/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ : Aadhaar Card New Rule: ಆಧಾರ್ ಕಾರ್ಡ್ ಮಾಡುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ (Aadhaara card) ಕಡ್ಡಾಯ ದಾಖಲೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಮಾಡುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಸ್ವತಃ UIDAI ಈ ಮಾಹಿತಿಯನ್ನು ನೀಡಿದೆ.  

ಆಧಾರ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ : 
ಬಾಲ ಆಧಾರ್ (Baala Aadhaar),  ಆಧಾರ್ ಕಾರ್ಡ್‌ನ ನೀಲಿ ಬಣ್ಣದ ರೂಪಾಂತರವಾಗಿದೆ. ಇದನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. ಆದರೆ, ಈಗ ಹೊಸ ನಿಯಮದ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ ವಿವರಗಳ ಅಗತ್ಯವಿಲ್ಲ.  ಆದರೆ ಮಗುವಿಗೆ ಐದು ವರ್ಷ ತುಂಬಿದಾಗ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯವಾಗಿ ಮಾಡಬೇಕಾಗುತ್ತದೆ.

ಇದನ್ನೂ  ಓದಿ : ಟ್ರಾಫಿಕ್ ಪೋಲಿಸ್ ವಾಹನದ ಕೀಯನ್ನು ತೆಗೆಯುವಂತಿಲ್ಲ, ನಿಮಗೂ ತಿಳಿದಿರಲಿ ಈ ನಿಯಮ

ಅಗತ್ಯವಾದ ದಾಖಲೆಗಳು :
ಅಗತ್ಯವಿರುವ ದಾಖಲೆಗಳಲ್ಲಿ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ (PAN Card) , ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಎನ್‌ಆರ್‌ಇಜಿಎ ಜಾಬ್ ಕಾರ್ಡ್, ಇತ್ಯಾದಿ. ವಿಳಾಸದ ಪುರಾವೆಯಾಗಿ ಬಳಸಬಹುದಾದ ದಾಖಲೆಗಳಲ್ಲಿ ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ಮೆಂಟ್/ಪಾಸ್‌ಬುಕ್, ಪೋಸ್ಟ್ ಆಫೀಸ್ ಖಾತೆ ಸ್ಟೇಟ್ಮೆಂಟ್ (Post office statement), ರೇಷನ್ ಕಾರ್ಡ್ ಇತ್ಯಾದಿಗಳು ಸೇರಿವೆ.

 ಮಗುವಿನ ಬಾಲ ಆಧಾರ್ ಹೇಗೆ ಮಾಡಬೇಕು ?  
1. ಮಗುವಿನ ಆಧಾರ್ ಪಡೆಯಲು, ಮೊದಲು UIDAI ವೆಬ್‌ಸೈಟ್‌ಗೆ ಹೋಗಿ.
2. ಇಲ್ಲಿ ಆಧಾರ್ ಕಾರ್ಡ್ ನೋಂದಣಿಯ ಆಯ್ಕೆಯನ್ನು ಆರಿಸಿ.
3. ಈಗ ಮಗುವಿನ ಹೆಸರು ಮತ್ತು ಇತರ ಬಯೋಮೆಟ್ರಿಕ್ ಮಾಹಿತಿಯಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. 
4. ಈಗ ವಸತಿ ವಿಳಾಸ, ಪ್ರದೇಶ, ರಾಜ್ಯ ಮುಂತಾದ ವಿವರಗಳನ್ನು ನಮೂದಿಸಿ.  
5. ಆಧಾರ್ ಕಾರ್ಡ್‌ಗಾಗಿ ನೋಂದಣಿಯನ್ನು ನಿಗದಿಪಡಿಸಲು 'ಅಪಾಯಿಂಟ್‌ಮೆಂಟ್' ಆಯ್ಕೆಯನ್ನು ಕ್ಲಿಕ್ ಮಾಡಿ.
6. ಹತ್ತಿರದ ದಾಖಲಾತಿ ಕೇಂದ್ರವನ್ನು ಆಯ್ಕೆಮಾಡಿ, ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಿ ಮತ್ತು ನಿಗದಿಪಡಿಸಿದ ದಿನಾಂಕದಂದು ಭೇಟಿ ನೀಡಿ.

