ಬೆಂಗಳೂರು : ಕರ್ನಾಟಕ ಚುನಾವಣೆ ದಿನೇ ದಿನೇ ರಂಗೆರುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಟ್ವೀಟ್ ವಾರ್ ಮುಂದುವರೆಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ನಕಲಿ ಜಾತ್ಯಾತೀತರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಕಾಂಗ್ರೆಸ್ ಜಾತ್ಯಾತೀತ ಪಕ್ಷ ಎಂದು ಸದಾ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ರಾಜ್ಯದ ಜನ ಯಾವಾಗಲೂ ದೇಶಪ್ರೇಮಿಗಳ ಪರವೇ ಹೊರತು ಪಿಎಫ್ಐ, ಎಸ್ಡಿಪಿಐನಂತಹ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ನಿಮ್ಮ ಅಲ್ಲ ಎಂದಿದ್ದಾರೆ.
ಅಲ್ಲದೆ, 2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಅಲೆ ದೇಶ ಹಾಗೂ ರಾಜ್ಯದೆಲ್ಲೆಡೆ ಕಮಲ ಅರಳಿದಂತೆ ನಮ್ಮ ಕರಾವಳಿಯಲ್ಲೂ ಹೇಗೆ ಕಮಲ ಅರಳಿತು ಎಂಬ ಅರಿವಿದ್ದರೂ ದಿಗ್ಭ್ರಾಂತಿಯಿಂದ ಏನೇನೋ ಹೇಳಿಕೆ ಕೊಡುತ್ತಿದ್ದೀರಿ. 2013ರ ವಿಧಾನಸಭಾ ಚುನಾವಣೆಯ ನಂತರ ನಮ್ಮ ಜನ ಮುಂದೆ ನೋಡಿದರೆ, ನೀವಿನ್ನು ಹಿಂದೆ ಉಳಿದಂತಿದೆ" ಎಂದು ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಇದರೊಂದಿಗೆ ಕಳೆದ ಚುನಾವಣೆಯ ಕೆಲವು ಅಂಕಿ ಅಂಶಗಳನ್ನೂ ಯಡಿಯೂರಪ್ಪ ಒದಗಿಸಿದ್ದಾರೆ.
ಸಿದ್ದರಾಮಯ್ಯನವರೇ, ಕರಾವಳಿಯ ಜನತೆಗೆ ಬಿಜೆಪಿ ಮೇಲಿರುವ ಹೃತ್ಪೂರ್ವಕ ಪ್ರೀತಿ ತಿಳಿಯಲು 2014ರ ಲೋಕಸಭಾ ಚುನಾವಣೆಯ ಈ ಮಾಹಿತಿಯನ್ನು ಗಮನಿಸಿ.
ಕ್ಷೇತ್ರ: ಉಡುಪಿ-ಚಿಕ್ಕಮಗಳೂರು
ಗೆಲುವು: ಬಿಜೆಪಿ
ಅಂತರ: 1,81,643ಕ್ಷೇತ್ರ: ದಕ್ಷಿಣ ಕನ್ನಡ
ಗೆಲುವು: ಬಿಜೆಪಿ
ಅಂತರ: 1,43,709ಕ್ಷೇತ್ರ: ಉತ್ತರ ಕನ್ನಡ
ಗೆಲುವು: ಬಿಜೆಪಿ
ಅಂತರ: 1,40,700— B.S. Yeddyurappa (@BSYBJP) April 28, 2018