Royal Enfield ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಈ ಬೈಕ್

Classic Legends: ವಿದೇಶಿ ಮಾರುಕಟ್ಟೆಗೆ BSA (BSA Motorcycle) ಬ್ರಾಂಡ್ ಮರುಪ್ರವೇಶ ಮಾಡಲಿದೆ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡ ಈ ಬ್ರಾಂಡ್ ಅನ್ನು ಮತ್ತೆ ಪ್ರಸ್ತುತಪಡಿಸಲಾಗುವುದು ಎನ್ನಲಾಗಿದೆ. ಆದರೆ ಈ ಬ್ರಾಂಡ್ ಭಾರತಕ್ಕೆ ಎಂಟ್ರಿ ನೀಡುವ ಮೊದಲೇ Yezdi ಪ್ರವೇಶಿಸಲಿದೆ.

Written by - Nitin Tabib | Last Updated : Nov 28, 2021, 10:43 AM IST
  • ಬಿಎಸ್ಎ ಶೀಘ್ರದಲ್ಲೇ ಮಾರುಕಟ್ಟೆಗೆ ಮರಳಲಿದೆ
  • ಈ ಬ್ರ್ಯಾಂಡ್ ಅನ್ನು ಭಾರತೀಯ ಮಾರುಕಟ್ಟೆಯಲ್ಲೂ ಪರಿಚಯಿಸಲಾಗುವುದು
  • BSA ಗಿಂತ ಮೊದಲು ಭಾರತದಲ್ಲಿ ಯೆಜ್ಡಿಯ ಪ್ರವೇಶ
Royal Enfield ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಈ ಬೈಕ್  title=
BSA Motorcycle Classic Legends (File Photo)

Mahindra ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ ಜಾವಾ ಮೋಟಾರ್‌ಸೈಕಲ್‌ನೊಂದಿಗೆ ಯಶಸ್ಸನ್ನು ಕಂಡಿದೆ ಮತ್ತು ಇದೀಗ ಕಂಪನಿಯು ಬಿಎಸ್‌ಎ ಬ್ರ್ಯಾಂಡ್ ಅನ್ನು ಯೆಜ್ಡಿಯೊಂದಿಗೆ ಮಾರುಕಟ್ಟೆಗೆ ಮರುಪರಿಚಯಿಅಳು ಸಿದ್ಧವಾಗಿದೆ. ಯುಕೆಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಮೋಟಾರ್‌ಸೈಕಲ್ ಲೈವ್ ಶೋನಲ್ಲಿ ಕಂಪನಿಯು ಅಧಿಕೃತವಾಗಿ ಬ್ರ್ಯಾಂಡ್ ಅನ್ನು ಘೋಷಿಸಲಿದೆ. BSA ಮೋಟಾರ್‌ಸೈಕಲ್ (BSA Motorcycle) ಅನ್ನು ರೆಟ್ರೊ ಸ್ಟೈಲಿಂಗ್‌ನಲ್ಲಿ ನೀಡಲಾಗುವುದು ಇದು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಟಿಯರ್ ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಫ್ಲಾಟ್ ಮತ್ತು ಅಗಲವಾದ ಹ್ಯಾಂಡಲ್‌ಬಾರ್, ಅಗಲವಾದ ಮುಂಭಾಗ ಮತ್ತು ಹಿಂಭಾಗದ ಫೆಂಡರ್‌ಗಳನ್ನು ಹೊಂದಿರಲಿದೆ.

ಇದನ್ನೂ ಓದಿ-Affordable Bikes:ಪೆಟ್ರೋಲ್ ದರ ಏರಿಕೆ ಚಿಂತೆ ಬಿಟ್ಟು ಬಿಡಿ, ಇಲ್ಲಿವೆ ಪವರ್ಪುಲ್ ಮೈಲೇಜ್ ನೀಡುವ ಅಗ್ಗದ ಬೈಕ್ ಗಳು

ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಸಹ ಬಿಡುಗಡೆ ಮಾಡಲು ಯೋಜಿಸಲಾಗಿದೆ
ನಿಯೋ ರೆಟ್ರೊ ಶೈಲಿಗೆ ಬ್ಲ್ಯಾಕ್ಡ್-ಔಟ್ ಥೀಮ್ ನೀಡಲಾಗುತ್ತದೆ. BSA ಯ ಮೋಟಾರ್‌ಸೈಕಲ್‌ಗಳು ರೆಟ್ರೊ ಲುಕ್ ನೊಂದಿಗೆ ಈ ಹಿಂದೆಯೇ ತುಂಬಾ ಸುಂದರವಾಗಿ ಕಾಣಿಸುತ್ತಿದ್ದವು. ಇದೀಗ ಕಂಪನಿಯು ಈ ಶೈಲಿಯಲ್ಲಿ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. BSA ಪೆಟ್ರೋಲ್ ಮಾತ್ರವಲ್ಲದೆ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಕೂಡ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಮೊದಲ BSA ಮೋಟಾರ್‌ಸೈಕಲ್ 650cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು  ರಾಯಲ್ ಎನ್‌ಫೀಲ್ಡ್‌ನ (Royal Enfield) 650 ಟ್ವಿನ್‌ ನೊಂದಿಗೆ ಪೈಪೋಟಿಗೆ ಇಳಿಯಲಿದೆ.

ಇದನ್ನೂ ಓದಿ-World's Most Expensive Bike: ಇದುವೇ ವಿಶ್ವದ ಅತ್ಯಂತ ದುಬಾರಿ ಬೈಕ್, ಬೆಲೆ ಕೇಳಿ ನಿಮಗೂ ಶಾಕ್ ಆಗಬಹುದು

ಭಾರತದಲ್ಲಿ BSA ಸೈಕಲ್‌ಗಳನ್ನು ಮಾರಾಟ ಮಾಡಲಾಗುತ್ತದೆ
ಸಾಗರೋತ್ತರ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಕಂಪನಿಯು ಈ ಬ್ರ್ಯಾಂಡ್ ಅನ್ನು ಭಾರತೀಯ ಮಾರುಕಟ್ಟೆಯಲ್ಲೂ ಪರಿಚಯಿಸಲಿದೆ. BSA ಬೈಸಿಕಲ್‌ಗಳು ಈಗಾಗಲೇ ನಮ್ಮ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ ಮತ್ತು ಈಗ ಕ್ಲಾಸಿಕ್ ಲೆಜೆಂಡ್ಸ್ ತನ್ನ ಮೋಟಾರ್‌ಸೈಕಲ್ ಅನ್ನು ಅದೇ ಹೆಸರಿನೊಂದಿಗೆ ದೇಶದಲ್ಲಿ ಬಿಡುಗಡೆ ಮಾಡಲಿದೆ. ಆದ್ದರಿಂದ BSA ಮೋಟಾರ್‌ಸೈಕಲ್ ಭಾರತದಲ್ಲಿ ಟ್ರೇಡ್‌ಮಾರ್ಕ್ ಸಮಸ್ಯೆಯನ್ನು ಎದುರಿಸಬಹುದು. ಸದ್ಯಕ್ಕೆ ಕ್ಲಾಸಿಕ್ ಲೆಜೆಂಡ್‌ಗಳು ಜಾವಾ ಮತ್ತು ಯೆಜ್ಡಿ ಮೋಟಾರ್‌ಸೈಕಲ್‌ಗಳಿಗೆ (Yezdi Motorcycle) ಆದ್ಯತೆ ನೀಡಲಿದ್ದು, ಯೆಜ್ಡಿಯ ರೋಡ್‌ಕಿಂಗ್ (Yezdi Roadking) ಸ್ಕ್ರ್ಯಾಂಬ್ಲರ್ ಮತ್ತು ರೋಡ್‌ಕಿಂಗ್ ಅಡ್ವೆಂಚರ್ ಮೋಟಾರ್‌ಸೈಕಲ್‌ಗಳನ್ನು ಮೊದಲು ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ  ಓದಿ-New Suzuki Alto: ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರಿನ ಹೊಸ ರೂಪ ನೋಡಿದರೆ ನೀವು ಆಶ್ಚರ್ಯಚಕಿತರಾಗುವಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News