Viral Video: ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಚಿಕ್ಕಮಕ್ಕಳಂತೆ ಆಟವಾಡಿದ ತಾಲಿಬಾನ್ ಉಗ್ರರು..!

ಸಣ್ಣಮಕ್ಕಳಂತೆ ಭಯೋತ್ಪಾಕರು ಎಲೆಕ್ಟ್ರಿಕ್ ಬಂಪರ್ ಕಾರುಗಳಲ್ಲಿ ಸವಾರಿ ಮಾಡುತ್ತಾ ನಲಿದಾಡಿದ್ದಾರೆ.

Written by - Puttaraj K Alur | Last Updated : Aug 17, 2021, 02:11 PM IST
  • ಕಾಬೂಲ್‌ನ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ತಾಲಿಬಾನ್ ಉಗ್ರರು ಮೋಜು-ಮಸ್ತಿ ಮಾಡಿ ಕುಣಿದುಕುಪ್ಪಳಿಸಿದ್ದಾರೆ
  • ಕೈಯಲ್ಲಿ ರೈಫಲ್ ಮತ್ತು ಇನ್ನಿತರ ಆಯುಧ ಹಿಡಿದುಕೊಂಡೇ ಸಣ್ಣಮಕ್ಕಳಂತೆ ಭಯೋತ್ಪಾಕರು ಆಟವಾಡಿದ್ದಾರೆ
  • ಉಗ್ರರು ಮೋಜು-ಮಸ್ತಿ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ
Viral Video: ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಚಿಕ್ಕಮಕ್ಕಳಂತೆ ಆಟವಾಡಿದ ತಾಲಿಬಾನ್ ಉಗ್ರರು..!  title=
ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ತಾಲಿಬಾನ್ ಉಗ್ರರು ಆಟವಾಡಿದ್ದಾರೆ.

ಕಾಬೂಲ್: ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನವ(Afghanistan)ನ್ನೇ ತಮ್ಮ ಕೈವಶ ಮಾಡಿಕೊಂಡ ಬಳಿಕ ತಾಲಿಬಾನ್ ಉಗ್ರರು ಫುಲ್ ಜೋಶ್ ನಲ್ಲಿರುವಂತೆ ಕಾಣುತ್ತಿದ್ದಾರೆ. ಅಫ್ಘಾನ್ ಅಧ್ಯಕ್ಷರ ಕಚೇರಿ ಸೇರಿದಂತೆ ಎಲ್ಲ ಐಷಾರಾಮಿ ಸ್ಥಳಗಳಲ್ಲಿ ತಾಲಿಬಾನ್ ಭಯೋತ್ಪಾದಕರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಉಗ್ರರು ಮೋಜು-ಮಸ್ತಿ ಮಾಡುತ್ತಿರುವ ಹಲವಾರು ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ವೈರಲ್ ಆಗಿವೆ. ಇದೀಗ ಉಗ್ರರು ಸಣ್ಣಮಕ್ಕಳಂತೆ ಆಟವಾಡಿರುವ ವಿಡಿಯೋಗಳು ಕೂಡ ಹರಿದಾಡುತ್ತಿವೆ.

ಕಾಬೂಲ್‌ನ ಅಮ್ಯೂಸ್‌ಮೆಂಟ್ ಪಾರ್ಕ್‌(Kabul Amusement Park)ನಲ್ಲಿ ತಾಲಿಬಾನ್ ಉಗ್ರರು ಮೋಜು-ಮಸ್ತಿ ಮಾಡಿ ಕುಣಿದುಕುಪ್ಪಳಿಸಿದ್ದಾರೆ. ಕೈಯಲ್ಲಿ ರೈಫಲ್ ಮತ್ತು ಇನ್ನಿತರ ಆಯುಧಗಳನ್ನು ಹಿಡಿದುಕೊಂಡೇ ಸಣ್ಣಮಕ್ಕಳಂತೆ ಭಯೋತ್ಪಾಕರು ಆಟವಾಡಿದ್ದಾರೆ. ಎಲೆಕ್ಟ್ರಿಕ್ ಬಂಪರ್ ಕಾರುಗಳಲ್ಲಿ ಸವಾರಿ ಮಾಡುತ್ತಾ ನಲಿದಾಡಿದ್ದಾರೆ. ಜಂಪಿಂಗ್ ಜಂಪಾಂಗ್.. ಜಂಪಿಂಗ್ ಜಂಪಾಂಗ್.. ಅಂತಾ ರೋಪ್ ಜಂಪಿಂಗ್ ಮಾಡಿ ನಲಿದಾಡಿದ್ದಾರೆ.

