Indian Railways: 12ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ನೌಕರಿಯ ಅವಕಾಶ, ಇಂದೇ ಅರ್ಜಿ ಸಲ್ಲಿಸಿ

Railway Recruitment 2021: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Railway Jobs Online Application Form) 27 ಡಿಸೆಂಬರ್ 2021 ಆಗಿದೆ. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾದ ಅಧಿಸೂಚನೆಯನ್ನು ತಪ್ಪದೆ ಓದಬೇಕು.

Written by - Nitin Tabib | Last Updated : Dec 12, 2021, 02:58 PM IST
  • 12ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ನೌಕರಿ.
  • ಡಿಸೆಂಬರ್ 27, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
  • ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೆತಿ ನೀಡಬೇಕು
Indian Railways: 12ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ನೌಕರಿಯ ಅವಕಾಶ, ಇಂದೇ ಅರ್ಜಿ ಸಲ್ಲಿಸಿ title=
Indian Railway Recruitment 2021 (File Photo)

Indian Railway Recruitment 2021: ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿಯೊಂದು ಪ್ರಕಟವಾಗಿದೆ. ಸೆಂಟ್ರಲ್ ರೈಲ್ವೇಯಲ್ಲಿ ಖಾಲಿ ಹುದ್ದೆಯನ್ನು (Government Job) ಕ್ರೀಡಾ ಕೋಟಾದ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸೆಂಟ್ರಲ್ ರೇಲ್ವೆ (Central Railway) ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrccr.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 21 ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ಡಿಸೆಂಬರ್ 2021 ಆಗಿದೆ. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾದ ಅಧಿಕೃತ ಅಧಿಸೂಚನೆಯನ್ನು ಓದಬೇಕು. 

ಇದನ್ನೂ ಓದಿ-ಒಂದು Missed Call ನಲ್ಲಿ ಮನೆ ಬಾಗಿಲಿಗೆ ಬರುತ್ತೆ LPG ಸಿಲಿಂಡರ್, ತಕ್ಷಣ ಈ ನಂಬರ್ ಸೇವ್ ಮಾಡಕೊಳ್ಳಿ!

ವಿದ್ಯಾರ್ಹತೆ ಏನು  (Railway Recruitment Eligibility)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 25 ವರ್ಷಗಳಾಗಿರಬೇಕು. ಅಭ್ಯರ್ಥಿಗಳ ವಯಸ್ಸನ್ನು ಜನವರಿ 1, 2022 ರಿಂದ ಲೆಕ್ಕಹಾಕಲಾಗುವುದು. ವಯೋಮಿತಿಯಲ್ಲಿ ಯಾವುದೇ ಅಭ್ಯರ್ಥಿಗೆ ಯಾವುದೇ ಸಡಿಲಿಕೆಯನ್ನು ನೀಡಲಾಗುವುದಿಲ್ಲ. ಮತ್ತೊಂದೆಡೆ, ನಾವು ಶೈಕ್ಷಣಿಕ ಅರ್ಹತೆಯ ಕುರಿತು ಹೇಳುವುದಾದರೆ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ 12 ನೇ ತರಗತಿ ಪಾಸಾಗಿರಬೇಕು. ಅಲ್ಲದೆ, ಕ್ರೀಡೆಗೆ ಸಂಬಂಧಿಸಿದ ಅರ್ಹತೆಯೂ ಹೊಂದಿರಬೇಕು. 

ಇದನ್ನೂ ಓದಿ-Third Wave in India:ಭಾರತದಲ್ಲಿ ಕೊರೊನಾ ಮೂರನೇ ಅಲೆಯ ಬಗ್ಗೆ WHO ಉನ್ನತ ಅಧಿಕಾರಿ ಹೀಗಂತಾರೆ!

ಅರ್ಜಿ ಶುಲ್ಕ (Railway Recruitment Fee)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. SC, ST, Ex-Servicemen ಇತ್ಯಾದಿ ಅಭ್ಯರ್ಥಿಗಳು 250 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrccr.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ-ISRO-Oppo India deal:ಚೀನಾದ ಒಪ್ಪೋ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದಕ್ಕೆ ತೀವ್ರ ವಿರೋಧ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News