ಮೆಲ್ಬೋರ್ನ್ ಮೂಲದ ಆಯೇಷಾ ಮುಖರ್ಜಿ ಈ ಹಿಂದೆ ಆಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದರು.
ಮದುವೆಯಾಗಿ 8 ವರ್ಷಗಳ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್(Shikhar Dhawan) ಮತ್ತು ಅವರ ಪತ್ನಿ ಆಯೇಷಾ ಮುಖರ್ಜಿ(Ayesha Mukherjee) ಬೇರ್ಪಟ್ಟಿದ್ದಾರೆ. ಈ ಬಗ್ಗೆ ಸ್ವತಃ ಆಯೇಷಾ ತಮ್ಮಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ವಿಚ್ಛೇದನ ಎಂಬುದು ಬಹಳ ಕೆಟ್ಟ ಪದ ಎಂದು ನಾನು ಭಾವಿಸಿದ್ದೆ. ಆದರೆ ನನ್ನ ಜೀವನದಲ್ಲಿ 2 ಬಾರಿ ವಿಚ್ಛೇದನ ಪಡೆಯುವಂತಾಗಿದೆ. ಈ ಪದಗಳು ಎಷ್ಟು ದೊಡ್ಡದಾಗಿರುತ್ತವೆ ಮತ್ತು ನಮ್ಮ ಜೀವನದ ಭಾಗವಾಗಿರುತ್ತವೆ ಎಂಬುದು ತಮಾಷೆಯೇ ಸರಿ. ಮೊದಲ ಬಾರಿ ವಿಚ್ಛೇದನ(Divorcee) ಪಡೆದಾಗ ನಾನು ಬಹಳ ಹೆದರಿದ್ದೆ. ಆಗ ನನಗೆ ಸೋತ ಅನುಭವವಾಗಿತ್ತು. ನಾನೇನೋ ತಪ್ಪು ಮಾಡಿದ್ದೇನೆ ಅಂತಾ ಅನಿಸಿತ್ತು. ವಿಚ್ಛೇದನ ನಿಜಕ್ಕೂ ಕೆಟ್ಟ ಪದ’ ಎಂದು ಆಯೇಷಾ ಬರೆದುಕೊಂಡಿದ್ದಾರೆ.
ಮೆಲ್ಬೋರ್ನ್ ಮೂಲದ ಆಯೇಷಾ ಈ ಹಿಂದೆ ಆಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದರು. ಅವರಿಂದ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. 2009ರಲ್ಲಿ ಶಿಖರ್ ಧವನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಆಯೇಷಾ 2012ರಲ್ಲಿ ವಿವಾಹವಾಗಿದ್ದರು. ಇದೀಗ ಈ ದಂಪತಿಯ 8 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಮೊದಲಲು ಫೇಸ್ಬುಕ್ ನಲ್ಲಿ ಪರಿಚಿತರಾದರು. ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ಅವರು ಧವನ್ ದಂಪತಿಯ ಸಾಮಾನ್ಯ ಸ್ನೇಹಿತರಾಗಿದ್ದರು.
ಆಯೇಷಾ ಮುಖರ್ಜಿ ಮೆಲ್ಬೋರ್ನ್ ಮೂಲದ ಮಾಜಿ ಕಿಕ್ ಬಾಕ್ಸರ್ ಆಗಿದ್ದಾರೆ. ಅವರು ಯಶಸ್ವಿ ಕಿಕ್ ಬಾಕ್ಸರ್ ಆಗಿದ್ದು, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಖ್ಯಾತಿ ಹೊಂದಿದ್ದಾರೆ.
ಶಿಖರ್ ಧವನ್ ಅವರನ್ನು ಮದುವೆಯಾಗುವ ಮೊದಲು ಆಯೇಷಾ ಮುಖರ್ಜಿ ಮೊದಲು ಆಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದರು. 2000ರಲ್ಲಿ ಈ ದಂಪತಿಗೆ ಮೊದಲ ಮಗು ಜನಿಸಿತ್ತು. ಅಕ್ಕೆ ಆಲಿಯಾ ಎಂದು ಹೆಸರಿಟ್ಟಿದ್ದರು. 2005ರಲ್ಲಿ ರಿಯಾ ಎಂಬ ಇನ್ನೊಬ್ಬ ಮಗಳಿಗೆ ಜನ್ಮ ನೀಡಿದರು.
ಆಯೇಷಾ ಮುಖರ್ಜಿ ಮೂಲತಃ ಆಂಗ್ಲೋ-ಇಂಡಿಯನ್. ಭಾರತೀಯ ತಂದೆ ಮತ್ತು ಬ್ರಿಟಿಷ್ ಮೂಲದ ತಾಯಿಗೆ ಅವರು ಜನಿಸಿದ್ದಾರೆ. ಆಯೆಷಾ ಅವರ ಜನನದ ನಂತರ ಅವರ ಕುಟುಂಬ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡಿತ್ತು. ಪ್ರಸ್ತುತ ಅವರು ಮೆಲ್ಬೋರ್ನ್ನಲ್ಲಿ ನೆಲೆಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಆಗಸ್ಟ್ 27, 1975 ರಂದು ಜನಿಸಿದರು. ಈ ವರ್ಷ ಅವರು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.