Beauty Tips: ಕಾಂತಿಯುತ ಮುಖಕ್ಕಾಗಿ ನಿತ್ಯ ಬೆಳಗ್ಗೆ ಈ ಕೆಲಸ ತಪ್ಪದೆ ಮಾಡಿ

Hot Lamon Water Benefits - ದಿನದ ಆರೋಗ್ಯಕರ ಆರಂಭ ಯಾವುದು? ಎಂದು ಯಾರಾದರು ನಿಮ್ಮನ್ನು ಪ್ರಶ್ನಿಸಿದರೆ, ನೀವು ಯೋಗಾಸನ ಅಥವಾ ಬೆಳಗಿನ ನಡಿಗೆಯನ್ನು ಹೇಳಬಹುದು, ಅದು ಸಂಪೂರ್ಣವಾಗಿ ಸರಿಯಾಗಿದೆ, ಆದರೆ ಯೋಗ ಮತ್ತು ಬೆಳಗಿನ ನಡಿಗೆಯ ನಂತರ, ನೀವು ಆರೋಗ್ಯಕರ ಆಹಾರದೊಂದಿಗೆ ದಿನವನ್ನು ಆರಂಭಿಸಲು ಬಯಸಿದರೆ, ನಂತರ ಬಿಸಿ ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದು ಕೂಡ ಒಂದು ಆರೋಗ್ಯಕರ ಆಯ್ಕೆಯಾಗಿದೆ.

Hot Lamon Water Benefits - ದಿನದ ಆರೋಗ್ಯಕರ ಆರಂಭ ಯಾವುದು? ಎಂದು ಯಾರಾದರು ನಿಮ್ಮನ್ನು ಪ್ರಶ್ನಿಸಿದರೆ, ನೀವು ಯೋಗಾಸನ ಅಥವಾ ಬೆಳಗಿನ ನಡಿಗೆಯನ್ನು ಹೇಳಬಹುದು, ಅದು ಸಂಪೂರ್ಣವಾಗಿ ಸರಿಯಾಗಿದೆ, ಆದರೆ ಯೋಗ ಮತ್ತು ಬೆಳಗಿನ ನಡಿಗೆಯ ನಂತರ, ನೀವು ಆರೋಗ್ಯಕರ ಆಹಾರದೊಂದಿಗೆ ದಿನವನ್ನು ಆರಂಭಿಸಲು ಬಯಸಿದರೆ, ನಂತರ ಬಿಸಿ ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದು ಕೂಡ ಒಂದು ಆರೋಗ್ಯಕರ (Health Tips) ಆಯ್ಕೆಯಾಗಿದೆ. ಇದು ನಿಮ್ಮನ್ನು ಶಕ್ತಿಯುತವಾಗಿರಿಸುವುದಲ್ಲದೆ, ನಿಮ್ಮ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ. ಬನ್ನಿ, ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನಲ್ಲಿ ನಿಂಬೆ ರಸವನ್ನು (Lamon Water Health Benefits) ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

 

ಇದನ್ನೂ ಓದಿ-ಆಗಾಗ ಕಾಣಿಸಿಕೊಳ್ಳುವ ಹೊಟ್ಟೆಯ ಸಮಸ್ಯೆಗೆ ಈ ಮನೆ ಮದ್ದುಗಳನ್ನು ಬಳಸಿ ನೋಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

1. ಜೀರ್ಣ ಕ್ರಿಯೆ ಸುಧಾರಿಸುತ್ತದೆ - ನಾವು ತಿನ್ನುವ ಆಹಾರ, ಆಹಾರ ನಾಳದ ಮೂಲಕ ಹಾದು ಹೊಟ್ಟೆಗೆ ಸೇರುತ್ತದೆ. ಚೆನ್ನಾಗಿ ನಿದ್ರೆ ಮಾಡಿ ಎದ್ದಾಕ್ಷಣ ಕೆಲ ಆಹಾರದ ಕಣಗಳು ಅನ್ನನಾಳದಲ್ಲಿಯೇ ಸಿಲುಕಿಕೊಂಡಿರುತ್ತವೆ. ಹೀಗಿರುವಾಗ ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಈ ಕಣಗಳು ಹೊರಹೋಗುತ್ತವೆ.

2 /6

2. ಇಮ್ಯೂನಿಟಿ ಹೆಚ್ಚಾಗುತ್ತದೆ (Imunity Booster) - ನಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ತೆಗೆದುಕೊಳ್ಳುವುದರಿಂದ ದೇಹ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ದೇಹವು ದಿನವಿಡೀ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಮತ್ತು ಅವುಗಳ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.  

3 /6

3. ತೂಕ ಇಳಿಕೆಗೆ ಉತ್ತಮ - ತೂಕ ಇಳಿಕೆಯ ವಿಷಯಕ್ಕೆ ಬಂದಾಗ, ಬೆಚ್ಚನೆಯ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಸೇವಿಸಲು ಮೊದಲು ಸೂಚಿಸಲಾಗುತ್ತದೆ. ಬಿಸಿ ನಿಂಬೆ ನೀರು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ, ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಬೆಳಗ್ಗೆ ಚಹಾ ಅಥವಾ ಕಾಫಿ ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವುದಲ್ಲದೆ, ಸಕ್ಕರೆಯ ಮಟ್ಟದ ಮೇಲೂ ಪರಿಣಾಮ ಬೀರುತ್ತದೆ.

4 /6

4. ಹೊಳಪಾದ ತ್ವಚೆ ಪಡೆಯಲು ಉತ್ತಮ - ನಿಂಬೆಯಲ್ಲಿರುವ ವಿಟಮಿನ್ ಸಿ ಕೊಲಜನ್ ರಚನೆಗೆ ಅವಶ್ಯಕವಾಗಿದೆ. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಚರ್ಮದ ಆರೈಕೆಯಲ್ಲಿ ಜಲಸಂಚಯನ ಕೂಡ ಬಹಳ ಮುಖ್ಯ. ಬೆಳಗ್ಗೆ ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದರಿಂದ ವಿಷಕಾರಿ ವಸ್ತುಗಳು ಹೊರಹೋಗುತ್ತವೆ ಮತ್ತು ಚರ್ಮವು ಹೊಳೆಯುತ್ತದೆ.

5 /6

5. ಬಾಯಿಯ ದುರ್ವಾಸನೆ ತೊಲಗಿಸುತ್ತದೆ - ನಿಂಬೆ ಒಂದು ನೈಸರ್ಗಿಕ ಮೌತ್ ಫ್ರೆಶ್ನರ್ (Natural Mouth Freshner) ಆಗಿದೆ. ನಿತ್ಯ ಬೆಳಗ್ಗೆ ನಿಂಬೆ ಹಣ್ಣಿನ ನೀರನ್ನು ಕುಡಿಯುವುದರಿಂದ ಬಾಯಿಯ ದುರ್ವಾಸನೆ ತೊಲಗುತ್ತದೆ.

6 /6

6. ಮಲಬದ್ಧತೆ ನಿವಾರಣೆಯಾಗುತ್ತದೆ - ನಿಂಬೆ ಹಣ್ಣಿನ ಕೆಲ ಹನಿಗಳನ್ನು ಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆ ಆರೋಗ್ಯಕರವಾಗಿರುತ್ತದೆ. ಒಂದು ವೇಳೆ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆ ಇದ್ದರೆ, ನಿತ್ಯ ಬೆಳಗ್ಗೆ ನಿಂಬೆ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ.