ನವದೆಹಲಿ: Palmistry - ಕೈಯಲ್ಲಿನ ರೇಖೆಗಳು ಭವಿಷ್ಯದ ಮತ್ತು ಹಣೆಬರಹದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತದೆ. ಮನುಷ್ಯನ ಕಾರ್ಯಗಳ ಪ್ರಕಾರ ಅವನ ಕೈಯಲ್ಲಿನ ರೇಖೆಗಳು ಬದಲಾಗುತ್ತವೆ. ಜ್ಯೋತಿಷಿಗಳ (Joytishya Shastra) ಪ್ರಕಾರ, ಅಂತಹ ಕೆಲವು ಯೋಗಗಳು ಕೈಯಲ್ಲಿನ ರೇಖೆಗಳಲ್ಲಿ ರೂಪುಗೊಳ್ಳುತ್ತವೆ, ಇದು ಮನುಷ್ಯನ ವೃತ್ತಿ ಮತ್ತು ಭವಿಷ್ಯದ (Hast Samudrik) ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಆಗಾಗ ಜನರೂ ಕೂಡ ತಮ್ಮ ವೃತ್ತಿಜೀವನದ ಬಗ್ಗೆ ಮಾಹಿತಿಗಾಗಿ ಜ್ಯೋತಿಷಿಗಳನ್ನು (Astrology) ಭೇಟಿ ಮಾಡುತ್ತಾರೆ. ಜನರು ಸಾಮಾನ್ಯವಾಗಿ ಸರ್ಕಾರಿ ಉದ್ಯೋಗವನ್ನು (Government Job) ಹೊಂದಲು ಅವರು ಅದೃಷ್ಟಶಾಲಿಯಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಹೀಗಾಗಿ ನಿಮ್ಮ ಕೈಯಲ್ಲಿನ ರೇಖೆಗಳನ್ನು ನೋಡುವ ಮೂಲಕ ನಿಮ್ಮ ಭಾಗ್ಯದಲ್ಲಿ ಸರ್ಕಾರಿ ನೌಕರಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ಹೇಗೆ ತಿಳಿಯಬಹುದು ಎಂಬುದರ ಲೇಖನ ಇಲ್ಲಿದೆ.
ಇದನ್ನೂ ಓದಿ-Friendship Day 2021: ಗೆಳೆತನದ ಕುರಿತು Chanakya Niti ಏನ್ ಹೇಳುತ್ತೆ?
1. ಓದು ವೇಳೆ ನಿಮ್ಮ ಕೈಯಲ್ಲಿರುವ ಸೂರ್ಯ ರೇಖೆ ಗುರು ಪರ್ವತದ ಜೊತೆಗೆ ಸೇರುತ್ತಿದ್ದರೆ, ನಿಮಗೆ ಸರ್ಕಾರಿ ಅಧಿಕಾರಿಯಾಗುವ ಯೋಗವಿದೆ ಎಂದರ್ಥ.
2. ಜೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಪರ್ವತದ ಬಾಲಿ ಇರುವ ಸೂರ್ಯ ಪರ್ವತದ ಜೊತೆಗೆ ಇತರೆ ಯಾವುದೇ ರೇಖೆ ಹೊಂದಿಕೊಳ್ಳುತ್ತಿದ್ದರೆ ನಿಮಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ.
3. ಒಂದು ವೇಳೆ ನಿಮ್ಮ ಅಂಗೈಯಲ್ಲಿ ಸೂರ್ಯ ಪರ್ವತದ ಮೇಲೆ ಯಾವುದೇ ನೇರ ರೇಖೆ ಇದ್ದರೆ ನಿಮಗೆ ಸರ್ಕಾರಿ ನೌಕರಿಯ ಯೋಗವಿದೆ ಎಂದರ್ಥ.
ಇದನ್ನೂ ಓದಿ-ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ಪ್ರತಿಭಾನ್ವಿತರು, ಆದರೆ ಈ ಗುಣ ಕೂಡಾ ಅವರಲ್ಲಿರುತ್ತದೆ
4. ಒಂದು ವೇಳೆ ಕಿರುಬೆರಳಿನ ಕೆಳಗಿರುವ ಬುಧ ಪರ್ವತದ ಮೇಲೆ ತ್ರಿಭುಜಾಕೃತಿ ನಿರ್ಮಾಣಗೊಳ್ಳುತ್ತಿದ್ದರೆ, ವ್ಯಕ್ತಿಯ ಜೀವನದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಯೋಗವಿದೆ ಎಂದರ್ಥ.
5. ಒಂದು ವೇಳೆ ಅಂಗೈಯಲ್ಲಿ ಗುರು ಪರ್ವತ ಮೇಲೆ ಯಾವುದೇ ನೆರವಾದ ರೇಖೆ ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ, ಇದರ ಅರ್ಥ ವ್ಯಕ್ತಿಗೆ ಶೀಘ್ರವೇ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ ಎಂದರ್ಥ.
6. ಯಾವ ವ್ಯಕ್ತಿಗಳ ಹೆಬ್ಬೆರೆಳಿನಲ್ಲಿ ಚಕ್ರವಿದ್ದರೆ, ಅವರು ಭಾಗ್ಯಶಾಲಿಯಾಗಿರುತ್ತಾರೆ. ಈ ವ್ಯಕ್ತಿಗಳು ಜೀವನದಲ್ಲಿನ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದರ್ಥ.
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಅದನ್ನು ಪುಷ್ಟೀಕರಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