ಇದನ್ನೂ ಓದಿ :  ನಿಮ್ಮ ವಾಹನ 15 ವರ್ಷಕ್ಕಿಂತ ಹಳೆಯದಾಗಿದ್ದರೆ, ಸರ್ಕಾರದ ಈ ನಿರ್ಧಾರ ತಿಳಿದಿರಲೇ ಬೇಕು

ನೋಂದಣಿ ಕೇಂದ್ರದಲ್ಲಿ ಆಧಾರ್ ಮಾಡಲಾಗುವುದು :
ದಾಖಲಾತಿ ಕೇಂದ್ರದಲ್ಲಿ ಗುರುತಿನ ಪುರಾವೆ (POI), ವಿಳಾಸದ ಪುರಾವೆ (POA), ಸಂಬಂಧದ ಪುರಾವೆ (POR) ಮತ್ತು ಜನ್ಮ ದಿನಾಂಕ (DOB) ದಾಖಲೆಗಳಂತಹ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.  ಕೇಂದ್ರದಲ್ಲಿರುವ ಆಧಾರ್ ಅಧಿಕಾರಿಯಿಂದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಮಗು ಐದು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಬಯೋಮೆಟ್ರಿಕ್ ಡೇಟಾವನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಬಯೋಮೆಟ್ರಿಕ್ ಡೇಟಾ ಅಗತ್ಯವಿಲ್ಲ. 

90 ದಿನಗಳಲ್ಲಿ ಸಿಗಲಿದೆ ಬಾಲ ಆಧಾರ್ :
ಈ ಪ್ರಕ್ರಿಯೆಯ ನಂತರ ಪೋಷಕರು ತಮ್ಮ ಅರ್ಜಿಯ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಲು ಸ್ವೀಕೃತಿ ಸಂಖ್ಯೆಯನ್ನು ಪಡೆಯುತ್ತಾರೆ. ಅದರ ನಂತರ 60 ದಿನಗಳಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಸ್ವೀಕರಿಸಲಾಗುತ್ತದೆ. 90 ದಿನಗಳಲ್ಲಿ ಬಾಲ ಆಧಾರ್ ಕಾರ್ಡ್ ತಲುಪುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Aadhaar Card New Rule Big changes in the rules for making Aadhar card! UIDAI gave information
News Source: 
Home Title: 

ಆಧಾರ್ ಕಾರ್ಡ್ ಮಾಡಿಸುವ ಮುನ್ನ ಬದಲಾಗಿರುವ UIDAI ನಿಯಮಗಳನ್ನು ತಿಳಿಯಿರಿ

Aadhaar Card New Rule:  ಆಧಾರ್ ಕಾರ್ಡ್ ಮಾಡಿಸುವ ಮುನ್ನ  ಬದಲಾಗಿರುವ UIDAI ನಿಯಮಗಳನ್ನು ತಿಳಿಯಿರಿ
Caption: 
ಆಧಾರ್ ಕಾರ್ಡ್ ನಿಯಮಗಳು ಬದಲಾಗಿವೆ (file photo)
Yes
Is Blog?: 
No
Tags: 
Facebook Instant Article: 
Yes
Highlights: 

ಆಧಾರ್ ಕಾರ್ಡ್ ನಿಯಮಗಳು ಬದಲಾಗಿವೆ

ಬಾಲ ಆಧಾರ್ ಅನ್ನು ಈ ರೀತಿ ಮಾಡಬೇಕು  

UIDAI ನೀಡಿದೆ ವಿವರವಾದ ಮಾಹಿತಿ 
 

Mobile Title: 
ಆಧಾರ್ ಕಾರ್ಡ್ ಮಾಡಿಸುವ ಮುನ್ನ ಬದಲಾಗಿರುವ UIDAI ನಿಯಮಗಳನ್ನು ತಿಳಿಯಿರಿ
Ranjitha R K
Publish Later: 
No
Publish At: 
Saturday, December 4, 2021 - 11:23
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No