Indian Idol 12 Grand Finale: ವಿಜೇತರಿಗೆ ಸಿಗುವ ಬಹುಮಾನದ ಮೊತ್ತವೆಷ್ಟು ಗೊತ್ತಾ..?

ಇಂಡಿಯನ್ ಐಡಲ್ 12’ ವಿಜೇತ ಸ್ಪರ್ಧಿಗೆ 25 ಲಕ್ಷ ರೂ. ನಗದು ಬಹುಮಾನ ಸಿಗಲಿದೆಯಂತೆ.

Written by - Puttaraj K Alur | Last Updated : Aug 15, 2021, 03:22 PM IST
  • ‘ಇಂಡಿಯನ್ ಐಡಲ್ 12’ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಸಿಗುವ ಬಹುಮಾನದ ಮೊತ್ತವೆಷ್ಟು..?
  • 12 ಗಂಟೆಗಳ ಕಾಲ ನಡೆಯಲಿರುವ ‘ಇಂಡಿಯನ್ ಐಡಲ್ 12’ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ
  • ಇಂಡಿಯನ್ ಐಡಲ್ ಟ್ರೋಫಿ ಎತ್ತಿ ಹಿಡಿಯಲು 6 ಸ್ಪರ್ಧಿಗಳ ನಡುವೆ ಭರ್ಜರಿ ಪೈಪೋಟಿ
Indian Idol 12 Grand Finale: ವಿಜೇತರಿಗೆ ಸಿಗುವ ಬಹುಮಾನದ ಮೊತ್ತವೆಷ್ಟು ಗೊತ್ತಾ..? title=
ಇಂಡಿಯನ್ ಐಡಲ್ ಸ್ಪರ್ಧೆಯಲ್ಲಿ ಕನ್ನಡಿಗ ನಿಹಾಲ್ ತಾವ್ರೊ

ಮುಂಬೈ: ಸೋನಿ ಟಿ.ವಿ ನಡೆಸುತ್ತಿರುವ ‘ಇಂಡಿಯನ್ ಐಡಲ್ 12’(Indian Idol 12) ರಿಯಾಲಿಟಿ ಶೋನ ಮೆಗಾ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನಗೆ ಆರಂಭವಾಗಿದೆ. ಇಂದು ಸಂಜೆ(ಆಗಸ್ಟ್ 15) ಪ್ರಸಾರವಾಗಲಿರುವ ಎಪಿಸೋಡ್ ನಲ್ಲಿ  ಯಾರು ವಿಜೇತರು ಎಂಬುದು ತಿಳಿದುಬರಲಿದೆ. ಯಾವ ಸ್ಪರ್ಧಿ ‘ಇಂಡಿಯನ್ ಐಡಲ್ 12’ ಟ್ರೋಫಿ ಎತ್ತಿಹಿಡಿಯುತ್ತಾರೆಂದು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ರಿಯಾಲಿಟಿ ಶೋ ವಿಜೇತರಿಗೆ ಸಿಗುವ ಬಹುಮಾನದ ಮೊತ್ತವೆಷ್ಟು..? ಅಂತಾ ಅನೇಕರು ಲೆಕ್ಕಾಚಾರ ಹಾಕುತ್ತಿದ್ದಾರೆ.

ವರದಿಗಳ ಪ್ರಕಾರ ‘ಇಂಡಿಯನ್ ಐಡಲ್ 12’(Indian Idol 12) ವಿಜೇತ ಸ್ಪರ್ಧಿಗೆ 25 ಲಕ್ಷ ರೂ. ನಗದು ಬಹುಮಾನ ಸಿಗಲಿದೆಯಂತೆ. ಇದಲ್ಲದೆ ವಿಜೇತರು ಸಂಗೀತ ಉದ್ಯಮದೊಂದಿಗೆ ಒಪ್ಪಂದವನ್ನು ಕೂಡ ಪಡೆಯುತ್ತಾರಂತೆ. ಅಂದರೆ ವಿಜೇತ ಸ್ಪರ್ಧಿ ಬಾಲಿವುಡ್(Bollywood) ಸಿನಿಮಾಗಳಿಗೆ ಹಾಡುವ ಅವಕಾಶ, ಆಲ್ಬಂಗಳಿಗೆ ಹಾಡುವ ಆಫರ್ ಪಡೆದುಕೊಳ್ಳಲಿದ್ದಾರೆ.  ‘ಇಂಡಿಯನ್ ಐಡಲ್ 1’ ವಿಜೇತರಾಗಿದ್ದ ಅಭಿಜೀತ್ ಸಾವಂತ್ ಅವರಿಗೆ 50 ಲಕ್ಷ ರೂ. ನದಗು ಬಹುಮಾನ ಮತ್ತು ಟಿ ಸೀರೀಸ್ ಜೊತೆಗೆ ಆಲ್ಬಂ ಹಾಡುಗಳಿಗೆ ಒಪ್ಪಂದದ ಆಫರ್ ನೀಡಲಾಗಿತ್ತು. ಅಲ್ಲದೆ ಇಂಡಿಯನ್ ಐಡಲ್ ಸೀಸನ್ 2, 3 ಮತ್ತು 4ರ ವಿಜೇತರಾದ ಸಂದೀಪ್ ಆಚಾರ್ಯ, ಪ್ರಶಾಂತ್ ತಮಾಂಗ್ ಮತ್ತು ಸೌರಭೀ ದೇಬ್ಬರ್ಮ ಅವರಿಗೆ ತಲಾ 1 ಕೋಟಿ ರೂ. ಬಹುಮಾನ ನೀಡಲಾಗಿತ್ತು.

