೋ ಕಾರಣಕ್ಕೆ ಎಷ್ಟು ಬಾರಿ ಬೇಕಾದರೂ ಸರಿಪಡಿಸಬಹುದು.

ಮೊಬೈಲ್ ಸಂಖ್ಯೆ: ಇದರಲ್ಲಿ ಯಾವುದೇ ಮಿತಿಯಿಲ್ಲ. ನೀವು ಎಷ್ಟು ಬಾರಿ ಬೇಕಾದರೂ ತಿದ್ದುಪಡಿ ಮಾಡಬಹುದು.

ಇದನ್ನೂ ಓದಿ: RBI: ಈ 2 ಬ್ಯಾಂಕುಗಳ ವಿರುದ್ಧ ಆರ್‌ಬಿಐ ಕ್ರಮ, 2.10 ಕೋಟಿ ರೂ. ದಂಡ..!

ಮನೆಯಲ್ಲೇ ಕುಳಿತು ಈ ರೀತಿ DOB ಅಪ್‌ಡೇಟ್ ಮಾಡಿ

1) ಮೊದಲನೆಯದಾಗಿ ನೀವು ಅಧಿಕೃತ ವೆಬ್‌ಸೈಟ್ uidai.gov.in ಗೆ ಹೋಗಬೇಕು.

2) ಇಲ್ಲಿ ನೀವು ‘My Aadhaar’ ವಿಭಾಗಕ್ಕೆ ಹೋಗಬೇಕು ಮತ್ತು ‘Update Your Aadhaar’ಗೆ ಹೋಗಬೇಕು.

3) ಇದರ ನಂತರ ‘ಅಪ್‌ಡೇಟ್ ಯುವರ್ ಡೆಮೊಗ್ರಾಫಿಕ್ಸ್ ಡೇಟಾ ಆನ್‌ಲೈನ್’ ಅನ್ನು ಕ್ಲಿಕ್ ಮಾಡಿ.

4) ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು UIDAIನ ಸ್ವಯಂ ಸೇವಾ ನವೀಕರಣ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್ ssup.uidai.gov.in ಅನ್ನು ತಲುಪುತ್ತೀರಿ.

5) ಇದರ ಹೊರತಾಗಿ ನೀವು ನೇರವಾಗಿ https://ssup.uidai.gov.in/ssup/ ಗೆ ಭೇಟಿ ನೀಡಬಹುದು.

6) ಈಗ ಇಲ್ಲಿ ನೀವು ‘ಪ್ರೊಸೀಡ್ ಟು ಅಪ್‌ಡೇಟ್ ಆಧಾರ್’ ಅನ್ನು ಕ್ಲಿಕ್ ಮಾಡಿ.

7) ಹೊಸದಾಗಿ ತೆರೆಯಲಾದ ಪುಟದಲ್ಲಿ ನೀವು 12 ಅಂಕಿಗಳ ಆಧಾರ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು

8) ಇದರ ನಂತರ ಸ್ಕ್ರೀನ್ ಮೇಲೆ ನೀಡಲಾದ ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು Send OTP ಕ್ಲಿಕ್ ಮಾಡಿ. ಇದರ ನಂತರ OTP ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ತಲುಪುತ್ತದೆ.

9) ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಿರ್ದಿಷ್ಟ ಜಾಗದಲ್ಲಿ ನಮೂದಿಸುವ ಮೂಲಕ Submit ಮಾಡಿ.

10) ಈಗ ಹೊಸದಾಗಿ ತೆರೆದಿರುವ ಪುಟದಲ್ಲಿ ನಿಮಗೆ 2 ಆಯ್ಕೆಗಳು ಸಿಗುತ್ತವೆ. ಪೋಷಕ ಡಾಕ್ಯುಮೆಂಟ್ ಪುರಾವೆ(Updation of Demographic Details)ಯೊಂದಿಗೆ ವಿಳಾಸ ಸೇರಿದಂತೆ ಜನಸಂಖ್ಯಾ ವಿವರಗಳ ನವೀಕರಣ ಮತ್ತು ವಿಳಾಸ ಮಾನ್ಯತೆ ಪತ್ರದ ಮೂಲಕ ವಿಳಾಸ ನವೀಕರಣ ಕ್ಲಿಕ್ ಮಾಡಿ.

11) ಯಾವುದೇ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸವನ್ನು ಡಾಕ್ಯುಮೆಂಟ್ ಪುರಾವೆಯೊಂದಿಗೆ ನವೀಕರಿಸಲು, ‘ಜನಸಂಖ್ಯಾಶಾಸ್ತ್ರದ ಡೇಟಾವನ್ನು ನವೀಕರಿಸಿ’ ಕ್ಲಿಕ್ ಮಾಡಿ.

12) ಇದರ ನಂತರ ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಬೇಕು.

13) ಎಲ್ಲಾ ವಿವರಗಳನ್ನು ನಮೂದಿಸಿದ ನಂತರ ಪರಿಶೀಲನೆ OTP ಅನ್ನು ನಿಮ್ಮ ಸಂಖ್ಯೆಗೆ ಕಳುಹಿಸಲಾಗುತ್ತದೆ ಮತ್ತು ನೀವು ಅದನ್ನು ಪರಿಶೀಲಿಸಬೇಕಾಗುತ್ತದೆ. ಅದರ ನಂತರ  Save ಅನ್ನು ಬದಲಾಯಿಸಿ.

ಹೀಗೆ ನೀವು ಸುಲಭವಾಗಿ ಮನೆಯಲ್ಲೇ ಕುಳಿತು ಈ ರೀತಿ DOB ಅಪ್‌ಡೇಟ್ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Aadhaar: Change your DOB in Aadhaar card with just one link, here's the easiest way
News Source: 
Home Title: 

Aadhaar Card Update: ಕೇವಲ ಒಂದು ಲಿಂಕ್‌ನಲ್ಲಿ ನಿಮ್ಮ DOB ಬದಲಾಯಿಸಿ, ಇಲ್ಲಿದೆ ಸುಲಭ ಮಾರ್ಗ

Aadhaar Card Update: ಕೇವಲ ಒಂದು ಲಿಂಕ್‌ನಲ್ಲಿ ನಿಮ್ಮ DOB ಬದಲಾಯಿಸಿ, ಇಲ್ಲಿದೆ ಸುಲಭ ಮಾರ್ಗ
Caption: 
ಮನೆಯಲ್ಲೇ ಕುಳಿತು DOB ಅಪ್‌ಡೇಟ್ ಮಾಡಿ
Yes
Is Blog?: 
No
Tags: 
Facebook Instant Article: 
Yes
Highlights: 

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮಿಷಗಳಲ್ಲಿ DOB ಯನ್ನು ಬದಲಾಯಿಸಿ

ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಲು ಇಲ್ಲಿದೆ ಸುಲಭವಾದ ದಾರಿ

ಮನೆಯಲ್ಲಿಯೇ ಕುಳಿತು ಈಗ ನೀವು ಆಧಾರ್‌ನಲ್ಲಿ ತಿದ್ದುಪಡಿ ಮಾಡಬಹುದು

Mobile Title: 
Aadhaar Card Update: ಕೇವಲ ಒಂದು ಲಿಂಕ್‌ನಲ್ಲಿ ನಿಮ್ಮ DOB ಬದಲಾಯಿಸಿ, ಇಲ್ಲಿದೆ ಸುಲಭ ಮಾರ್ಗ
Puttaraj K Alur
Publish Later: 
No
Publish At: 
Wednesday, December 15, 2021 - 21:33
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No