INTERNET ಇಲ್ಲದೆಯೂ ಕೂಡ UPI ಮೂಲಕ ಆನ್ಲೈನ್ ಪೇಮೆಂಟ್ ಮಾಡಬಹುದು! ಹೇಗೆ?

Offline UPI Payment - ಇಂಟರ್ನೆಟ್ ಇಲ್ಲದಿದ್ದರೂ ಸಹ ನೀವು ಯುಪಿಐ ಮೂಲಕ ಹಣ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಆಫ್‌ಲೈನ್ ಮೋಡ್ ಸಹ ಇದೆ, ಅದರ ಮೂಲಕ ನೀವು ಸುಲಭವಾಗಿ UPI ಪಾವತಿಗಳನ್ನು ಮಾಡಬಹುದು. ಹಾಗಾದರೆ ಬನ್ನಿ ಆಫ್ಲೈನ್ UPI ಹಣ ಪಾವತಿ ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Sep 7, 2021, 11:29 AM IST
  • ಇಂಟರ್ನೆಟ್ ಇಲ್ಲದೆಯೇ ನೀವು UPI ಪೇಮೆಂಟ್ ಮಾಡಬಹುದು.
  • UPI ಮೂಲಕ ಪೇಮೆಂಟ್ ಮಾಡಲು ಆಫ್ ಲೈನ್ ಮೋಡ್ ಕೂಡ ಇದೆ
  • *99# USSD ಕೋಡ್ ಅನ್ನು ಬಳಕೆ ಮಡಿ UPI ಪೇಮೆಂಟ್ ಮಾಡಬಹುದು.
INTERNET ಇಲ್ಲದೆಯೂ ಕೂಡ UPI ಮೂಲಕ ಆನ್ಲೈನ್ ಪೇಮೆಂಟ್ ಮಾಡಬಹುದು! ಹೇಗೆ? title=
Offline UPI Payment (File Photo)

ನವದೆಹಲಿ: Offline UPI Payment Mode - ಯುಪಿಐ ಮೂಲಕ ಆನ್‌ಲೈನ್ ಪಾವತಿ  (Online Payment)ಮಾಡುವಲ್ಲಿ ನಾವು ಅನೇಕ ಬಾರಿ ಸಮಸ್ಯೆಯನ್ನು ಎದುರಿಸುತ್ತೇವೆ. ನಿಧಾನಗತಿಯ ಅಂತರ್ಜಾಲದ ಕಾರಣ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತವೆ. ಆದರೆ ನೀವು ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಮೂಲಕ ಹಣ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, UPI ಮೂಲಕ ಪಾವತಿ ಮಾಡಲು ಆಫ್‌ಲೈನ್ ಮೋಡ್ ಕೂಡ ಇದೆ. ನೆಟ್‌ವರ್ಕ್ ಇಲ್ಲದಿರುವಲ್ಲಿ ಅಥವಾ ನಿಮಗೆ ಇಂಟರ್‌ನೆಟ್‌ ಇಲ್ಲದಿರುವಲ್ಲಿ, ನೀವು ಆಫ್‌ಲೈನ್ ಮೋಡ್ (Online Payment Without Internet) ಮೂಲಕವೂ ಹಣ ಪಾವತಿಸಲು ಇದರಿಂದ ಸಾಧ್ಯವಾಗುತ್ತದೆ.

ಆಫ್ಲೈನ್ ಮೋಡ್ ಪೇಮೆಂಟ್ 
*99# USSD ಕೋಡ್ ಅನ್ನು ಬಳಸಿ ನೀವು ಆಫ್ಲೈನ್ ಮೋಡ್ ನಲ್ಲಿ UPI ಹಣ ಪಾವತಿ ಮಾಡಬಹುದಾಗಿದೆ. ಈ ಮೋಡ್ ಅನ್ನು ಎಲ್ಲಾ ಮೊಬೈಲ್ ಬಳಕೆದಾರರಿಗೆ ಪ್ರಸ್ತುತಪಡಿಸಲಾಗಿದೆ. ಅಂದರೆ, ಈ ಸೇವೆಯನ್ನು ಬಳಸಲು ನಿಮ್ಮ ಬಳಿ ಸ್ಮಾರ್ಟ್ ಫೋನ್ ಇರುವ ಅವಶ್ಯಕತೆ ಇಲ್ಲ. ಆದರೆ, *99#  ಮೂಲಕ UPI ಪೇಮೆಂಟ್ ಮಾಡಲು ನಿಮ್ಮ ಫೋನ್ ನಂಬರ್ ಬ್ಯಾಂಕ್ ಜೊತೆಗೆ ನೋಂದಣಿಯಾಗಿರಬೇಕು.

