Yoga After Dinner: ನಿಮಗೂ ಈ ಸಮಸ್ಯೆ ಇದ್ದರೆ ರಾತ್ರಿ ಊಟದ ನಂತರ ತಪ್ಪದೇ ಈ 2 ಯೋಗಾಸನಗಳನ್ನು ಮಾಡಿ

Yoga After Dinner: ನಿಮಗೂ ಊಟದ ಬಳಿಕ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಮಲಗುವ ಮೊದಲು ಈ ಎರಡು ಯೋಗಾಸನ ಮಾಡುವುದು ನಿಮಗೆ ಅನುಕೂಲವಾಗಬಹುದು.

Written by - Yashaswini V | Last Updated : Oct 6, 2021, 02:35 PM IST
  • ಊಟದ ನಂತರ ಎರಡು ಯೋಗಾಸನಗಳನ್ನು ಮಾಡುವುದರಿಂದ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ
  • ಯೋಗಾಸನದಿಂದ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಮಲಬದ್ಧತೆಯ ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುತ್ತದೆ
  • ಆಹಾರ ಸೇವಿಸಿದ ನಂತರ ನೀವು ಈ ಎರಡೂ ಯೋಗಾಸನಗಳನ್ನು ಹಾಸಿಗೆಯ ಮೇಲೆ ಮಾಡಬಹುದು
Yoga After Dinner: ನಿಮಗೂ ಈ ಸಮಸ್ಯೆ ಇದ್ದರೆ ರಾತ್ರಿ ಊಟದ ನಂತರ ತಪ್ಪದೇ ಈ 2 ಯೋಗಾಸನಗಳನ್ನು ಮಾಡಿ title=
Yoga After Dinner

Yoga After Dinner: ನಮ್ಮ ನಿತ್ಯ ಚಟುವಟಿಕೆಗಳ ಪರಿಣಾಮ ಕೊನೆಗೆ ನಮ್ಮ ಹೊಟ್ಟೆಯ ಮೇಲೆ ಉಂಟಾಗುತ್ತದೆ. ಅಂದರೆ ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊರಗಿನ ಆಹಾರ ಸೇವಿಸುವುದು ಅಥವಾ ತುಂಬಾ ಹಸಿದು ನಂತರ ಊಟ ಮಾಡುವುದು ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ. ಇದರ ಜೊತೆಗೆ ದಿನಪೂರ್ತಿ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದು, ಒತ್ತಡ, ಅನಾರೋಗ್ಯಕರ ಆಹಾರಕ್ರಮ ಇತ್ಯಾದಿಗಳಿಂದಾಗಿ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಜೀರ್ಣಕ್ರಿಯೆಯು ದುರ್ಬಲವಾದಾಗ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ ಹಲವರು ಮಲಬದ್ಧತೆ ಸಮಸ್ಯೆಯನ್ನೂ ಎದುರಿಸುತ್ತಿರುತ್ತಾರೆ. ಮಲಬದ್ಧತೆ ಸಮಸ್ಯೆ ಇರುವವರು  ದಿನವಿಡೀ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು, ನೀವು ಯೋಗದ ಸಹಾಯವನ್ನು ತೆಗೆದುಕೊಳ್ಳಬಹುದು.

ಊಟದ ನಂತರ ಎರಡು ಯೋಗಾಸನಗಳನ್ನು (Yoga after dinner) ಮಾಡುವುದರಿಂದ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಮಲಬದ್ಧತೆಯ ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುತ್ತದೆ. ಇದು ಮಾತ್ರವಲ್ಲ, ಆಹಾರ ಸೇವಿಸಿದ ನಂತರ ನೀವು ಈ ಎರಡೂ ಯೋಗಾಸನಗಳನ್ನು ಹಾಸಿಗೆಯ ಮೇಲೆ ಮಾಡಬಹುದು. ಅವುಗಳನ್ನು ಹೇಗೆ ಮಾಡಬೇಕೆಂದು ತಿಳಿಯೋಣ...

