/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: Indian Railways Latest News - ರೈಲು ಪ್ರಯಾಣಿಕರಿಗಾಗಿ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಹೌದು, ಇನ್ಮುಂದೆ ನಿಮಗೆ ರೈಲಿನಲ್ಲಿ ಸಿಗುವ ಒಂದು ಮಹತ್ವದ ಸೇವೆ ಸಿಗುವುದಿಲ್ಲ. ಭಾರತ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ವೈ-ಫೈ ಒದಗಿಸುತ್ತಿದೆ. ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ವೈ-ಫೈ ಸಂಪರ್ಕವನ್ನು ಒದಗಿಸಿದ ನಂತರ, ದೇಶಾದ್ಯಂತ ಓಡುವ ರೈಲುಗಳಲ್ಲಿ ಉಚಿತ ವೈ-ಫೈ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಮಾಜಿ ರೈಲು ಸಚಿವರಾಗಿದ್ದ ಪಿಯೂಶ್ ಗೋಯಲ್ 2019ರಲ್ಲಿ ರೈಲುಗಳಲ್ಲಿ ಮುಂದಿನ ನಾಲ್ಕು ವರ್ಷಗಳ ಒಳಗೆ ರೈಲಿನಲ್ಲಿ ವೈ-ಫೈ ನೀಡುವ ಯೋಜನೆಯ (Indian Railways Project) ಮೇಲೆ ಕಾರ್ಯ ನಡೆಯುತ್ತಿದೆ ಎಂದು ಘೋಷಿಸಿದ್ದರು. ಆದರೆ, ಇದೀಗ ಈ ಯೋಜನೆಯ ಅನುಷ್ಠಾನದಲ್ಲಿ ಹಲವು ಸವಾಳುಗಲಿರುವ ಕಾರಣ ಕೇಂದ್ರ ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿದೆ. 

ಇದನ್ನೂ ಓದಿ-Train Ticket Insurance Benefits: ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ವಿಮೆ ಮಾಡಿಸುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ಯಾತ್ರಿಗಳಿಗೆ ಸಿಗುವುದಿಲ್ಲ Wi-Fi
ಪ್ರಸ್ತುತ ಭಾರತೀಯ ರೈಲು ಇಲಾಖೆ ಈ ಯೋಜನೆಯನ್ನು ಕೈಬಿಟ್ಟಿದೆ. ಪಿಟಿಐ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯೊಂದರ ಪ್ರಕಾರ, ಭಾರತೀಯ ರೈಲು ಇಲಾಖೆ ರೈಲುಗಳಲ್ಲಿ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ತೆಗೆದು ಹಾಕಿದೆ. ಏಕೆಂದರೆ, ಈ ಹೂಡಿಕೆ ಕಾಸ್ಟ್ ಇಫೆಕ್ಟಿವ್ ಆಗಿಲ್ಲ ಎಂಬುದು ಇಲಾಖೆಯ ಅಭಿಪ್ರಾಯ. ಈ ಕುರಿತು ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡಿದೆ. ಸಂಸತ್ತಿನೋಳಗೆ ಕೇಳಲಾಗಿರುವ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ (Union Railway Minister Ashwini Vaishnav), ಪೈಲೆಟ್ ಪ್ರಾಜೆಕ್ಟ್ (Indian Railway WiFi Project) ಅಡಿ ಸರ್ಕಾರ ಹಾವಡಾ - ರಾಜಧಾನಿ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಸ್ಯಾಟಲೈಟ್ ಕಮ್ಯೂನಿಕೇಶನ್ ಟೆಕ್ನಾಲಜಿ ಮೂಲಕ ವೈ-ಫೈ ಇಂಟರ್ನೆಟ್ ಸೌಕರ್ಯವನ್ನು ಒದಗಿಸಿತ್ತು. ಆದರೆ, ಪೈಲಟ್ ಪ್ರಾಜೆಕ್ಟ್ ಅವಧಿಯ ವೇಳೆ ಟೆಕ್ನಾಲಜಿ ಇಂಟೆನ್ಸಿವ್ ಕ್ಯಾಪಿಟಲ್ ಜೊತೆಗೆ ಈ ಯೋಜನೆಗೆ ರೆಕರಿಂಗ್ ಕಾಸ್ಟ್ ಗಳಾದಂತಹ ಬ್ಯಾಂಡ್ ವಿಡ್ತ್ ಶುಲ್ಕ, ಈ ಯೋಜನೆಯನ್ನು ಕಾಸ್ಟ್ ಇಫ್ಫೆಕ್ಟಿವೆ ಆಗಿಸುವುದಿಲ್ಲ. ಇದಲ್ಲದೆ ಟ್ರೇನ್ ನಲ್ಲಿ ಯಾತ್ರಿಗಳಿಗೆ ನೀಡಲಾಗುತ್ತಿರುವ ಬ್ಯಾಂಡ್ ವಿಡ್ತ್ ಯಾತ್ರಿಗಳಿಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಪ್ರಸ್ತುತ ರೈಲುಗಳಲ್ಲಿ ಅಗ್ಗದ ದರದಲ್ಲಿ ವೈ-ಫೈ ಸೇವೆ ಒದಗಿಸಲು ಯಾವುದೇ ತಂತ್ರಜ್ಞಾನ ಇಲ್ಲ ಎಂದು ಹೇಳಿದ್ದಾರೆ.  

