ನವದೆಹಲಿ: ಕೇತುವಿನ ರಾಶಿಯ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಮುಖ್ಯವಾಗಿದೆ. ಕೇತುವಿನ ರಾಶಿಯ ಬದಲಾವಣೆಯು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. 2022ರ ಏಪ್ರಿಲ್ 12 ರಂದು ಕೇತು ಸಂಕ್ರಮಣ ನಡೆಯಲಿದೆ. ಕೇತುವಿನ ಈ ಸಂಕ್ರಮವು ತುಲಾ ರಾಶಿಯಲ್ಲಿ ಇರುತ್ತದೆ. ಇದಕ್ಕೂ ಮುನ್ನ ಕೇತು ವೃಶ್ಚಿಕ ರಾಶಿಯಲ್ಲಿ ಉಳಿಯುತ್ತಾನೆ. ವಿವಿಧ ರಾಶಿಯವರ ಮೇಲೆ ಕೇತುವಿನ ಈ ಸಂಕ್ರಮದ ಪರಿಣಾಮ(Ketu Transit 2022) ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿರಿ.
ಮೇಷ ರಾಶಿ: ಶಾರೀರಿಕ ಸಮಸ್ಯೆಗಳಿರುತ್ತವೆ. ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಪ್ರಗತಿ ಇರುತ್ತದೆ. ಜೀವನ ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು.
ವೃಷಭ ರಾಶಿ: ನೀವು ಕೆಲವು ಪಿತೂರಿಗಳಿಗೆ ಬಲಿಯಾಗಬಹುದು. ಆರ್ಥಿಕ ಸಂಘರ್ಷ ಹೆಚ್ಚಾಗಲಿದೆ. ನೀವು ಚಿಂತೆಗಳನ್ನು ಸಹ ಅನುಭವಿಸಬಹುದು. ನೀವು ಹೊಟ್ಟೆ ಮತ್ತು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು.
ಮಿಥುನ ರಾಶಿ: ಮಕ್ಕಳೊಂದಿಗೆ ಸಂಬಂಧ ಹದಗೆಡಬಹುದು. ಹಣದ ಖರ್ಚು ಹೆಚ್ಚಾಗಲಿದೆ. ನಿಮ್ಮ ಸಂಗಾತಿಯ ಬಗ್ಗೆ ಸಾಧ್ಯವಾದಷ್ಟು ಪ್ರೀತಿ ಮತ್ತು ಕಾಳಜಿಯನ್ನು ತೋರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ಸಾಮರಸ್ಯದ ಸಂಬಂಧದಲ್ಲಿ ಪ್ರೀತಿಯು ಹೆಚ್ಚು ಬೇಕಾಗಬಹುದು. ಇದರ ಹೊರತಾಗಿ ನಿಮ್ಮ ಕಲ್ಪನಾ ಸಾಮರ್ಥ್ಯವು ಕಡಿಮೆಯಾಗಿರಬಹುದು ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಲ್ಲಿ ನೀವು ಕಡಿಮೆ ಆಸಕ್ತಿ ಹೊಂದಿರುತ್ತೀರಿ.
ಇದನ್ನೂ ಓದಿ: Kharmasದಲ್ಲಿ ಮೃತ್ಯು ಸಂಭವಿಸುವುದು ಅಶುಭ ಯಾಕೆ? ಪಿತಾಮಹ ಭೀಷ್ಮ ಕೂಡ ತನ್ನ ದೇಹ ತ್ಯಜ್ಯಿಸಿರಲಿಲ್ಲ
ಕರ್ಕ ರಾಶಿ: ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಇದಲ್ಲದೇ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ದೈನಂದಿನ ಆದಾಯ ಹೆಚ್ಚಾಗುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಸಮಸ್ಯೆಗಳು ಹೆಚ್ಚಾಗುತ್ತವೆ.
ಸಿಂಹ ರಾಶಿ: ಕುಟುಂಬದಲ್ಲಿ ಒತ್ತಡದ ವಾತಾವರಣವಿರುತ್ತದೆ. ಕೌಟುಂಬಿಕ ಕಲಹ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಆರ್ಥಿಕವಾಗಿ ನೀವು ಸದೃಢರಾಗುತ್ತೀರಿ. ನಿಮ್ಮ ಯಾವುದೇ ಆಸ್ತಿ ಮಾರಾಟ ಮಾಡುವ ಮೂಲಕ ಉತ್ತಮ ಹಣ ಗಳಿಸಬಹುದು. ನೀವು ಒಡಹುಟ್ಟಿದವರ ಜೊತೆ ಪ್ರವಾಸಕ್ಕೆ ಹೋಗಬಹುದು.