ಇದನ್ನೂ ಓದಿ: ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಮದುವೆ ಸಂಭ್ರಮ..!

ಇಂದು ಸಂಜೆ ‘ಇಂಡಿಯನ್ ಐಡಲ್ 12’ ಮೆಗಾ ಗ್ರ್ಯಾಂಡ್ ಫಿನಾಲೆ(Indian Idol 12 Grand Finale) ಕಾರ್ಯಕ್ರಮ ಪ್ರಸಾರವಾಗಲಿದೆ. ದೀರ್ಘಾವಧಿವರೆಗೂ ನಡೆದ ‘ಇಂಡಿಯನ್ ಐಡಲ್ 12’ ಮತ್ತೊಂದು ದಾಖಲೆಯನ್ನು ನಿರ್ಮಿಸಲಿದ್ದು, ಫಿನಾಲೆ ಎಪಿಸೋಡ್ 12 ಗಂಟೆಗಳ ಕಾಲ ಟಿವಿಯಲ್ಲಿ ಪ್ರಸಾರವಾಗಲಿದೆ. ಇದು 12 ಗಂಟೆಗಳ ಸಂಭ್ರಮವಾಗಿದ್ದು, ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ ಮಧ್ಯರಾತ್ರಿಯವರೆಗೆ ನಡೆಯುತ್ತದೆ. ಫೈನಲ್ ಎಪಿಸೋಡ್‌ನ ಹಲವು ಭಾಗಗಳನ್ನು ಈಗಾಗಲೇ ರೆಕಾರ್ಡ್ ಮಾಡಲಾಗಿದ್ದರೂ ವಿಜೇತರ ಹೆಸರುಗಳನ್ನು ಲೈವ್ ಆಗಿಯೇ ಘೋಷಿಸಲಾಗುತ್ತದೆ. 

ಸಂಗೀತ ದಿಗ್ಗಜರಾದ ಅಲ್ಕಾ ಯಾಗ್ನಿಕ್, ಕುಮಾರ್ ಸಾನು, ಉದಿತ್ ನಾರಾಯಣ್ ಸೇರಿದಂತೆ ಹಲವಾರು ಗಾಯಕರು, ಸೆಲೆಬ್ರಿಟಿಗಳು ಮತ್ತು ಮಾಜಿ ಸ್ಪರ್ಧಿಗಳೂ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ವಿಶೇಷವಾಗಿ ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ ಕೂಡ ಗ್ರ್ಯಾಂಡ್ ಫಿನಾಲೆಗೆ ಹಾಜರಾಗುವ ನಿರೀಕ್ಷೆಯಿದೆ. ‘ಶೇರ್ಶಾ’ ಸಿನಿಮಾದ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ. ‘ಇಂಡಿಯನ್ ಐಡಲ್ 12’ ಟ್ರೋಫಿ ಗೆಲ್ಲಲು ಸ್ಪರ್ಧಿಗಳಾದ ಪವನ್ ದೀಪ್ ರಾಜನ್(Pawandeep Rajan), ಅರುಣಿತಾ ಕಾಂಜಿಲಾಲ್, ಷಣ್ಮುಖ ಪ್ರಿಯಾ(Shanmukha Priya), ಸಾಯ್ಲಿ ಕಾಂಬ್ಳೆ, ಮೊಹ್ಮದ್ ಡ್ಯಾನಿಶ್ ಮತ್ತು ಕನ್ನಡದ ಹುಡಗ ನಿಹಾಲ್ ತಾವ್ರೊ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಅಂತಿಮವಾಗಿ ಯಾರಿಗೆ ಟ್ರೋಫಿ ಸಿಗಲಿದೆ ಅಂತಾ ಕಾದು ನೋಡಬೇಕಿದೆ.

ಇದನ್ನೂ ಓದಿ: Abhishek Bachchan: ತನ್ನ ಐಷಾರಾಮಿ ಅಪಾರ್ಟ್ಮೆಂಟ್ ಮಾರಾಟ ಮಾಡಿದ ಅಭಿಷೇಕ್ ಬಚ್ಚನ್!

ಫೈನಲ್ ಸ್ಪರ್ಧೆಯಲ್ಲಿ ಕನ್ನಡಿಗ ನಿಹಾಲ್ ತಾವ್ರೊ

ಜೈನಕಾಶಿ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮ ಹತ್ತಿರದ ಯುವ ಗಾಯಕ ನಿಹಾಲ್ ತಾವ್ರೊ(Nihal Tauro) ಸೋನಿ ಟಿ.ವಿ ನಡೆಸುತ್ತಿರುವ ‘ಇಂಡಿಯನ್ ಐಡಲ್ 12’ ರಿಯಾಲಿಟಿ ಶೋನಲ್ಲಿ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತಮ್ಮ ವಿಶಿಷ್ಟ ಕಂಠಸಿರಿಯಿಂದ ಗಮನ ಸೆಳೆದಿರುವ ನಿಹಾಲ್ ಫೈನಲ್ ಗೆ ಆಯ್ಕೆಯಾದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News