ಭಾರತೀಯ ಮಾರುಕಟ್ಟೆಗೆ ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್!: ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

ರಾಯಲ್ ಎನ್‌ಫೀಲ್ಡ್ ಕಂಪನಿಯು ಮುಂದಿನ ವರ್ಷ 4 ರಿಂದ 5 ಹೊಸ ಮೋಟಾರ್‌ಸೈಕಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಬಹುದು.

Written by - Zee Kannada News Desk | Last Updated : Dec 9, 2021, 05:16 PM IST
  • 2022ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕುಗಳ ಅಬ್ಬರ
  • 4 ರಿಂದ 5 ಹೊಸ ಮಾದರಿಯ ಬೈಕುಗಳನ್ನು ಬಿಡುಗಡೆ ಮಾಡಲು ಕಂಪನಿಯಿಂದ ಸಿದ್ಧತೆ
  • ಕೈಗೆಟುಕುವ ಬೆಲೆಯಲ್ಲಿ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ‘ರಾಯಲ್’ ಬೈಕುಗಳು
ಭಾರತೀಯ ಮಾರುಕಟ್ಟೆಗೆ ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್!: ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ title=
ರಾಯಲ್ ಎನ್‌ಫೀಲ್ಡ್ ಬೈಕುಗಳ ಅಬ್ಬರ

ನವದೆಹಲಿ: 2022ರ ಹೊಸ ವರ್ಷದಲ್ಲಿ ರಾಯಲ್ ಎನ್‌ಫೀಲ್ಡ್ ನ ವಿವಿಧ ಮೋಟಾರ್‌ಸೈಕಲ್‌ಗಳ ಅಬ್ಬರ ಶುರುವಾಗಲಿದೆ. ಕಂಪನಿಯು ಮುಂದಿನ ವರ್ಷ 4 ರಿಂದ 5 ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಬಹುದು. ಈ ಪೈಕಿ 1 ಮಾದರಿಯ ಬೈಕ್ ಕುರಿತ ವಿಡಿಯೋವನ್ನು ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ನೂತನ ಬೈಕ್ ನ ಹೆಸರು ರಾಯಲ್ ಎನ್‌ಫೀಲ್ಡ್ ಹಂಟರ್ 350(Royal Enfield Hunter 350). 2022ರ ಫೆಬ್ರವರಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಹಿಮಾಲಯನ್ ಅಡ್ವೆಂಚರ್ ಮೋಟಾರ್‌ಸೈಕಲ್ ಅನ್ನು ಆಧರಿಸಿದ ತನ್ನ ಹೊಚ್ಚ ಹೊಸ Scrum 411 ಅನ್ನು ಬಿಡುಗಡೆ ಮಾಡಲಿದೆ. ಇದಕ್ಕೂ 1 ತಿಂಗಳ ಮುಂಚಿತವಾಗಿ ಹಂಟರ್ ದೇಶೀಯ ಮಾರುಕಟ್ಟೆ ಪ್ರವೇಶಿಸಿರುತ್ತದೆ.  

ಕಂಪನಿಯು ತನ್ನ ಹಲವಾರು ಮೋಟಾರ್‌ಸೈಕಲ್‌ಗಳ ಪರೀಕ್ಷೆಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್‌ ನ ಹಂಟರ್(Royal Enfield Hunter 350) ಕುರಿತ ವಿಡಿಯೋ ನೋಡುಗರ ಗಮನ ಸೆಳೆದಿದೆ. ವಿನೂತನ ಬೈಕ್ ಮಾದರಿಯ ವಿನ್ಯಾಸಕ್ಕೆ ನೋಡುಗರು ಫಿದಾ ಆಗಿದ್ದಾರೆ. ಬೈಕ್ ಪ್ರಿಯರಂತೂ ಯಾವಾಗ ಈ ಬೈಕ್ ಖರೀದಿಸುತ್ತಿವೋ ಎಂದು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಏಕೆಂದರೆ ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಗಳು ಅದ್ಭುತ ವೈಶಿಷ್ಟ್ಯದೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ.    

