ಉತ್ತರ ಪ್ರದೇಶದಲ್ಲಿ ಜನ ಸಾಯ್ತಿದ್ರೂ, ಯೋಗಿಗೆ ಕರ್ನಾಟಕ ಚುನಾವಣೆಯೇ ಹೆಚ್ಚಾಯ್ತು: ಸಿದ್ದು ವ್ಯಂಗ್ಯ

ಉತ್ತರಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ 64ಮಂದಿ ಸಾವನ್ನಪ್ಪಿದ್ದರೂ ಅಲ್ಲಿನ ಜನರಿಗೆ ಸಾಂತ್ವನ ಹೇಳುವ ಬದಲು ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Last Updated : May 3, 2018, 07:17 PM IST
ಉತ್ತರ ಪ್ರದೇಶದಲ್ಲಿ ಜನ ಸಾಯ್ತಿದ್ರೂ, ಯೋಗಿಗೆ ಕರ್ನಾಟಕ ಚುನಾವಣೆಯೇ ಹೆಚ್ಚಾಯ್ತು: ಸಿದ್ದು   ವ್ಯಂಗ್ಯ title=

ಬೆಂಗಳೂರು : ಉತ್ತರಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ 64ಮಂದಿ ಸಾವನ್ನಪ್ಪಿದ್ದರೂ ಅಲ್ಲಿನ ಜನರಿಗೆ ಸಾಂತ್ವನ ಹೇಳುವ ಬದಲು ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಮೊದಲು ಉತ್ತರಪ್ರದೇಶದಲ್ಲಿ ಬಾರೀ ಮಳೆ ಗಾಳಿಯಿಂದಾಗಿ ಪ್ರಾಣಕಳೆದುಕೊಂಡ ಮೃತರ ಕುಟುಂಬಗಳಿಗೆ ತಮ್ಮ ಟ್ವೀಟ್'ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, "ತಮ್ಮ ರಾಜ್ಯದ ಜನತೆ ನೈಸರ್ಗಿಕ ವಿಕೋಪದಿಂದ ಸಾವನ್ನಪ್ಪುತ್ತಿದ್ದರೂ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಜನರಿಗೆ ಸಾಂತ್ವನ ಹೇಳುವ ಬದಲು ಪ್ರಚಾರ ನಡೆಸುತ್ತಿದ್ದಾರೆ. ಮೊದಲು ಹೋಗಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ" ಎಂದು ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಮುಂದುವರೆದು, "ಕ್ಷಮೆ ಇರಲಿ, ನಿಮ್ಮ ಸಿಎಂ ಅವಶ್ಯಕತೆ ಕರ್ನಾಟಕಕ್ಕಿದೆ. ನನಗೆ ಭರವಸೆಯಿದೆ. ಅವರು ಶೀಘ್ರದಲ್ಲಿಯೇ ಯುಪಿಗೆ ಬರಲಿದ್ದಾರೆ" ಎಂದು ಯೋಗಿ ಆದಿತ್ಯನಾಥ್'ಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

ಬುಧವಾರ ಸಂಜೆ ಹವಾಮಾನದಲ್ಲಾದ ದಿಢೀರ್ ಬದಲಾವಣೆಯಿಂದಾಗಿ ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಪ್ರದೇಶದ ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನ ಮತ್ತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಗುಡುಗು ಸಹಿತ ಭಾರೀ ಮಳೆಯಿಂದಾಗಿ ಕನಿಷ್ಟ 60ಕ್ಕೂ ಹೆಚ್ಚು ಮಂದಿ ಸಾವನನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. 

Trending News