ಜೈಪುರ: ಖ್ಯಾತ ಐಎಎಸ್ ಟಾಪರ್ ದಂಪತಿ ಟೀನಾ ಡಾಬಿ ಮತ್ತು ಅಥರ್ ಅಮೀರ್ ಖಾನ್ ಜೋಡಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಜೈಪುರದ ಕೌಟುಂಬಿಕ ನ್ಯಾಯಾಲಯವು ಐಎಎಸ್ ಅಧಿಕಾರಿಗಳ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಕಳೆದ ವರ್ಷದ ನವೆಂಬರ್ ನಲ್ಲಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಮದುವೆಯಾದ ಕೇವಲ ಎರಡೇ ವರ್ಷಗಳಲ್ಲಿ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿತ್ತು.
2015ರಲ್ಲಿ ಟೀನಾ ಡಾಬಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದರೆ, ಅಥರ್ ಖಾನ್ 2ನೇ ಸ್ಥಾನ ಪಡೆದುಕೊಂಡಿದ್ದರು. ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರು ಪ್ರೀತಿಸಲು ಶುರು ಮಾಡಿದ್ದರು. ಬಳಿಕ ಅವರು ಪರಸ್ಪರ ಎರಡೂ ಕಡೆಯ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸಿದ್ದರು. 2018ರಲ್ಲಿ ನಡೆದಿದ್ದ ಈ ಜೋಡಿಯ ವಿವಾಹವು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.
ಇದನ್ನೂ ಓದಿ: Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್
ಐಎಎಸ್ನ ರಾಜಸ್ಥಾನ ಕೇಡರ್ನಲ್ಲಿ ಟೀನಾ ಮತ್ತು ಅಥರ್ ಅವರನ್ನು ಸೇವೆಗೆ ನಿಯೋಜಿಸಲಾಗಿತ್ತು. ಆರಂಭದಲ್ಲಿ ಇವರಿಬ್ಬರೂ ಒಂದೇ ನಗರದಲ್ಲಿದ್ದರು. ಬಳಿಕ ಟೀನಾರನ್ನು ಶ್ರೀ ಗಂಗಾನಗರಕ್ಕೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿತ್ತು. ಜೈಪುರದ ಜಿಲ್ಲಾ ಪರಿಷತ್ತಿನ ಸಿಇಒ ಆಗಿ ಅಥರ್ ನೇಮಕವಾಗಿದ್ದರು. ಆರಂಭದಲ್ಲಿ ತುಂಬಾ ಅನೋನ್ಯತೆಯಿಂದ ಇದ್ದ ಈ ಜೋಡಿಯ ಬಾಳಲ್ಲಿ ಬಿರುಕು ಮೂಡಿತ್ತು. ಕೊನೆಗೆ ಅದು ವಿಚ್ಛೇದನದಲ್ಲಿ ಅಂತ್ಯವಾಗಿದೆ.
ಇದನ್ನೂ ಓದಿ: Free Ration : ಕೋವಿಡ್ ಸಮಯದಲ್ಲಿ 80 ಕೋಟಿ ಭಾರತೀಯರಿಗೆ 'ಉಚಿತ ಪಡಿತರ' : ಪ್ರಧಾನಿ ಮೋದಿ
‘ಲವ್ ಜಿಹಾದ್’ ಎಂದಿದ್ದ ಹಿಂದೂ ಮಹಾಸಭಾ
ತರಬೇತಿ ವೇಳೆ ಟೀನಾ ಮತ್ತು ಅಥರ್ ಪ್ರಣಯ ಶುರುಮಾಡಿದ್ದರು. ಇವರಿಬ್ಬರು ವಿವಾಹವಾಗುವುದಾಗಿ ಘೋಷಿಸಿದ್ದ ವಿಚಾರ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಅಖಿಲ ಭಾರತೀಯ ಹಿಂದೂ ಮಹಾಸಭಾ ಇವರಿಬ್ಬರ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇವರಿಬ್ಬರ ವಿವಾಹ ‘ಲವ್ ಜಿಹಾದ್’ ಪ್ರೇರಿತವಾಗಿದೆ ಅಂತಾ ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರ ಬರೆದಿತ್ತು. ಟೀನಾ ಸಾಧನೆಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ ಮುಸ್ಲಿಂ ಯುವಕನ್ನು ಮದುವೆಯಾಗಲು ತೀರ್ಮಾನಿಸಿರುವುದು ಸರಿಯಲ್ಲ. ಮದುವೆ ರದ್ದುಗೊಳಿಸುವಂತೆ ಒತ್ತಾಯಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