ನವದೆಹಲಿ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಮಂತ್ರಿಯಾಗಿರುವ ಸುರೇಶ್ ರಾಣಾ ಅವರ ದಲಿತರ ನಿವಾಸದಲ್ಲಿನ ಅದ್ದೂರಿ ಭೋಜನದ ಕುರಿತಾಗಿ ಬಿಜೆಪಿಯ ದಲಿತ ನಾಯಕಿ ಸಾವಿತ್ರಿ ಬಾಯಿ ಕಟುವಾಗಿ ಟೀಕಿಸಿದ್ದು ಇದು ಕೇವಲ್ ಒಂದು ಫೇಕ್ ಶೋ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಅವರು ಸರ್ಕಾರದ ನಡೆಯ ವಿರುದ್ದ ಕಿಡಿಕಾರಿದ್ದಾರೆ.
Lohagadh(Aligarh): Rajnish Kumar, Dalit man at whose house UP Minister Suresh Rana had dinner yesterday says, 'I didn't even know they are coming for dinner,they came suddenly.All food.water and cutlery they had arranged from outside' pic.twitter.com/TIXMVtV825
— ANI UP (@ANINewsUP) May 2, 2018
ದಲಿತರ ಮನೆಯಲ್ಲಿ ಮಂತ್ರಿಳು ಭೋಜನ ಮಾಡಿರುವುದರ ಬಗ್ಗೆ ಪ್ರಸ್ತಾಪಿಸುತ್ತಾ ಮಾತನಾಡಿರುವ ಬಿಜೆಪಿ ನಾಯಕಿ ಸಾವಿತ್ರಿ ಬಾಯಿ ಪುಲೆ ಭಾರತದ 85% ರಷ್ಟು ಜನರು ಹಿಂದುಳಿದ ಜಾತಿಗೆ ಸೇರಿದವರು ಮತ್ತು ಬಡವರಾಗಿದ್ದಾರೆ. ಆದರೆ, ದಲಿತರ ನಿವಾಸದಲ್ಲಿ ಭೋಜನ ಮಾಡುತ್ತಿರುವ ಮಂತ್ರಿಗಳು ತಮ್ಮ ಮನೆಯ ಪಾತ್ರೆಗಳನ್ನು ಬಳಸುತ್ತಿಲ್ಲ ಮತ್ತು ಅಲ್ಲಿಯೇ ಬೇಯಿಸಿದ ಆಹಾರವನ್ನು ಕೂಡಾ ತಿನ್ನುತ್ತಿಲ್ಲ ಇದೆಲ್ಲಾ ಎಲ್ಲಾ ನಕಲಿ ಪ್ರದರ್ಶನ ಇದು ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸ ಮಾಡಿದವರ ವಿರುದ್ಧ ಯಾವುದೇ ಕ್ರಮವನ್ನು ಯೋಗಿ ಸರಕಾರ ತೆಗೆದುಕೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.