ಇದನ್ನೂ ಓದಿ: Multiple SIM Cards: ನೀವೂ ಸಹ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸುತ್ತೀರಾ? ಜಾಗರೂಕರಾಗಿರಿ!

ಮೆಟಿಯರ್ 350 ಆಧಾರಿತ ಪ್ಲಾಟ್‌ಫಾರ್ಮ್

ಹೊಸ ಮೋಟಾರ್‌ಸೈಕಲ್(Hunter Motorcycle) ಅನ್ನು ಮೆಟಿಯರ್ 350ನ ಅದೇ ವೇದಿಕೆಯಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಇದರ ಎಂಜಿನ್ ಅನ್ನು ಅದೇ ಮೋಟಾರ್‌ಸೈಕಲ್‌ನಿಂದ ತೆಗೆದುಕೊಳ್ಳಲಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಜೆ-ಪ್ಲಾಟ್‌ಫಾರ್ಮ್‌ನಲ್ಲಿ 349 ಸಿಸಿ ಎಂಜಿನ್‌ನೊಂದಿಗೆ ನಿರ್ಮಿಸುವ ಸಾಧ್ಯತೆಯಿದೆ. ಇದು 22 ಬಿಹೆಚ್‌ಪಿ ಪವರ್ ಮತ್ತು 27 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯು ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಬಹುದು. ಹೊಸ ಮೋಟಾರ್ ಸೈಕಲ್ ಅತ್ಯಂತ ಸಲೀಸಾಗಿ 0-100 ಕಿಮೀ/ಗಂಟೆಗೆ ತಲುಪುತ್ತಿದೆ ಎಂದು ಪರೀಕ್ಷಾ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಹೊಸ ಮೋಟಾರ್‌ಸೈಕಲ್‌(Royal Enfield Hunter)ನ ತೂಕವು ಮೆಟಿಯರ್ 350ಗಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತಿದೆ.

ಅತ್ಯಂತ ಕೈಗೆಟುಕುವ ದರದಲ್ಲಿ ಸಿಗಲಿದೆ ಬೈಕ್?

ಹಂಟರ್ 350 ಸೆಮಿ-ಡಿಜಿಟಲ್ ಕನ್ಸೋಲ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್‌(Royal Enfield New Bike)ನೊಂದಿಗೆ ಬರಲಿದೆ. ಈ ಹಿಂದೆ 2021ರ ಮಾದರಿಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಹಿಮಾಲಯನ್‌ಗಳಲ್ಲಿ ನೋಡಿದಂತೆ ಇದನ್ನು ಕಾಣಬಹುದಾಗಿದೆ. ಹಂಟರ್ 350 ಈ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದ್ದರಿಂದ ಈ ಬೈಕ್ ಉತ್ತಮವಾಗಿ ಕಾಣುವ LED DRLಗಳು ಮತ್ತು ಬ್ಲಿಂಕರ್‌ಗಳನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಹೋಂಡಾ CB350RS, ಜಾವಾ ಸ್ಟ್ಯಾಂಡರ್ಡ್ 300, ಜಾವಾ ಫೋರ್ಟಿ ಟು ಮತ್ತು ಬೆನೆಲ್ಲಿ ಇಂಪೀರಿಯಲ್ ಜೊತೆಗೆ ರಾಯಲ್ ಎನ್‌ಫೀಲ್ಡ್‌ ನ ಹೊಸ ಬೈಕ್ ಗಳು ಸ್ಪರ್ಧಿಸಲಿವೆ. ದೇಶದಲ್ಲಿ ಈ ಬೈಕಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ ಸುಮಾರು 1.70 ಲಕ್ಷ ರೂ. ಇರುತ್ತದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ದೈತ್ಯ ಗ್ರಹ ಪತ್ತೆ, ಗಾತ್ರದಲ್ಲಿ ಗುರುಗ್ರಹಕ್ಕಿಂತ 11 ಪಟ್ಟು ದೊಡ್ಡದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News