ವರ್ಷದುದ್ದಕ್ಕೂ ಅನೇಕ ಗ್ರಹಗಳು (Planet) ತಮ್ಮ ಸ್ಥಾನಗಳನ್ನು ಬದಲಾಯಿಸುತ್ತವೆ ಮತ್ತು ಅವುಗಳ ಲೆಕ್ಕಾಚಾರದ ಆಧಾರದ ಮೇಲೆ ಜ್ಯೋತಿಷಿಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ವಾರ್ಷಿಕ ಭವಿಷ್ಯವನ್ನು ಹೇಳುತ್ತಾರೆ. 2021ರ ವರ್ಷದ 7 ತಿಂಗಳುಗಳು ಕಳೆದಿವೆ ಮತ್ತು 5 ತಿಂಗಳುಗಳು ಉಳಿದಿವೆ. ಈ 5 ತಿಂಗಳಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಿತಿಗತಿಗಳು ಕೆಲವು ರಾಶಿಚಕ್ರದವರಿಗೆ ಬಹಳ ವಿಶೇಷವಾಗಿರುತ್ತದೆ. ಈ ಸಂದರ್ಭದಲ್ಲಿ ತಾಯಿ ಲಕ್ಷ್ಮಿ ದೇವಿಯು ಕೆಲವು ರಾಶಿಯವರಿಗೆ ವರ್ಷಾಂತ್ಯದವರೆಗೂ ತುಂಬಾ ಕರುಣಾಮಯಿ ಆಗಿದ್ದು, ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಾಧ್ಯತೆಯಿದೆ. ಶೀಘ್ರದಲ್ಲೇ ಅವರು ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ಅದೃಷ್ಟ ರಾಶಿಚಕ್ರ ಚಿಹ್ನೆಗಳು (Lucky Zodiac Signs) ಯಾವುವು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಲಕ್ಷ್ಮಿ ದೇವಿಯ ಕೃಪೆಯಿಂದ, ಮೇಷ ರಾಶಿಚಕ್ರದ ಜನರು ಆರ್ಥಿಕ ಪ್ರಯೋಜನಗಳನ್ನು ಪಡೆಯುವುದು ಮಾತ್ರವಲ್ಲ, ಮನೆ ಅಥವಾ ಕಾರು ಖರೀದಿಸುವ ಅವರ ಕನಸು ಕೂಡ ಈಡೇರುತ್ತದೆ. ವೆಚ್ಚಗಳು ಕಡಿಮೆ ಇರುತ್ತದೆ ಮತ್ತು ಉಳಿತಾಯದಲ್ಲಿ ಉತ್ತಮ ಯಶಸ್ಸು ಇರುತ್ತದೆ.
ಸಿಂಹ ರಾಶಿಯ ಜನರಿಗೆ ಮನೆ ಖರೀದಿಸುವ ಯೋಗವಿದೆ. ನೀವು ಯೋಚಿಸಿ ಮಾಡಿದ ಪ್ರತಿಯೊಂದು ಕೆಲಸದಲ್ಲಿಯೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅದರಲ್ಲೂ ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ.
ಕನ್ಯಾ ರಾಶಿಯವರಿಗೆ ಮುಂಬರುವ ದಿನಗಳಲ್ಲಿ ಹಣದ ಹರಿವು ಹೆಚ್ಚಾಗಲಿದೆ. ಆದರೆ ವೆಚ್ಚವೂ ಹೆಚ್ಚಾಗುತ್ತದೆ. ಇದು ವೃತ್ತಿಜೀವನಕ್ಕೆ ಉತ್ತಮ ಸಮಯವಾಗಿರುತ್ತದೆ. ವ್ಯವಹಾರದಲ್ಲಿ ದೊಡ್ಡ ಆರ್ಡರ್ ಪಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ- Mirror Vastu Tips: ಮನೆಯಲ್ಲಿರುವ ಕನ್ನಡಿ ಕೂಡ ನಿಮ್ಮ ಅದೃಷ್ಟ ಬದಲಿಸಬಹುದು
ತುಲಾ ರಾಶಿಯವರ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು (Financial Crisis) ಕೊನೆಗೊಳ್ಳುತ್ತದೆ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯದು. ಇದನ್ನೂ ಓದಿ- Home Remedies: ಹಲ್ಲಿಯನ್ನು ಮನೆಯಿಂದ ಓಡಿಸಲು ಈ ಮನೆಮದ್ದನ್ನು ಟ್ರೈ ಮಾಡಿ, ಕ್ಷಣಾರ್ಧದಲ್ಲಿ ಪರಿಹಾರ ಪಡೆಯಿರಿ
ಕುಂಭ ರಾಶಿಯವರಿಗೆ ಹಣದ ಸುರಿಮಳೆಯೇ ಆಗಲಿದೆ. ನೀವು ಕೈ ಹಾಕಿದ ಕೆಲಸದಲ್ಲಿ ಸುಲಭವಾಗಿ ಯಶಸ್ವಿಯಾಗುತ್ತೀರಿ. ಈ ಸಮಯವು ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಬಹುದು ಮತ್ತು ಹಣಕಾಸಿನ ಮಟ್ಟದಲ್ಲಿ ಅದರ ಮಂಗಳಕರ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಮಯದಲ್ಲಿ ಅಗತ್ಯ ವಹಿವಾಟುಗಳನ್ನು ಮಾಡುವುದು ಒಳ್ಳೆಯದು. (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)