ಇದನ್ನೂ ಓದಿ: Afghanistan Crisis: ಅಮೆರಿಕಾದ NSA ಜೊತೆಗೆ ಚರ್ಚೆ ನಡೆಸಿದ ಭಾರತದ NAS ಅಜೀತ್ ಡೊಭಾಲ್ ಹೇಳಿದ್ದೇನು?

ಅಫ್ಘಾನಿಸ್ತಾನದ ಎಲ್ಲ ಪ್ರದೇಶಗಳ ಮೇಲೂ ತಾಲಿಬಾನ್ ಉಗ್ರ(Taliban Militants)ಸಂಘಟನೆ ಹಿಡಿತ ಸಾಧಿಸಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಶ್ರಫ್ ಘನಿ(Ashraf Ghani)ಸರ್ಕಾರವನ್ನು ಉರುಳಿಸಿದ ಬಳಿಕ ಉಗ್ರರು ವಿಜಯೋತ್ಸವದ ಮೂಡ್ ನಲ್ಲಿದ್ದಾರೆ. ಇನ್ನುಮುಂದೆ ನಮ್ಮದೇ ದರ್ಬಾರ್ ಎಂಬಂತೆ ತಾಲಿಬಾನ್ ಉಗ್ರರು ಎಂಜಾಯ್ ಮಾಡುತ್ತಿದ್ದಾರೆ. ಮನೋರಂಜನಾ ಪಾರ್ಕ್‌ನಲ್ಲಿ ಮೋಜು-ಮಸ್ತಿ ಮಾಡುತ್ತಾ, ಜಿಮ್ ಗಳಲ್ಲಿ ಕಸರತ್ತು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ಕಾಬೂಲ್‌(Kabul)ನಲ್ಲಿರುವ ಅಧ್ಯಕ್ಷೀಯ ಅರಮನೆಯ ಮೇಲೆ ತಾಲಿಬಾನ್‌ಗಳು ಹಿಡಿತ ಸಾಧಿಸಿದಾಗಿನಿಂದ ಯುದ್ಧ ಪೀಡಿತ ದೇಶವನ್ನು ಸಾವಿರಾರು ಜನರು ತೊರೆಯಲು ನಿರ್ಧರಿಸಿದ್ದಾರೆ. ಉಗ್ರರ ನಡೆಯಿಂದ ಹತಾಶರಾಗಿರುವ ಅಫ್ಘಾನ್ ಪ್ರಜೆಗಳು ಜೀವ ಉಳಿದರೆ ಸಾಕು ಅಂತಾ ದೇಶಬಿಟ್ಟು ಹೋಗಲು ಸಜ್ಜಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿದೆ. ನಾ ಮುಂದು ತಾ ಮುಂದು ಎಂದು ವಿಮಾನವೇರಲು ಜನರು ಪೈಪೋಟಿ ನಡೆಸುತ್ತಿದ್ದಾರೆ. ಇದುವರೆಗೆ ನಡೆದ ಅವಘಡಗಳಲ್ಲಿ 10 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಜಾಗತಿಕ ಭಯೋತ್ಪಾದಕ ಬೆದರಿಕೆಯ ನಿಗ್ರಹಕ್ಕೆ ಜಗತ್ತು ಒಂದಾಗಬೇಕಾಗಿದೆ-ವಿಶ್ವಸಂಸ್ಥೆ

ಇನ್ನುಮುಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು(Taliban Militants) ಸರ್ಕಾರ ರಚಿಸುವುದರಿಂದ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಹೇಗಾದರೂ ಮಾಡಿ ದೇಶಬಿಟ್ಟು ಬೇರೆದೇಶಕ್ಕೆ ಹೋಗಬೇಕೆಂದು ಹಾತೊರೆಯುತ್ತಿದ್ದಾರೆ. ಸದ್ಯ ಎಲ್ಲ ಭರವಸೆಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಅಫ್ಘಾನ್ ಜನತೆ ಸಹಾಯಕ್ಕಾಗಿ ಎದುರು ನೊಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News