Government Scheme:ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ನಿತ್ಯ ಕೇವಲ 1 ರೂ. ವಿನಿಯೋಗಿಸಿ 15 ಲಕ್ಷ ಪಡೆಯಿರಿ

Sukanya Samriddhi Yojana: ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ, ನೀವು ಅತ್ಯಂತ ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತವನ್ನು ಹಿಂಪಡೆಯಬಹುದು. ಈ ಯೋಜನೆಯಡಿ, ನೀವು ದಿನಕ್ಕೆ ಕೇವಲ 1 ರೂಪಾಯಿ ಉಳಿತಾಯ ಮಾಡುವ ಮೂಲಕ ಲಾಭವನ್ನು ಪಡೆಯಬಹುದು.  

Written by - Nitin Tabib | Last Updated : Sep 12, 2021, 04:01 PM IST
  • ಸರ್ಕಾರದ ಅತ್ಯುತ್ತಮ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದು.
  • ಈ ಯೋಜನೆಯ ಮೂಲಕ ಪೋಷಕರು ತಮ್ಮ ಸುಪುತ್ರಿಯ ಭವಿಷ್ಯವನ್ನು ಸುರಕ್ಷಿತವಾಗಿಸಬಹುದು.
  • ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ವಿನಾಯ್ತಿ ಕೂಡ ಪಡೆಯಬಹುದು.
Government Scheme:ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ನಿತ್ಯ ಕೇವಲ 1 ರೂ. ವಿನಿಯೋಗಿಸಿ 15 ಲಕ್ಷ ಪಡೆಯಿರಿ title=
Sukanya Samriddhi Account

ನವದೆಹಲಿ: Sukanya Samriddhi Account - ಒಂದು ವೇಳೆ ನೀವೂ ಕೂಡ ಅತ್ಯಂತ ಕಡಿಮೆ ಹೂಡಿಕೆ ಮಾಡಿ ಅತಿ ಹೆಚ್ಚು ಮತ್ತು ಸುನಿಶ್ಚಿತ ಲಾಭ ಗಳಿಸಲು ಯೋಜನೆ ರೂಪಿಸುತ್ತಿದ್ದರೆ, ಸುಕನ್ಯಾ ಸಮೃದ್ಧಿ ಯೋಜನಾ ನಿಮಗಾಗಿ ಒಂದು ಒಳ್ಳೆಯ ಆಯ್ಕೆ ಸಾಬೀತಾಗಲಿದೆ.  ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddhi Scheme)ಸರ್ಕಾರಿ ಸ್ಕೀಮ್ ಆಗಿದೆ. ಇದರಲ್ಲಿ ಕಡಿಮೆ ಹೂಡಿಕೆ ಮಾಡಿ, ಅಧಿಕ ಲಾಭ ಪಡೆಯಬಹುದಾಗಿದೆ.  ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (Sukanya Samruddhi Account) ಹೂಡಿಕೆ ಮಾಡುವುದರೊಂದಿಗೆ ನಿಮ್ಮ  ಮುದ್ದು ಮಗಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯಲ್ಲಿಯೂ ವಿನಾಯಿತಿ ಸಿಗಲಿದೆ.  

ಸುಕನ್ಯಾ ಸಮೃದ್ಧಿ ಯೋಜನಾ
ಸುಕನ್ಯಾ ಸಮೃದ್ಧಿ ಯೋಜನೆಯನ್ನು  (Sukanya Samriddhi Yojana ) ಬೇಟಿ ಬಚಾವೋ ಬೇಟಿ ಪಡಾವೋ ಸ್ಕೀಮ್ (Beti Bachao Beti Padhao Scheme) ಅಡಿ  ಆರಂಭಿಸಲಾಗಿದೆ. ಇದು ಹೆಣ್ಣು ಮಕ್ಕಳಿಗಾಗಿ ಇರುವ ಸಣ್ಣ ಉಳಿತಾಯ ಯೋಜನೆಯಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Government Scheme)  ಅತ್ಯುತ್ತಮ ಬಡ್ಡಿ (Interest) ನೀಡುವ ಸ್ಕೀಮ್ ಆಗಿದೆ. ಹೂಡಿಕೆದಾರರಿಗೆ ಉತ್ತಮ ಆದಾಯದ ಜೊತೆಗೆ ತೆರಿಗೆ ಉಳಿಸಲು ಕೂಡಾ ಸಹಾಯ ಮಾಡುತ್ತದೆ. ಈ ಖಾತೆಯನ್ನು ನೀವು ಕೇವಲ 250 ರೂಪಾಯಿ ಪಾವತಿಸುವ ಮೂಲಕ ಆರಂಭಿಸಬಹುದು. ಇದರರ್ಥ ನೀವು ದಿನಕ್ಕೆ 1 ರೂಪಾಯಿ ಉಳಿಸಿದರೂ, ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು. ಯಾವುದೇ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂ.ಗಳನ್ನು ಠೇವಣಿ ಇಡುವುದನ್ನುಖಚಿತಪಡಿಸಿ. . ಯಾವುದೇ ಒಂದು ಹಣಕಾಸು ವರ್ಷದಲ್ಲಿ, SSY ಖಾತೆಯಲ್ಲಿ 1.5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಒಂದು ಬಾರಿ ಅಥವಾ ಹಲವು ಬಾರಿ ಜಮಾ ಮಾಡುವಂತಿಲ್ಲ.

ಶೇ.7.6ರಷ್ಟು ಬಡ್ಡಿ ಸಿಗುತ್ತದೆ
ಈ ಯೋಜನೆಯಡಿ (Sukanya Samriddhi Account), ನಿಮಗೆ 7.6 ಶೇಕಡಾ ದರದಲ್ಲಿ ಬಡ್ಡಿ ನೀಡಲಾಗುತ್ತದೆ. ಇದು ಆದಾಯ ತೆರಿಗೆ ವಿನಾಯಿತಿ ಕೂಡ ಹೊಂದಿದೆ. ಈ ಹಿಂದೆ,  ಈ ಖಾತೆಗೆ ಶೇ.9.2 ವರೆಗಿನ ಬಡ್ಡಿ ಸಹ ಇದರಲ್ಲಿ ನೀಡಲಾಗಿದೆ. ಇದಷ್ಟೇ ಅಲ್ಲ, 8 ವರ್ಷದ ವಯಸ್ಸಿನ ನಂತರ, ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಖರ್ಚಿನ ವಿಷಯದಲ್ಲಿ ಶೇಕಡ 50 ರಷ್ಟು ಹಣವನ್ನು ಹಿಂಪಡೆಯಬಹುದು. ಪ್ರಸ್ತುತ, ಎಸ್‌ಎಸ್‌ವೈಗೆ ಶೇ. 7.6 ಶೇಕಡಾ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದ್ದು ಅದು ಆದಾಯ ತೆರಿಗೆ ವಿನಾಯಿತಿ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪ್ರೀತಿಯ ಮಗಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲು ಬಯಸುತ್ತಿದ್ದರೆ, ಇಂದೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಇದನ್ನೂ ಓದಿ-Just For First Time MF Investors: ನೂತನ ಮ್ಯೂಚವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿವೆ ಕೆಲ ಸಲಹೆಗಳು

ಯಾವೆಲ್ಲಾ ದಾಖಲೆಗಳು ಬೇಕು ? 
ಸುಕನ್ಯಾ ಸಮೃದ್ಧಿ ಯೋಜನೆಯಡಿ, ಯಾವುದೇ ಅಂಚೆ ಕಚೇರಿ (Post office) ಅಥವಾ ವಾಣಿಜ್ಯ ಬ್ರಾಂಚ್ ನ  ಯಾವುದೇ ಅಧಿಕೃತ ಶಾಖೆಯಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿ, ಹೆಣ್ಣು ಮಗು ಜನಿಸಿದ ನಂತರ 10 ವರ್ಷಕ್ಕಿಂತ ಮುಂಚೆ ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಗರಿಷ್ಠ 1.5 ಲಕ್ಷ ರೂ.ಯನ್ನು ಹೂಡಿಕೆ ಮಾಡಬಹುದಾಗಿದೆ. 
>> ಖಾತೆಯನ್ನು ತೆರೆಯಲು, ಮಗುವಿನ ಜನನ ಪ್ರಮಾಣಪತ್ರವನ್ನು  ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್‌ನಲ್ಲಿ (Bnak) ಸಲ್ಲಿಸಬೇಕು.
>> ಮಗು ಮತ್ತು ಪೋಷಕರ ಗುರುತಿನ ಚೀಟಿಯಾದ ಪ್ಯಾನ್ ಕಾರ್ಡ್ (PAN Card), ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್ , ಪಾಸ್‌ಪೋರ್ಟ್ ಯಾವುದಾದರೊಂದು ನೀಡಬೇಕಾಗುತ್ತದೆ.
>> ಅಡ್ರೆಸ್ಸ್ ಪ್ರ್ರೋಫ್ ಗಾಗಿ ಪಾಸ್‌ಪೋರ್ಟ್, ಪಡಿತರ ಚೀಟಿ (Ration card), ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್ ಇವುಗಳಲ್ಲಿ ಯಾವುದಾದರು ಒಂದನ್ನು ಸಲ್ಲಿಸಬೇಕು.

ಇದನ್ನೂ ಓದಿ-Mutual Fund Investment: ಮ್ಯೂಚವಲ್ ಫಂಡ್ ಹೂಡಿಕೆಗೂ ಮುನ್ನ ಈ 5 ಸಂಗತಿಗಳು ನಿಮಗೆ ತಿಳಿದಿರಲಿ, ಲಾಭ ನಿಮ್ಮದಾಗಲಿದೆ

ಎಲ್ಲಿಯವರೆಗೆ ಹೂಡಿಕೆ ಮಾಡಬಹುದು ? 
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಗಳಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷದ ನಂತರ ಮದುವೆಯಾಗುವವರೆಗೆ ಹೂಡಿಕೆ ಮಾಡಬಹುದು. ಆದರೆ, ಪ್ರತಿ ವರ್ಷ ಕನಿಷ್ಠ ಠೇವಣಿ 250 ರೂ.ಗಳನ್ನು ಮಾಡದಿದ್ದರೆ, ಖಾತೆಯನ್ನು ಮುಚ್ಚಲಾಗುತ್ತದೆ. ನಂತರ ಆ ವರ್ಷಕ್ಕೆ ಜಮಾ ಮಾಡಬೇಕಾದ ಕನಿಷ್ಠ ಮೊತ್ತವನ್ನು ವಾರ್ಷಿಕ 50 ರೂ ದಂಡದೊಂದಿಗೆ ರಿವೈಸ್ ಮಾಡಬೇಕು. ಖಾತೆ ತೆರೆದ ನಂತರ 15 ವರ್ಷಗಳವರೆಗೆ ರಿ ಆಕ್ಟಿವೆಶನ್ ಮಾಡಬಹುದು. 

ಇದನ್ನೂ ಓದಿ-Mutual Fund ಗಳಲ್ಲಿ ಮೊಟ್ಟಮೊದಲ ಬಾರಿಗೆ ಹೂಡಿಕೆ ಮಾಡಬೇಕೆ? ಉತ್ತಮ ರಿಟರ್ನ್ ಪಡೆಯಲು ಈ ಅಂಶಗಳನ್ನು ನೆನಪಿನಲ್ಲಿಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News