Weird News: ಇವು ವಿಶ್ವದ ಅತ್ಯಂತ ಮೋಜಿನ ಪಾರಿವಾಳಗಳು, ಇವುಗಳ ಐಷಾರಾಮಿ ಜೀವನಕ್ಕಾಗಿ ಖರ್ಚಾಗುತ್ತೆ ಲಕ್ಷಾಂತರ ರೂ.

                              

Fashionable pigeons: ಕೆಲವು ಜನರು ತಮ್ಮ ಸಾಕುಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುತ್ತಾರೆ. ಅದು ಅವುಗಳಿಗೆ ಒದಗಿಸಬಹುದಾದ ಸೌಲಭ್ಯಗಳ ವಿಷಯವಾಗಿರಲಿ ಅಥವಾ ಆಹಾರವಾಗಿರಲಿ ಯಾವುದೇ ವಿಷಯದಲ್ಲೂ ರಾಜೀ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ಸಾಕು ಪ್ರಾಣಿಗಳ ಮೇಲೆ ಬೇಷರತ್ತಾದ ಪ್ರೀತಿಯನ್ನು ಸುರಿಸುತ್ತಾರೆ. ಅಂತಹವರಲ್ಲೇ ಒಬ್ಬರು ಲಿಂಕನ್ಶೈರ್ (Lincolnshire) ನಲ್ಲಿ ವಾಸಿಸುತ್ತಿರುವ ಮೆಗ್ಗಿ ಜಾನ್ಸನ್ (Meggy Johnson) ಎಂಬ ಹುಡುಗಿ. ಅವಳು ತನ್ನ 2 ಪಾರಿವಾಳಗಳಿಗೆ (Pigeons)  ಪ್ರತಿ ತಿಂಗಳು 30 ಸಾವಿರದಿಂದ 40 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಾಳೆ. ಇದು ಮಾತ್ರವಲ್ಲ, ಆಕೆಯ ಪಾರಿವಾಳಗಳು ಕೂಡ ತುಂಬಾ ಫ್ಯಾಶನ್ ಆಗಿರುತ್ತವೆ. ಈ ಐಶಾರಾಮಿ ಪಾರಿವಾಳಗಳ ವಾರ್ಡ್ರೋಬ್ ನೋಡಿದರೆ ಖಂಡಿತ ಶಾಕ್ ಆಗುತ್ತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮ್ಯಾಗಿ ಜಾನ್ಸನ್ (Maggie Johnson) ಪ್ರಾಣಿಗಳು ಮತ್ತು ಪಕ್ಷಿಗಳನ್ನು ತುಂಬಾ ಪ್ರೀತಿಸುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಈಕೆಗೆ 2 ಗಾಯಗೊಂಡಿರುವ ಪಾರಿವಾಳಗಳು ಸಿಕ್ಕಿದ್ದವು. ಅವುಗಳನ್ನು ಮನೆಗೆ ಕರೆತಂದಿದ್ದ ಮ್ಯಾಗಿ ಜಾನ್ಸನ್, ಚಿಕಿತ್ಸೆ ನೀಡಿ ಪಾರಿವಾಳಗಳನ್ನು ರಕ್ಷಿಸಿದ್ದಳು. ನಂತರ ಅವರು ಅವರಿಗೆ ಸ್ಕೈ ಮತ್ತು ಮೂಸ್ ಎಂದು ಹೆಸರಿಸಿದರು. ಅಷ್ಟೇ ಅಲ್ಲ ಆಕೆ ಈ ಎರಡೂ ಪಾರಿವಾಳಗಳಿಗೂ ಡಿಸೈನರ್ ಡ್ರೆಸ್ ಗಳನ್ನು ತಯಾರಿಸಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾಳೆ.   

2 /5

ಈ ಪಾರಿವಾಳಗಳ ಖರೀದಿ, ಆಹಾರ ಮತ್ತು ಇತರ ಸೌಲಭ್ಯಗಳಿಗಾಗಿ ಪ್ರತಿ ತಿಂಗಳು ಮ್ಯಾಗಿ ಸುಮಾರು 30 ರಿಂದ 40 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಾರಂತೆ. ಪಾರಿವಾಳ ವಾರ್ಡ್ರೋಬ್‌ನಲ್ಲಿ ಉತ್ತಮ ಡಿಸೈನರ್ ಡ್ರೆಸ್ (Designer Dresses) ಸಂಗ್ರಹವಿದೆ. ಇದರಲ್ಲಿ ಪಾರಿವಾಳಗಳ ಸುಂದರ ಡಿಸೈನರ್ ಉಡುಪುಗಳಿವೆ. ಇದಕ್ಕಾಗಿ ಅವರು ಇಲ್ಲಿಯವರೆಗೆ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.   

3 /5

ಮೆಟ್ರೋ ಯುಕೆ ವರದಿಯ ಪ್ರಕಾರ, 23 ವರ್ಷದ ಮ್ಯಾಗಿ ಪಾರಿವಾಳಗಳ ಆರೈಕೆಯ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಮ್ಯಾಗಿ ಪಾರಿವಾಳಗಳ ಸೌಕರ್ಯವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಅವಳು ಪಾರಿವಾಳಗಳನ್ನು ನಿಯಮಿತವಾಗಿ ಒಂದು ವಾಕ್‌ಗೆ ಕರೆದುಕೊಂಡು ಹೋಗುತ್ತಾಳೆ.  ಇದನ್ನೂ ಓದಿ- Liquor Rule: ಇಲ್ಲಿ ಎಣ್ಣೆ ಬೇಕು ಅಂದ್ರೆ ಇರಲೇಬೇಕು ಈ ಪ್ರಮಾಣಪತ್ರ

4 /5

ಈ ಪಾರಿವಾಳಗಳಿಗೆ ಮ್ಯಾಗಿ ಪ್ರತ್ಯೇಕ ಮಲಗುವ ಕೋಣೆಯನ್ನು (Pigeons have separate bedrooms) ಕೂಡ ವ್ಯವಸ್ಥೆ ಮಾಡಿದ್ದಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ ಅವುಗಳಿಗೆ ಮೃದುವಾದ ಆಟಿಕೆಗಳು ಇರುವುದರಿಂದ ಪಾರಿವಾಳಗಳು ಅವರೊಂದಿಗೆ ಆಟವಾಡಬಹುದು.  ಇದನ್ನೂ ಓದಿ- ಲಕ್ಷದ್ವೀಪದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೇ? ಹಾಗಿದ್ದರೆ ಈಗಲೇ ಬುಕ್ ಮಾಡಿ IRCTC ಕ್ರೂಸ್ ಪ್ಯಾಕೇಜ್

5 /5

ಗಾಯಗೊಂಡ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದ ಪಾರಿವಾಳಗಳನ್ನು ಮನೆಗೆ ಕರೆತಂದಿದ್ದ ಮ್ಯಾಗಿ ಈ ಪಾರಿವಾಳಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ಹಲವಾರು ವಾರಗಳವರೆಗೆ ಇವುಗಳಿಗೆ  ಟ್ಯೂಬ್ ಸಹಾಯದಿಂದ ಸ್ವತಃ ಆಹಾರ ತಿನ್ನಿಸಿದ್ದಾರೆ. ಈ ಪೈಕಿ, ಮೂಸ್ ಹೆಸರಿನ ಪಾರಿವಾಳಕ್ಕೆ ಒಂದೇ ಒಂದು ಕಣ್ಣು ಇದೆ. ಅಂತಹ ಪರಿಸ್ಥಿತಿಯಲ್ಲಿ ಅವಳು ಹೊರಗೆ ಹಾರಲು ಸುರಕ್ಷಿತವಲ್ಲ ಎಂದು ಮ್ಯಾಗಿ ಹೇಳುತ್ತಾರೆ. ಮ್ಯಾಗಿ ಪಾರಿವಾಳಗಳನ್ನಷ್ಟೇ ಅಲ್ಲ ಇದೇ ರೀತಿಯಲ್ಲಿ ನಾಯಿಯನ್ನು ಕೂಡ ರಕ್ಷಿಸಿದ್ದಾರೆ ಎಂದು ವರದಿ ಆಗಿದೆ. (ಎಲ್ಲಾ ಫೋಟೋಗಳ ಕೃಪೆ: ಮೆಟ್ರೋ ಯುಕೆ)