Astrology: ಈ ಐದು ರಾಶಿಯ ಜನರು ಅತ್ಯುತ್ತಮ ಕೆಲಸಗಾರರು, ನಿಮ್ಮ ತಂಡದಲ್ಲಿದ್ದಾರೆಯೇ?

Astrology - ಪ್ರತಿಯೊಬ್ಬ ವ್ಯಕ್ತಿಯು ತನ್ನ ಕಾರ್ಯಸ್ಥಳದಲ್ಲಿ (Workplace)  ಕನಿಷ್ಠ ಅಂದರೆ 8 ರಿಂದ 10 ಗಂಟೆಗಳ ಕಾಲ ಕಳೆಯುತ್ತಾನೆ. ಅದು ಉದ್ಯೋಗದಲ್ಲಾಗಲಿ (Job)  ಅಥವಾ ವ್ಯವಹಾರದಲ್ಲಾಗಲಿ (Business). ಇಂತಹ ಪರಿಸ್ಥಿತಿಯಲ್ಲಿ, ಆತನ ಕಛೇರಿ ಅಥವಾ ಅಂಗಡಿಯ ವಾತಾವರಣ ಚೆನ್ನಾಗಿರಬೇಕು.

Astrology - ಪ್ರತಿಯೊಬ್ಬ ವ್ಯಕ್ತಿಯು ತನ್ನ ಕಾರ್ಯಸ್ಥಳದಲ್ಲಿ (Workplace)  ಕನಿಷ್ಠ ಅಂದರೆ 8 ರಿಂದ 10 ಗಂಟೆಗಳ ಕಾಲ ಕಳೆಯುತ್ತಾನೆ. ಅದು ಉದ್ಯೋಗದಲ್ಲಾಗಲಿ (Job)  ಅಥವಾ ವ್ಯವಹಾರದಲ್ಲಾಗಲಿ (Business). ಇಂತಹ ಪರಿಸ್ಥಿತಿಯಲ್ಲಿ, ಆತನ ಕಛೇರಿ ಅಥವಾ ಅಂಗಡಿಯ ವಾತಾವರಣ ಚೆನ್ನಾಗಿರಬೇಕು. ಅವರಿಗೆ ಉದ್ಯೋಗಿಗಳು (Best Employees) ಅಥವಾ ಸಹೋದ್ಯೋಗಿಗಳು (Colleagues) ಉತ್ತಮ ಬೆಂಬಲ ನೀಡಬೇಕು. ಅವರ ಕಾರ್ಯಕ್ಷಮತೆ ಉತ್ತಮವಾಗಿರಬೇಕು, ಇದರಿಂದ ನಿಗದಿತ ಗುರಿಗಳನ್ನು ಸಮಯಕ್ಕೆ ಸರಿಯಾಗಿ ಸಾಧಿಸಬಹುದು. ಜ್ಯೋತಿಷ್ಯದ ಮೂಲಕ, ಯಾವ ರಾಶಿಚಕ್ರದ (Zodiac Sign) ಜನರು ಅತ್ಯುತ್ತಮ ಉದ್ಯೋಗಿಗಳು ಅಥವಾ ಸಹೋದ್ಯೋಗಿಗಳು ಎಂದು ಸಾಬೀತಾಗುತ್ತಾರೆ ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-RSS Chief: ಭಾರತದಲ್ಲಿ ವಾಸಿಸುವ ಹಿಂದೂ-ಮುಸ್ಲಿಮರ ಪೂರ್ವಜರು ಒಂದೇ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ವೃಷಭ - ಈ ರಾಶಿಚಕ್ರದ ಜನರು ತಾವು ಉತ್ತಮ ಉದ್ಯೋಗಿಗಳು  ಅಥವಾ ನೌಕರರು ಎಂದು ಸಾಬೀತುಪಡಿಸುತ್ತಾರೆ ಏಕೆಂದರೆ ಇವರು ಕಷ್ಟಪಟ್ಟು ಕೆಲಸ ಮಾಡುವವರು, ಪ್ರಾಮಾಣಿಕರು, ತಮ್ಮ ಬದ್ಧತೆಯಲ್ಲಿ ದೃಢವಾದವರು ಮತ್ತು ವಿಶ್ವಾಸಾರ್ಹರು ಆಗಿರುತ್ತಾರೆ. ಇದರ ಹೊರತಾಗಿ, ಇವರು ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ ಮತ್ತು ಯಾವಾಗಲೂ ತಮ್ಮನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ. ಅವರ ಚಿಂತನೆಯೂ ಅವರ ಕೆಲಸದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರ ಕೆಲಸ ಮತ್ತು ಕಲಿಕೆಯ ವೇಗವು ಹೆಚ್ಚಾಗಿರುತ್ತದೆ.. ಗಡುವುಗಿಂತ ಮುಂಚಿತವಾಗಿ ಕೆಲಸವನ್ನು ಮುಗಿಸುವಲ್ಲಿ ಇವರು ನಿಷ್ಣಾತರು.

2 /5

2. ಕನ್ಯಾ - ಈ ರಾಶಿಚಕ್ರದ ಜನರು ಪ್ರತಿಯೊಂದು ಕೆಲಸವನ್ನು ಅತ್ಯಂತ ಎಚ್ಚರಿಕೆಯಿಂದ ಮಾಡುತ್ತಾರೆ. ಈ ಕಾರಣದಿಂದಾಗಿ, ಇವರ ಕೆಲಸದಲ್ಲಿ ಯಾವುದೇ ತಪ್ಪುಗಳಿರುವುದಿಲ್ಲ ಮತ್ತು ಇವರ ಯಾವುದೇ ಕೆಲಸ ಅಪೂರ್ಣವಾಗಿ ಉಳಿಯುವದಿಲ್ಲ. ಯೋಜನೆಯಲ್ಲಿ ಮುಂದುವರಿಯುವ ಮೊದಲು ಇವರು ಪ್ರತಿಯೊಂದು ವಿವರಗಳ ಮೇಲೆ ಕಣ್ಣಿಡುತ್ತಾರೆ, ಆದರೆ, ಈ ಕಾರಣದಿಂದಾಗಿ ಇವರ ಕೆಲಸದ ವೇಗ ಸ್ವಲ್ಪ ನಿಧಾನವಾಗುತ್ತದೆ. ಸಣ್ಣ ತಪ್ಪನ್ನು ಕೂಡ ಹಿಡಿಯುವ ಅದ್ಭುತ ಸಾಮರ್ಥ್ಯ ಇವರಲ್ಲಿದೆ.

3 /5

3. ಕರ್ಕ - ಈ ರಾಶಿಚಕ್ರದ ಜನರು ಉತ್ತಮ ಸಹೋದ್ಯೋಗಿಗಳಾಗಿರುತ್ತಾರೆ. ಇವರು ತಮ್ಮ ಗೆಳೆಯರ ಬಗ್ಗೆ ಕಾಳಜಿ ವಹಿಸುತ್ತಾರೆ, ಅವರ ಆಸಕ್ತಿಗಳ ಬಗ್ಗೆ ಯೋಚಿಸುತ್ತಾರೆ, ಇತರರಿಗೆ ಸಹಾಯ ಮಾಡುತ್ತಾರೆ. ತಂಡದ ಜನರ ಉತ್ಸಾಹವನ್ನು ಹೆಚ್ಚಿಸುವಲ್ಲಿ ಇದು ತುಂಬಾ ಉತ್ತಮ ಎಂದು ಸಾಬೀತುಪಡಿಸುತ್ತದೆ.

4 /5

4. ತುಲಾ - ಈ ರಾಶಿಚಕ್ರದ ಜನರು ಯಾವುದೇ ಒಂದು ಕಂಪನಿಗೆ ಆಸ್ತಿ ಇದ್ದಂತೆ. ಇವರು  ಬುದ್ಧಿವಂತ ಮತ್ತು ಆಕರ್ಷಕ. ಇವರು ತುಂಬಾ ಒಳ್ಳೆಯ ವೃತ್ತಿಪರರು, ಕಠಿಣ ಪರಿಶ್ರಮಿಗಳು ಮತ್ತು ಬುದ್ಧಿವಂತರು. ಇವರು ಯಾವುದೇ ಕೆಲಸದ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಆದರೆ ಅಂದನ್ನು ಮಾಡಿ ತೋರಿಸುವ ಪ್ರವೃತ್ತಿ ಇವರದ್ದಾಗಿರುತ್ತದೆ. ಇವರ ಸ್ವಭಾವ ನಿಮ್ಮ ತಂಡದ ಮನೋಬಲವನ್ನು ಕೂಡ ಹೆಚ್ಚಿಸುತ್ತದೆ.  

5 /5

5. ಮಕರ - ಈ ರಾಶಿಚಕ್ರದ ಜನರು ಸ್ವಯಂ ಪ್ರೇರಿತರಾಗಿರುತ್ತಾರೆ. ಇವರು ಯಾವುದೇ ಕೆಲಸಕ್ಕಾಗಿ ಇವರಿಗೆ ಹೇಳಬೇಕಾಗಿಲ್ಲ ಅಥವಾ ಸ್ಫೂರ್ತಿ ನೀಡಬೇಕಾಗಿಲ್ಲ. ತಾವೇ ಸ್ವತಃ ಮುಂದೆ ಬಂದು ಇವರು ಕಾರ್ಯವನ್ನು ತೆಗೆದುಕೊಂಡು ಅದನ್ನು ಸಮಯಕ್ಕೆ ಪೂರ್ಣಗೊಳಿಸುತ್ತಾರೆ. ಇವರು ತುಂಬಾ ದೃಢಸಂಕಲ್ಪ ಹೊಂದಿದವರಾಗಿರುತ್ತಾರೆ.