ಬೆಂಗಳೂರು: ಉತ್ತರಪ್ರದೇಶದ ಲಖೀಂಪುರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ(Lakhimpur Violence) ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದ ಪ್ರಿಯಾಂಕಾ ಗಾಂಧಿ(Priyanka Gandhi)ಯವರನ್ನು ಬಂಧಿಸಿರುವುದನ್ನು ಕಾಂಗ್ರೆಸ್ ಖಂಡಿಸಿದ್ದು, ‘ಬಿಜೆಪಿ ಆಳ್ವಿಕೆಯಲ್ಲಿ ಕೊಲೆಗಾರರಿಗೆ ‘ಸನ್ಮಾನ’ ಸಂತೈಸುವವರಿಗೆ ‘ಬಂಧನ’ ಎಂದು ಟೀಕಿಸಿದೆ.
‘ರೈತರನ್ನು ಕೊಲೆ ಮಾಡಿದ ಕೇಂದ್ರ ಮಂತ್ರಿಯ ಪುತ್ರ ರಾಜಾರೋಷವಾಗಿ ತಿರುಗಿಕೊಂಡಿದ್ದಾನೆ. ಮೃತ ರೈತರ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanka Gandhi)ಅವರನ್ನು ಬಂಧಿಸಲಾಗಿದೆ. ಇದು ತಾಲಿಬಾನ್ ಮಾದರಿಯಲ್ಲದೆ ಇನ್ನೇನು?’ ಎಂದು ಬಿಜೆಪಿ ಸರ್ಕಾರ(BJP Government)ದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರೈತರನ್ನು ಕೊಲೆ ಮಾಡಿದ ಕೇಂದ್ರ ಮಂತ್ರಿಯ ಪುತ್ರ ರಾಜಾರೋಷವಾಗಿ ತಿರುಗಿಕೊಂಡಿದ್ದಾನೆ.
ಮೃತ ರೈತರ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳಿದ @priyankagandhi ಅವರನ್ನು ಬಂಧಿಸಲಾಗಿದೆ.@BJP4India ಆಳ್ವಿಕೆಯಲ್ಲಿ ಕೊಲೆಗಾರರಿಗೆ 'ಸನ್ಮಾನ' ಸಂತೈಸುವವರಿಗೆ 'ಬಂಧನ'
ಇದು ತಾಲಿಬಾನ್ ಮಾದರಿಯಲ್ಲದೆ ಇನ್ನೇನು?#lakhimpur_farmer_massacre
— Karnataka Congress (@INCKarnataka) October 4, 2021
ಇದನ್ನೂ ಓದಿ: ನಿಮ್ಮ ಕುಟುಂಬದ ಆಸ್ತಿ ಎಷ್ಟು ಸಾವಿರ ಕೋಟಿ ಇದೆ: ಖರ್ಗೆಗೆ ಬಿಜೆಪಿ ಪ್ರಶ್ನೆ
‘ಉತ್ತರ ಪ್ರದೇಶದ ಪೊಲೀಸರು(Uttar Pradesh Police) ಪೊಲೀಸರಂತಿರದೆ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ದೀಪೆಂದರ್ ಹೂಡಾ ಮೇಲೆ ಪೊಲೀಸರು ಅಕ್ಷರಶಃ ಗೂಂಡಾಗಿರಿ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನೇ ಕ್ರೂರವಾಗಿ ನಡೆಸಿಕೊಳ್ಳುತ್ತಿರುವಾಗ, ಸಾಮಾನ್ಯ ರೈತರ ಧ್ವನಿ ಅಡಗಿಸಲು ಇನ್ನೆಷ್ಟು ದೌರ್ಜನ್ಯ ಎಸಗುತ್ತಿರಬಹುದು’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿಗೂ ತಾಲಿಬಾನ್ಗೂ ಯಾವುದೇ ವ್ಯತ್ಯಾಸವಿಲ್ಲ.
ಅವರು ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ.
