ನವದೆಹಲಿ: ಮುಂಬೈ ಬಾಬ್ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಆಸ್ತಿ ವಶಪಡಿಸಿಕೊಳ್ಳದಿರಲು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ದಾವೂದ್ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದೆ.
ದಾವೂದ್ ತಾಯಿ ಅಮೀನಾ ಬಿ(ವಿಧಿವಶರಾಗಿರುವ ಇವರ ಕಾನೂನುಸಮ್ಮತ ಪ್ರತಿನಿಧಿಗಳು) ಮತ್ತು ಸಹೋದರಿ ಹಸೀನಾ ಇಬ್ರಾಹಿಂ ಪಾರ್ಕರ್ ಅವರು ಮುಂಬೈಯಲ್ಲಿರುವ ದಾವೂದ್ ಒಡೆತನದ ಮನೆ ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಆರ್.ಕೆ. ಅಗರ್ವಾಲ್ ನೇತೃತ್ವದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ವಿದೇಶಿ ವಿನಿಮಯ ವಂಚಕರು ಮತ್ತು ಕಳ್ಳಸಾಗಣಿಕೆದಾರರ ವಿರುದ್ಧ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಇರುವ ಕಾನೂನಿನ ಅಡಿಯಲ್ಲಿ ತಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಾರದೆಂದು ಇವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.