Knowledge Story: ಪ್ರತಿಯೊಂದು ದೇಶದ ಸಂಪ್ರದಾಯಗಳು, ಹವಾಮಾನ, ಆಹಾರ ಪದ್ಧತಿಗಳಿಂದಾಗಿ ಅಲ್ಲಿನ ಜನರ ಸರಾಸರಿ ವಯಸ್ಸಿನಲ್ಲಿ (Average Age) ಹೆಚ್ಚು ಕಡಿಮೆ ಇರುತ್ತದೆ. ಹಾಗೆಯೇ, ಭಾರತದ (Average Age In India) ವಿವಿಧ ರಾಜ್ಯಗಳಲ್ಲಿ ಜನರ ಸರಾಸರಿ ವಯಸ್ಸು ಕೂಡ ಭಿನ್ನವಾಗಿದೆ.
Knowledge Story: ಪ್ರತಿಯೊಂದು ದೇಶದ ಸಂಪ್ರದಾಯಗಳು, ಹವಾಮಾನ, ಆಹಾರ ಪದ್ಧತಿಗಳಿಂದಾಗಿ ಅಲ್ಲಿನ ಜನರ ಸರಾಸರಿ ವಯಸ್ಸಿನಲ್ಲಿ (Average Age) ಹೆಚ್ಚು ಕಡಿಮೆ ಇರುತ್ತದೆ. ಹಾಗೆಯೇ, ಭಾರತದ (Average Age In India) ವಿವಿಧ ರಾಜ್ಯಗಳಲ್ಲಿ ಜನರ ಸರಾಸರಿ ವಯಸ್ಸು ಕೂಡ ಭಿನ್ನವಾಗಿದೆ. ನಮ್ಮ ದೇಶವು ತುಂಬಾ ದೊಡ್ಡದಾಗಿದೆ ಮತ್ತು ವೈವಿಧ್ಯಮಯವಾಗಿದೆ, ನಮ್ಮ ರಾಜ್ಯಗಳ ಭೌಗೋಳಿಕ, ಸಾಂಸ್ಕೃತಿಕ ಇತ್ಯಾದಿ ಪರಿಸ್ಥಿತಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ, ಇವು ವಿವಿಧ ರಾಜ್ಯಗಳ ಜನರ ವಯಸ್ಸಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಯಾವ 5 ರಾಜ್ಯಗಳು ಜನರ ಸರಾಸರಿ ವಯಸ್ಸು ಅಧಿಕವಾಗಿದೆ ತಿಳಿದುಕೊಳ್ಳೋಣ (Knowledge Story) ಬನ್ನಿ.
ಇದನ್ನೂ ಓದಿ-Knowledge Story: ನೀವು ಸೀನುವ ವಿಧಾನ ಕೂಡ ನಿಮ್ಮ ವ್ಯಕ್ತಿತ್ವದ ಕುರಿತು ಹೇಳುತ್ತೆ! ನಿಮಗಿದು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ಕೇರಳದ ಜನರು ಎಲ್ಲಕ್ಕಿಂತ ಹೆಚ್ಚು ಬದುಕುತ್ತಾರಂತೆ (Highest Avarage Age State In India) - ನೀತಿ ಆಯೋಗದ (Niti Aayog) 2010 ರಿಂದ 2014ರ ವರದಿಯ ಪ್ರಕಾರ ಕೇರಳದ ಜನರು ಅತಿ ಹೆಚ್ಚು ಕಾಲ ಬದುಕುತ್ತಾರೆ ಎನ್ನಲಾಗಿದೆ. ಇಲ್ಲಿನ ಜನರ ಸರಾಸರಿ ಆಯಸ್ಸು 74.9 ವರ್ಷಗಳಾಗಿದೆ.
2. ಎರಡನೇ ಸ್ಥಾನದಲ್ಲಿ ದೆಹಲಿ ಇದೆ - ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ನಗರದಲ್ಲಿಯೂ ಸಹ ಜನರ ಸರಾಸರಿ ವಯಸ್ಸು ತುಂಬಾ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಮಹಿಳೆಯರ ಸರಾಸರಿ ಆಯಸ್ಸು 74.7 ಮತ್ತು ಪುರುಷರು ಸರಾಸರಿ 73.2 ವರ್ಷ ಬದುಕುತ್ತಾರೆ.
3.ಮೂರನೇ ಸ್ಥಾನದಲ್ಲಿ ಭೂಮಿಯ ಸ್ವರ್ಗ - ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆ ಮತ್ತು ಪುರುಷರ ಸರಾಸರಿ ಆಯಸ್ಸು ಕ್ರಮವಾಗಿ 74.9 ಹಾಗೂ 72.6 ವರ್ಷಗಳಾಗಿದೆ.
4. ನಾಲ್ಕನೇ ಸ್ಥಾನದಲ್ಲಿ ಹಿಮಾಚಲ ಪ್ರದೇಶ - ಇಲ್ಲಿನ ಮಹಿಳೆಯರ ಸರಾಸರಿ ವಯಸ್ಸು 74.1 ಹಾಗೂ ಪುರುಷರ ಸರಾಸರಿ ವಯಸ್ಸು 71.6 ಆಗಿದೆ.
5. ಐದನೇ ಸ್ಥಾನದಲ್ಲಿ ಮಹಾರಾಷ್ಟ್ರ - ದೇಶದಲ್ಲಿ ಅತಿ ಹೆಚ್ಚು ಸರಾಸರಿ ವಯಸ್ಸು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಐದನೇ ಸ್ಥಾನದಲ್ಲಿದೆ. ಇಲ್ಲಿ ಮಹಿಳೆಯರು 73.6 ವರ್ಷಗಳು ಮತ್ತು ಪುರುಷರು ಸರಾಸರಿ 71.6 ವರ್ಷಗಳು ಬದುಕುತ್ತಾರೆ. ಅಸ್ಸಾಂ (Lowest Average Age State In India) ರಾಜ್ಯ ದೇಶದಲ್ಲಿ ಅತಿ ಕಡಿಮೆ ಸರಾಸರಿ ವಯಸ್ಸು ಹೊಂದಿರುವ ರಾಜ್ಯವಾಗಿದ್ದು ಅಲ್ಲಿ ಜನರ ಸರಾಸರಿ ಆಯಸ್ಸು 63.9 ವರ್ಷಗಳಾಗಿದೆ.