ಇವರು ಕಾರು ಹತ್ತಿಸಿ ಕೊಲ್ಲುತ್ತಿದ್ದಾರೆ.— Karnataka Congress (@INCKarnataka) October 4, 2021
‘ಅಸಹಿಷ್ಣ ಬಿಜೆಪಿ(BJP) ತನ್ನ ಅನೀತಿಯನ್ನು ವಿರೋಧಿಸುವ ಪ್ರಜೆಗಳನ್ನು ಹತ್ಯೆ ಮಾಡುವ ಉಗ್ರ ಮನಸ್ಥಿತಿಯನ್ನು ಹೊಂದಿದೆ. ಹಿಂದೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ‘ಗೋಲಿ ಮಾರೋ’ ಎಂದಿದ್ದರು. ಈಗ ಹರಿಯಾಣ ಸಿಎಂ ರೈತರನ್ನು ಹೊಡೆಯಿರಿ, ಬಡಿಯಿರಿ ಎಂದಿದ್ದಾರೆ. ಇದು ಬಿಜೆಪಿಯ ಭಯೋತ್ಪಾದಕ ಮನಸ್ಥಿತಿ. ಬಿಜೆಪಿಗೂ ತಾಲಿಬಾನ್ಗೂ ಯಾವುದೇ ವ್ಯತ್ಯಾಸವಿಲ್ಲ. ಅವರು ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ. ಇವರು ಕಾರು ಹತ್ತಿಸಿ ಕೊಲ್ಲುತ್ತಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಅವಕಾಶ ವಂಚಿತ ಜಾತಿಗಳು ಸಮ್ಮೇಳನಗಳನ್ನು ನಡೆಸಿದರೆ ಅದು ಜಾತೀಯತೆಯಾಗದು- ಸಿದ್ಧರಾಮಯ್ಯ
ಬಿಜೆಪಿಯೇ ಈ ದೇಶದ ತುಕಡೆ ಗ್ಯಾಂಗ್
ಛತ್ತೀಸ್ಘಡದ ಮುಖ್ಯಮಂತ್ರಿ @bhupeshbaghel ಅವರ ವಿಮಾನದ ಇಳಿಯಲು ಉತ್ತರಪ್ರದೇಶದ ಮುಖ್ಯಮಂತ್ರಿ @myogiadityanath ಅನುಮತಿ ನಿರಾಕರಿಸುತ್ತಾರೆ.
ಒಂದು ರಾಜ್ಯದ ಸಿಎಂ ಮತ್ತೊಂದು ರಾಜ್ಯಕ್ಕೆ ತೆರಳುವಂತಿಲ್ಲ ಎನ್ನುವ ಬಿಜೆಪಿಯೇ ದೇಶವನ್ನು ವಿಭಜಿಸುವ 'ತುಕಡೆ ಗ್ಯಾಂಗ್'#lakhimpur_farmer_massacre
— Karnataka Congress (@INCKarnataka) October 4, 2021
‘ಉತ್ತರ ಪ್ರದೇಶದಲ್ಲಿರುವುದು ಗೂಂಡಾರಾಜ್ ಅಲ್ಲ, ಅದಕ್ಕೂ ಹೆಚ್ಚಾಗಿ ತಾಲಿಬಾನ್ ಆಡಳಿತ. ಪ್ರಿಯಾಂಕಾ(Priyanka Gandhi) ಅವರ ಕಾನೂನುಬಾಹಿರ ಬಂಧನ, ದೀಪೆಂದರ್ ಹೂಡಾ ಅವರ ಮೇಲೆ ಪೊಲೀಸರ ಹಲ್ಲೆ, ಛತ್ತೀಸ್ಗಡ ಸಿಎಂ ಭೂಪೇಶ್ ಭಗೇಲ್ ಅವರ ವಿಮಾನಕ್ಕೆ ಲ್ಯಾಂಡಿಂಗ್ಗೆ ನಿರಾಕರಿಸಿರುವುದು ಬಿಜೆಪಿ ಸರ್ಕಾರದ ದುರಾಡಳಿತವನ್ನು ತಿಳಿಸುತ್ತದೆ. ಒಂದು ರಾಜ್ಯದ ಸಿಎಂ ಮತ್ತೊಂದು ರಾಜ್ಯಕ್ಕೆ ತೆರಳುವಂತಿಲ್ಲ ಎನ್ನುವ ಬಿಜೆಪಿಯೇ ಈ ದೇಶವನ್ನು ವಿಭಜಿಸುವ ತುಕಡೆ ಗ್ಯಾಂಗ್. ವಿಪಕ್ಷಗಳನ್ನು ತಡೆದು, ರೈತರ ಮಾರಣಹೋಮ ನಡೆಸಲು ನಿರ್ಧರಿಸಿದೆಯೇ ಬಿಜೆಪಿ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.