ಇದನ್ನೂ ಓದಿ-  Yogasana For Belly Fat: ನಿತ್ಯ ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು

ಊಟದ ನಂತರ ಈ ಯೋಗಾಸನ ಮಾಡುವುದರಿಂದ ಸಿಗಲಿದೆ ಪರಿಹಾರ (Yoga after dinner):
ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆಯಿಂದ ಪರಿಹಾರ ಪಡೆಯಲು ಭೋಜನದ ಬಳಿಕ ಈ ಯೋಗಾಸನಗಳನ್ನೂ (Benefits of Yoga after dinner) ಕನಿಷ್ಟ 15 ನಿಮಿಷಗಳ ಕಾಲ ಮಾಡಬೇಕು.

ವಜ್ರಾಸನ (Vajrasana):

vajrasana
* ಮೊದಲಿಗೆ, ನಿಮ್ಮ ಮೊಣಕಾಲುಗಳನ್ನು ಮಡಿಸಿ ಹಾಸಿಗೆ ಮೇಲೆ ಕುಳಿತುಕೊಳ್ಳಿ.
* ನಿಮ್ಮ ಕಾಲ್ಬೆರಳುಗಳನ್ನು ಹೊರಗೆ ಇರಿಸಿ ಮತ್ತು ಪೃಷ್ಟ ಭಾಗವನ್ನು ಪಾದದ ಮೇಲೆ ಇರಿಸಿ.
* ಎರಡೂ ಹಿಮ್ಮಡಿಗಳನ್ನು ಒಂದಕ್ಕೊಂದು ಜೋಡಿಸಿರಬೇಕು ಎಂಬುದನ್ನು ನೆನಪಿನಲ್ಲಿಡಿ.
* ಈಗ ಎರಡೂ ಅಂಗೈಗಳನ್ನು ಚಾವಣಿಯ ಕಡೆಗೆ ಇರಿಸಿ ಮತ್ತು ಅವುಗಳನ್ನು ಮೊಣಕಾಲುಗಳ ಮೇಲೆ ಇರಿಸಿ.
* ಸೊಂಟವನ್ನು ನೇರವಾಗಿರಿಸಿ ಮತ್ತು ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ
* ಈ ಭಂಗಿಯಲ್ಲಿ ಆರಾಮವಾಗಿ ದೀರ್ಘ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಿರಿ.
* ಮೊಣಕಾಲು ಅಥವಾ ಪಾದದ ಗಾಯಗಳಿಂದ ಬಳಲುತ್ತಿರುವ ರೋಗಿಗಳು ಈ ಯೋಗಾಸನವನ್ನು ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ- Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು

ಸುಖಾಸನ (Sukhasana) :

sukhasana
>> ಈ ಆಸನವನ್ನು ಮಾಡಲು, ಹಾಸಿಗೆಯ ಮೇಲೆ ಕುಳಿತುಕೊಳ್ಳಿ.
>>  ಎರಡೂ ಕಾಲುಗಳನ್ನು ಮಡಿಚಿ ಕುಳಿತುಕೊಳ್ಳಿ.
>> ಎರಡೂ ಅಂಗೈಗಳನ್ನು ಚಾವಣಿಗೆ ಎದುರಾಗಿ ಇರಿಸಿ ಮತ್ತು ಅವುಗಳನ್ನು ತೊಡೆಗಳ ಮೇಲೆ ಇರಿಸಿ.
>>  ಹಿಂಭಾಗ ಮತ್ತು ಸೊಂಟವನ್ನು ನೇರವಾಗಿ ಇರಿಸಿ ಮತ್ತು ಮುಂಭಾಗಕ್ಕೆ ಮುಖ ಮಾಡಿ.
>> ನಿಮ್ಮ ಕಣ್ಣುಗಳನ್ನು ಆರಾಮವಾಗಿ ಮುಚ್ಚಿ ಮತ್ತು ಆಳವಾದ ಮತ್ತು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ.

ಈ ಎರಡೂ ಆಸನಗಳು ನಿಮಗೆ ಉದರ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ನೀಡುತ್ತವೆ.

ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News