ಇದನ್ನೂ ಓದಿ-IRCTC iPay: ಐಆರ್‌ಸಿಟಿಸಿ ಪಾವತಿ ಗೇಟ್‌ವೇ ಬಳಸುವುದು ಹೇಗೆ? ಅದರ ಪ್ರಯೋಜನಗಳೇನು?

RailTel ನೆಟ್ವರ್ಕ್ ಸೌಲಭ್ಯ (IRCTC News)
ಪ್ರಸ್ತುತ ಭಾರತೀಯ ರೇಲ್ವೆ ಇಲಾಖೆ ಸುಮಾರು 6000ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ವೈ-ಫೈ ಇಂಟರ್ನೆಟ್ ಸೌಲಭ್ಯ ಒದಗಿಸುತ್ತಿದೆ. ಸಚಿವಾಲಯದ ಅಡಿ ಒಂದು PSU ಅಡಿ ರೈಲ್ ಟೆಲ್  ನೆಟ್ವರ್ಕ್ ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತಿದೆ. ಇದು ಇಲಾಖೆಯ ಬ್ರಾಡ್ ಬ್ಯಾಂಡ್ ಡಿಸ್ಟ್ರಿಬ್ಯೂಶನ್ ಮಾಡೆಲ್ ಆಗಿದೆ. ಇದಕ್ಕೂ ಮೊದಲು Googleನ ಸ್ಟೇಷನ್ ಕಾರ್ಯಕ್ರಮ 2016ರಲ್ಲಿ ಮುಂಬೈ ಸೆಂಟ್ರಲ್ ರೈಲ್ವೆ ಸ್ಟೇಷನ್ ನಿಂದ ಆರಂಭಗೊಂಡಿತ್ತು. 2018ರಲ್ಲಿ ಅಸ್ಸಾಂ ನ ದಿಬ್ರುಗಡ್ ನಲ್ಲಿ ತನ್ನ 400 ನೇ ಸ್ಟೇಷನ್ ಅನ್ನು ಇದಕ್ಕೆ ಜೋಡಿಸಲಾಗಿದೆ.

ಇದನ್ನೂ ಓದಿ-Indian Railway: ಇ-ಕ್ಯಾಟರಿಂಗ್ ಸೇವೆ ಪುನರಾರಂಭಿಸಿದ ಐಆರ್‌ಸಿಟಿಸಿ, ನೀವು ಈ ರೀತಿ ಫುಡ್ ಆರ್ಡರ್ ಮಾಡಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Section: 
English Title: 
Indian Railways: indian railways cancels project to provide wifi service in trains central government said not cost effective
News Source: 
Home Title: 

Indian Railways: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್, ಇನ್ಮುಂದೆ ರೈಲಿನಲ್ಲಿ ಸಿಗಲ್ಲ ಈ ಸೌಕರ್ಯ

Indian Railways: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್, ಇನ್ಮುಂದೆ ರೈಲಿನಲ್ಲಿ ಸಿಗಲ್ಲ ಈ ಸೌಕರ್ಯ
Caption: 
Indian Railways Latest News (File Photo)
Yes
Is Blog?: 
No
Tags: 
Facebook Instant Article: 
Yes
Highlights: 

ರೈಲು ಪ್ರಯಾಣಿಕರಿಗೆ ಒಂದು ಮಹತ್ವದ ಮಾಹಿತಿ

ಇನ್ಮುಂದೆ ಯಾತ್ರಿಗಳಿಗೆ ರೈಲಿನಲ್ಲಿ ವೈ-ಫೈ ಸೇವೆ ಸಿಗುವುದಿಲ್ಲ.

RailTel ಮೂಲಕ ಈ ಸೌಕರ್ಯ ಒದಗಿಸಲಾಗುತಿತ್ತು.

Mobile Title: 
Indian Railways: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್, ಇನ್ಮುಂದೆ ರೈಲಿನಲ್ಲಿ ಸಿಗಲ್ಲ ಈ ಸೌಕರ್ಯ
Nitin Tabib
Publish Later: 
No
Publish At: 
Saturday, August 7, 2021 - 10:49
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No