ರೊಮೇನಿಯಾ: ವಯಸ್ಸಾದಂತೆ ಮನುಷ್ಯರ ನೋಟ ಮತ್ತು ಆಕಾರ ಬದಲಾಗುತ್ತದೆ. ಪ್ರಾಣಿ ಪಕ್ಷಿಗಳಲ್ಲೂ ನಾವು ಇಂತಹ ಬದಲಾವಣೆಯನ್ನು ಕಾಣಬಹುದು. ಆದರೆ ಇದು ಕಲ್ಲುಗಳಲ್ಲೂ ಸಂಭವಿಸುತ್ತದೆ ಎಂದು ಕೇಳಿದರೆ ಯಾರಾದರೂ ಆಶ್ಚರ್ಯಪಡಬಹುದು. ಆದರೆ, ನಂಬಲಸಾಧ್ಯವಾದರೂ ಇದು ಸತ್ಯ. ವಾಸ್ತವವಾಗಿ, ಕಲ್ಲುಗಳ ಬಣ್ಣ ಮತ್ತು ಆಕಾರ ಕೂಡ ಬದಲಾಗುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಇಂತಹ ಸನ್ನಿವೇಶದಲ್ಲಿ, ರಹಸ್ಯಮಯ ಹಳ್ಳಿಯೊಂದರಲ್ಲಿ ಕಲ್ಲುಗಳು ತಮ್ಮ ಆಕಾರವನ್ನು ಎಷ್ಟು ಬೇಗನೆ ಬದಲಾಯಿಸುತ್ತವೆ ಎಂದರೆ ಅಲ್ಲಿನ ಜನರು ಕಲ್ಲುಗಳು ಕೂಡ ಜೀವಂತವಾಗಿವೆ ಎಂದು ಯೋಚಿಸಲು ಆರಂಭಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಈ ನಿಗೂಢ ಪ್ರದೇಶದಲ್ಲಿ ಕೇವಲ ಒಂದೆರಡಲ್ಲ, ಇಲ್ಲಿ ಆಕಾರ ಬದಲಿಸುವಂತಹ ಸಾವಿರಾರು ಕಲ್ಲುಗಳನ್ನು ಕಾಣಬಹುದು. ಇಲ್ಲಿನ ಕಲ್ಲುಗಳ ಆಕಾರ (Mystery Stones) ಎಷ್ಟು ವೇಗವಾಗಿ ಬದಲಾಗುತ್ತದೆ ಎಂದರೆ, ಹಲವು ಬಾರಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಅದರ ಅನುಭವವಾಗುತ್ತದೆಯಂತೆ.
ಸ್ಥಳೀಯ ಜನರಿಗೆ ಸಹ, ಇಲ್ಲಿ ಕಲ್ಲುಗಳು ಅಕಾರವನ್ನು ಬದಲಾಯಿಸುವುದು ಯಾವುದೇ ಒಂದು ರಹಸ್ಯಕ್ಕಿಂತ (Mystery) ಕಡಿಮೆಯಿಲ್ಲ. ಟ್ರಾವೆಲ್ ಸೈಟ್ ಇತಿಹಾಸದ ಪ್ರಕಾರ, ಇಲ್ಲಿನ ಸ್ಥಳೀಯ ಜನರು ತಮ್ಮ ಬಾಲ್ಯದಿಂದಲೂ ಈ ಪವಾಡವನ್ನು (Miracle) ನೋಡುತ್ತಿದ್ದಾರೆ.
ರೊಮೇನಿಯಾಕ್ಕೆ (Romania) ಬರುವ ಪ್ರವಾಸಿಗರು ಈ ಸ್ಥಳವನ್ನು ನೋಡಲು ಆಕರ್ಷಿತರಾಗುತ್ತಾರೆ. ಈ ಗ್ರಾಮವು ಸಾಕಷ್ಟು ಪ್ರಸಿದ್ಧವಾಗಿದೆ. ಇದನ್ನೂ ಓದಿ- Eating Habits: ಆಹಾರ ಸೇವಿಸುವಾಗ ಎಂದಿಗೂ ಈ ತಪ್ಪನ್ನು ಮಾಡಬೇಡಿ
ಭೂವಿಜ್ಞಾನಿಗಳು ಈ ಕಲ್ಲುಗಳ ಬಗ್ಗೆ ಅನೇಕ ಸಂಶೋಧನೆ ಮಾಡಿದ್ದಾರೆ, ಆದರೆ ಅವುಗಳ ಹೆಚ್ಚುತ್ತಿರುವ ಗಾತ್ರವು (Stone Size) ಇನ್ನೂ ಬಗೆಹರಿಯದ ಒಗಟಾಗಿ ಉಳಿದಿದೆ. (ಚಿತ್ರ ಕೃಪೆ: itinari)
ಈ ಹಳ್ಳಿಯ ಜನರು ಕಲ್ಲುಗಳು ನೀರಿನ ಸಂಪರ್ಕಕ್ಕೆ ಬಂದ ನಂತರವೇ ಅವುಗಳ ಗಾತ್ರ ನಿರಂತರವಾಗಿ ಬದಲಾಗುತ್ತಿದೆ ಎಂದು ಹೇಳುತ್ತಾರೆ. ಇದನ್ನೂ ಓದಿ- Numerology: ಈ ದಿನಾಂಕಗಳಲ್ಲಿ ಜನಿಸಿದ ಜನರಿಗೆ ಅದೃಷ್ಟ, ಮುಂದಿನ 15 ದಿನಗಳು ಬಹಳ ಶುಭಕರ
ಕೆಲವು ವಿಜ್ಞಾನಿಗಳು ಮಳೆಗಾಲದಲ್ಲಿ ಈ ಕಲ್ಲುಗಳು ಹೆಚ್ಚು ದೊಡ್ಡದಾಗುತ್ತವೆ ಎಂದು ನಂಬುತ್ತಾರೆ. ಇಲ್ಲಿನ ನೀರಿನಿಂದಾಗಿ ಇದು ಸಂಭವಿಸಬಹುದು ಎಂದು ಅವರು ಹೇಳುತ್ತಾರೆ. ಸಂಶೋಧಕರ ಪ್ರಕಾರ, ಕಲ್ಲುಗಳಲ್ಲಿ ಇರುವ ಖನಿಜ ಉಪ್ಪಿನ ಪ್ರಮಾಣವು ನೀರಿನಿಂದ ವೇಗವಾಗಿ ಹೆಚ್ಚಾಗುತ್ತಿತ್ತು. ಆದಾಗ್ಯೂ, ಇದಕ್ಕೆ ಯಾವುದೇ ಪುರಾವೆ ಇನ್ನೂ ಕಂಡುಬಂದಿಲ್ಲ. (ಚಿತ್ರಕೃಪೆ: ಸಾಮಾಜಿಕ ಮಾಧ್ಯಮ)