/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

UGC New Online Courses - ಯುಜಿಸಿ ದೇಶಾದ್ಯಂತ ವಿವಿಧ ಕೇಂದ್ರ ಮತ್ತು ಇತರ ವಿಶ್ವವಿದ್ಯಾಲಯಗಳಿಗೆ ನಿಯಮಗಳನ್ನು ಸಡಿಲಿಸಿದೆ. ಇದರ ಅಡಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕದ ಬಳಿಕವೂ ಕೂಡ ದೂರಶಿಕ್ಷಣದ ಮೂಲಕ ಆನ್‌ಲೈನ್ ಕೋರ್ಸ್‌ಗಳು ಮತ್ತು ಇತರ ಪ್ರಮುಖ ಕೋರ್ಸ್‌ಗಳನ್ನು ನಡೆಸಲು ನಿಯಮಿತ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಲಾಗುವುದು ಎನ್ನಲಾಗಿದೆ.

123 ಹೊಸ ಆನ್ಲೈನ್ ಕೋರ್ಸ್ ಗಳು (UGC New Online Courses)
ದೇಶಾದ್ಯಂತದ ವಿಶ್ವವಿದ್ಯಾಲಯ ಗಳಲ್ಲಿ 123 ವಿವಿಧ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಲು UGC ನಿರ್ಧರಿಸಿದೆ. ಇವುಗಳಲ್ಲಿ 40 ಕೋರ್ಸ್ ಗಳು ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಗಳಿಗೆ ಹಾಗೂ 83 ಕೋರ್ಸ್ ಗಳು ಪದವಿಪೂರ್ವ (ಯುಜಿ) ವಿದ್ಯಾರ್ಥಿಗಳಿಗೆ ಇರಲಿವೆ ಎಂದು ನಿರ್ಧರಿಸಲಾಗಿದೆ.

ದೇಶಾದ್ಯಂತ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
ದೇಶಾದ್ಯಂತ ಇರುವ ವಿದ್ಯಾರ್ಥಿಗಳು ಈ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಆನ್ಲೈನ್ ಕೋರ್ಸ್ ಪ್ಲಾಟ್ ಫಾರ್ಮ್ 'SWAYAM' ಮೂಲಕ ಅಥವಾ 'ಸ್ಟಡಿ ವೆಬ್ಸ್ ಆಫ್ ಆಕ್ಟಿವ್ ಲರ್ನಿಂಗ್ ಫಾರ್ ಯಂಗ್ ಅಸ್ಪೈರಿಂಗ್ ಮೈಂಡ್ಸ್ (Study Webs of Active-Learning for Young Aspiring Minds)' ಮೂಲಕ ಅರ್ಜಿ ಸಲ್ಲಿಸಬಹುದು. ಸಿಲೆಬಸ್ ಹಾಗೂ ಶೈಕ್ಷಣಿಕ ಅರ್ಹತೆಯ ಮಾಹಿತಿಗಾಗಿ ವಿದ್ಯಾರ್ಥಿಗಳು UGC ವೆಬ್ ಸೈಟ್ ಗೆ ಭೇಟಿ ನೀಡಬಹುದು.

ಆನ್ಲೈನ್ ಗಾಗಿ ಹಲವು ಉಪಾಯಗಳು
ಈ ಕುರಿತು ಮಾತನಾಡಿರುವ UGC ಅಧ್ಯಕ್ಷ ಡಿ.ಪಿ. ಸಿಂಗ್, "ಪಠ್ಯಕ್ರಮಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ ಮೇಲೆ ಲಭ್ಯವಾಗಿಸಲು ಹಲವು ಉಪಾಯಗಳನ್ನು ಮಾಡಲಾಗಿದೆ. ಈ ಉದ್ದೇಶಕ್ಕಾಗಿಯೇ 'ಸ್ವಯಂ (SWAYM Online Learning Platform)', 'ಸ್ವಯಂ ಪ್ರಭಾ', 'ರಾಷ್ಟ್ರೀಯ ಶೈಕ್ಷಣಿಕ ಡಿಪಾಸಿಟರಿ (NAD) ಹಾಗೂ ಇತರ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಕುರಿತು ಚರ್ಚೆ ನಡೆಸಲಾಗಿದೆ. ಈ UGC ಉಪಕ್ರಮದ ಅಡಿ ನಾವು ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣದ ಮುಖ್ಯಧಾರೆಗೆ ತಂದಿದ್ದೇವೆ" ಎಂದಿದ್ದಾರೆ. 

ಇದನ್ನೂ ಓದಿ-National Monetisation Pipeline: ರಾಷ್ಟ್ರೀಯ ಹಣಗಳಿಕೆ ಪೈಪ್ಲೈನ್ ಬಿಡುಗಡೆಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನಿದು NMP?