ಕನ್ಯಾ ರಾಶಿ: ಉದ್ಯೋಗದ ಸ್ಥಳದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸಂಪತ್ತು ವೃದ್ಧಿಗೆ ಹಲವು ಅವಕಾಶಗಳು ದೊರೆಯಲಿವೆ. ಒಡಹುಟ್ಟಿದವರು ಕುಟುಂಬದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಹೊಸ ವರ್ಷದಲ್ಲಿ ಜಾಗರೂಕರಾಗಿರಿ. ವಿಶೇಷವಾಗಿ ಸಂಭಾಷಣೆಯಲ್ಲಿ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕು. ಸಂಬಂಧಗಳಲ್ಲಿ ಅಂತರ ಹೆಚ್ಚಾಗಬಹುದು.
ತುಲಾ ರಾಶಿ: ಹೊಸ ವರ್ಷದ ಆರಂಭದಲ್ಲಿ ಕುಟುಂಬದಲ್ಲಿ ಉದ್ವಿಗ್ನ ವಾತಾವರಣವಿರುತ್ತದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ವಿದೇಶಿ ಮೂಲಗಳಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಆಸ್ತಿಗೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ: ಹಣ ಸಂಗ್ರಹಣೆಯಲ್ಲಿ ತೊಂದರೆ ಉಂಟಾಗಲಿದೆ. ಇದರಿಂದ ಖರ್ಚು ಹೆಚ್ಚಾಗಲಿದೆ. ಯಾವುದೇ ಯೋಜನೆಯಲ್ಲಿ ಯಶಸ್ವಿಯಾಗಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಇದರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.
ಇದನ್ನೂ ಓದಿ: ಈ ನಕ್ಷತ್ರದಲ್ಲಿ ಹುಟ್ಟಿದ ಮಗುವಿನ ಮುಖವನ್ನು ತಂದೆ ಕೂಡ ನೋಡಬಾರದಂತೆ... ಏಕೆ ಗೊತ್ತಾ?
ಧನು ರಾಶಿ: ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಸಂಚಾರದ ಸಮಯದಲ್ಲಿ ಸಂಗಾತಿಯ ಆರೋಗ್ಯವು ಹದಗೆಡಬಹುದು. ನೀವು ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ಕುಟುಂಬದಲ್ಲಿ ಹಣದ ಖರ್ಚು ಹೆಚ್ಚಾಗುತ್ತದೆ.
ಮಕರ ರಾಶಿ: ಸಂಚಾರದ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಇದರಿಂದ ಆದಾಯದಲ್ಲಿ ದಿಢೀರ್ ಏರಿಕೆ ಕಂಡುಬರುವುದು. ಶತ್ರುಗಳನ್ನು ದೂರ ಮಾಡಬಹುದು. ವ್ಯಾಪಾರದಿಂದ ಲಾಭದ ಸಾಧ್ಯತೆಯೂ ಇದೆ. ಕೆಲಸ ಅಥವಾ ವೃತ್ತಿಪರವಾಗಿ ನಿಮಗೆ ಅನುಕೂಲಕರ ವಾತಾವರಣವಿರಲಿದೆ.
ಕುಂಭ ರಾಶಿ: ಉದ್ಯೋಗದಲ್ಲಿ ಏರಿಳಿತದ ಸೂಚನೆ ಇದೆ. ಆದಾಗ್ಯೂ ನಿಮ್ಮ ಸಾಮರ್ಥ್ಯದೊಂದಿಗೆ ನೀವು ಸಂದರ್ಭಗಳನ್ನು ಸಮತೋಲನಗೊಳಿಸುತ್ತೀರಿ. ವೈವಾಹಿಕ ಜೀವನ ಉತ್ತಮವಾಗಿರಲಿದೆ ಜೊತೆಗೆ ಮಕ್ಕಳು ಕೂಡಿಕೊಳ್ಳುತ್ತಾರೆ. ಸಂಪತ್ತು ಮತ್ತು ದೈನಂದಿನ ಆದಾಯ ಹೆಚ್ಚಾಗುತ್ತದೆ.
ಮೀನ ರಾಶಿ: ಕೆಲವು ಕಾರಣಗಳಿಂದ ನೀವು ಕುಟುಂಬದಿಂದ ದೂರ ಹೋಗಬೇಕಾಗಬಹುದು. ದೂರದ ಪ್ರಯಾಣ ಕೈಗೊಳ್ಳಬಹುದು. ಆರ್ಥಿಕ ಸ್ಥಿತಿ-ಗತಿ ಸಾಮಾನ್ಯವಾಗಿರುತ್ತದೆ. ನೀವು ಆಧ್ಯಾತ್ಮಿಕ ಪ್ರವಾಸಕ್ಕೆ ಹೋಗಲು ಯೋಚಿಸಬಹುದು. ವರ್ಷದ ಮಧ್ಯದಲ್ಲಿ ಹಠಾತ್ ನಷ್ಟ ಉಂಟಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.