ಇದನ್ನೂ ಓದಿ-SBI ಗ್ರಾಹಕರೇ ಗಮನಿಸಿ : ಇಂದು 2 ಗಂಟೆ ಬಂದ್ ಇರುತ್ತೆ ಈ Online ಬ್ಯಾಂಕಿಂಗ್ ಸೇವೆ!

ಇದೆ ಏಕಮಾತ್ರ ವಿಧಾನ
ಈ ವೈಶಿಷ್ಟ್ಯವು ಮೊದಲಿನಿಂದಲೂ ಇದ್ದರೂ ಕೂಡ ಅದು ಅಷ್ಟೊಂದು ಜನಪ್ರಿಯವಾಗಿಲ್ಲ. ಇಂಟರ್ನೆಟ್ ಲಭ್ಯವಿಲ್ಲದಿದ್ದಾಗ ಮಾತ್ರ ಸ್ಮಾರ್ಟ್ಫೋನ್ ಬಳಕೆದಾರರು ಇದನ್ನು ಬಳಸುತ್ತಾರೆ. ಆದರೆ, *99# USSD ಫೀಚರ್ ಫೋನ್ ಬಳಕೆದಾರರಿಗೆ UPI ಪಾವತಿಯ ಏಕೈಕ ವಿಧಾನವಾಗಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ -ICICI Bank: ಯುಪಿಐ ಐಡಿಯೊಂದಿಗೆ ವ್ಯವಹಾರ ನಡೆಸಲು ಇದರ ಅಗತ್ಯವಿಲ್ಲ

ಇಂಟರ್ನೆಟ್ ಸಹಾಯ ಇಲ್ಲದೆ ಈ ರೀತಿ UPI ಪೇಮೆಂಟ್ (UPI Payment)ಮಾಡಿ
>> ಎಲ್ಲಕ್ಕಿಂತ ಮೊದಲು ನಿಮ್ಮ ಫೋನ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.
>> ಈಗ ನಿಮ್ಮ ಫೋನಿನ ಡಯಲರ್ ತೆರೆಯಿರಿ ಮತ್ತು *99#ನಮೂದಿಸಿದ ನಂತರ, ಕರೆ ಬಟನ್ ಮೇಲೆ ಟ್ಯಾಪ್ ಮಾಡಿ.
>> ಇದರ ನಂತರ ನೀವು ಹಲವು ಆಯ್ಕೆಗಳನ್ನು ಹೊಂದಿರುವ ಮೆನುವನ್ನು ನೋಡುತ್ತೀರಿ. >> ಆದರೆ, ನಾವು ಹಣವನ್ನು ಮಾತ್ರ ಕಳುಹಿಸಬೇಕಾಗಿರುವುದರಿಂದ, '1' ಒತ್ತಿ ಮತ್ತು ಕಳುಹಿಸಿ.
>> ಇದರ ನಂತರ, ನೀವು ರಿಸೀವರ್‌ಗೆ ಪಾವತಿ ಮಾಡಲು ಬಯಸುವ ಆಯ್ಕೆಯನ್ನು ಆರಿಸಿ. ಉದಾಹರಣೆಗೆ, ನಿಮ್ಮ ಮುಂದೆ ಮೊಬೈಲ್ ಸಂಖ್ಯೆ ಇದ್ದರೆ, ನೀವು ಇಲ್ಲಿ 1 ಅನ್ನು ಆಯ್ಕೆ ಮಾಡಬೇಕು.
>> ಇಲ್ಲಿಗೆ ಬಂದು ಸ್ವೀಕರಿಸುವವರ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
>> ಇದರ ನಂತರ, ಮೊತ್ತವನ್ನು ಇಲ್ಲಿ ಬರೆಯಿರಿ ಮತ್ತು ಕಳುಹಿಸು ಒತ್ತಿರಿ.
>> ಇದರ ನಂತರ, ಪಾವತಿಯ ಬಗ್ಗೆ ಟಿಪ್ಪಣಿ ಬರೆಯಿರಿ.
>> ನಂತರ ವಹಿವಾಟು ಪೂರ್ಣಗೊಳಿಸಲು ನಿಮ್ಮ UPI ಪಿನ್ ನಮೂದಿಸಿ.
>> ಇದರ ನಂತರ ನಿಮ್ಮ ವಹಿವಾಟು ಇಂಟರ್ನೆಟ್ ಇಲ್ಲದೆ ಪೂರ್ಣಗೊಳ್ಳುತ್ತದೆ.
>> UPI ಅನ್ನು *99# ಬಳಸಿ ಮಾತ್ರ ನಿಷ್ಕ್ರಿಯಗೊಳಿಸಬಹುದು.

ಇದನ್ನೂ ಓದಿ-Google Pay ಬಳಕೆದಾರರಿಗೆ ಸಿಗಲಿದೆ ಈ ಹೊಸ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News