ಎಲ್ಲಾ ವಿವಿಗಳಿಗೆ ನೋಟಿಸ್ ಕಳುಹಿಸಲಾಗಿದೆ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency) ಈ ಪರೀಕ್ಷೆಗಳನ್ನು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ತಾಂತ್ರಿಕೇತರ ಯುಜಿ ಮತ್ತು ಪಿಜಿ ಕೋರ್ಸ್‌ಗಳಿಗಾಗಿ ಜನವರಿ-ಏಪ್ರಿಲ್ 2021 ಸೆಮಿಸ್ಟರ್‌ನಲ್ಲಿ ನಡೆಸುತ್ತದೆ. ಯುಜಿಸಿ ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ 'ಸ್ವಯಂ' ಮೂಲಕ ನಡೆಸುವ ಪರೀಕ್ಷೆಗಳ ಬಗ್ಗೆ ನೋಟಿಸ್ ಕಳುಹಿಸಿದೆ. ಸ್ವಯಂ ದೇಶಾದ್ಯಂತ ಇರುವ ಎಲ್ಲಾ ವಿದ್ಯಾರ್ಥಿಗಳು, ಕೆಲಸ ಮಾಡುವ ವೃತ್ತಿಪರರು, ಜೀವನಪೂರ್ತಿ ಕಲಿಯುವವರು ಮತ್ತು ಇತರ ಎಲ್ಲರಿಗೂ ತಾಂತ್ರಿಕವಲ್ಲದ ಯುಜಿ ಮತ್ತು ಪಿಜಿ ಕೋರ್ಸ್‌ಗಳನ್ನು ನೀಡುತ್ತದೆ.

ಇದನ್ನೂ ಓದಿ-ಇದು ಕೊನೆಯ ಅವಕಾಶ , ಆಧಾರ್ ಗೆ ಸಂಬಂಧಿಸಿದ ಈ ಕೆಲಸ ಮಾಡದೆ ಹೋದರೆ ಕಟ್ಟಬೇಕು 10 ಸಾವಿರ ರೂ ದಂಡ

ಇನ್ನೊಂದೆಡೆ, ಯುಜಿಸಿ ತನ್ನ ಸೂಚನೆಯಲ್ಲಿ ದೇಶದಾದ್ಯಂತದ ವಿವಿಧ ವಿಶ್ವವಿದ್ಯಾನಿಲಯಗಳಿಗೆ, ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ (Online Study), ಆಫ್‌ಲೈನ್ ಮತ್ತು ಮಿಶ್ರ ಕ್ರಮದಲ್ಲಿ ತರಗತಿಗಳನ್ನು ಆರಂಭಿಸಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ-7Th Pay Commission: ಸರ್ಕಾರಿ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ, ಮತ್ತೆ ಈ ಭತ್ಯೆ ಸಿಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
UGC New Online Courses:university grant commission for online courses for all universities falling under them
News Source: 
Home Title: 

Good News! ಕೊರೊನಾ ಕಾಲದಲ್ಲಿ ಆನ್ಲೈನ್ ಮೋಡ್ ನಲ್ಲಿ 123 ಹೊಸ ಕೋರ್ಸ್ ಆರಂಭಿಸಿದ UGC

Good News! ಕೊರೊನಾ ಕಾಲದಲ್ಲಿ ಆನ್ಲೈನ್ ಮೋಡ್ ನಲ್ಲಿ 123 ಹೊಸ ಕೋರ್ಸ್ ಆರಂಭಿಸಿದ UGC
Caption: 
UGC New Online Courses (File Photo)
Yes
Is Blog?: 
No
Tags: 
Facebook Instant Article: 
Yes
Highlights: 

ಯುಜಿಸಿ ಆನ್‌ಲೈನ್ ಮೋಡ್‌ನಲ್ಲಿ 123 ವಿವಿಧ ಕೋರ್ಸ್‌ಗಳನ್ನು ಆರಂಭಿಸಿದೆ.

 ಈ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಆನ್ಲೈನ್ ಕೋರ್ಸ್ ಪ್ಲಾಟ್ ಫಾರ್ಮ್ 'SWAYAM' ಮೂಲಕ ಅರ್ಜಿ ಸಲ್ಲಿಸಬಹುದು.

ಪಠ್ಯಕ್ರಮಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ ಮೇಲೆ ಲಭ್ಯವಾಗಿಸಲು ಹಲವು ಉಪಾಯಗಳನ್ನು ಮಾಡಲಾಗಿದೆ.

Mobile Title: 
Good News! ಕೊರೊನಾ ಕಾಲದಲ್ಲಿ ಆನ್ಲೈನ್ ಮೋಡ್ ನಲ್ಲಿ 123 ಹೊಸ ಕೋರ್ಸ್ ಆರಂಭಿಸಿದ UGC
Nitin Tabib
Publish Later: 
No
Publish At: 
Monday, August 23, 2021 - 19:05
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No