ಸಲ್ಮಾನ್ ಖಾನ್, ವಿರುಷ್ಕಾ ಬಾಡಿಗಾರ್ಡ್ ಕೋಟಿ ಕೋಟಿ ಸ್ಯಾಲರಿ ಪಡೆದುಕೊಳ್ಳುತ್ತಾರೆ.
ಬಾಲಿವುಡ್ ನಟ-ನಟಿಯರು, ಕ್ರಿಕೆಟಿಗರು ಸೇರಿದಂತೆ ಅನೇಕ ಸೆಲೆಬ್ರೆಟಿಗಳು ತಮ್ಮ ಸುರಕ್ಷತೆಗಾಗಿ ಪ್ರತಿವರ್ಷ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ವರ್ಷಕ್ಕೆ ನೂರಾರು ಕೋಟಿ ಸಂಪಾದಿಸುವ ಸೆಲೆಬ್ರೆಟಿಗಳು ತಮಗಾಗಿ ಪರ್ಸನಲ್ ಸೆಕ್ಯೂರಿಟಿ ಇಟ್ಟುಕೊಂಡಿರುತ್ತಾರೆ. ಅವರು ತಮ್ಮ ಬಾಡಿಗಾರ್ಡ್ ಗಳಿಗೆ ಕೋಟಿ ಕೋಟಿ ಲೆಕ್ಕದಲ್ಲಿಯೇ ಸಂಬಳ ನಿಡುತ್ತಾರೆ. ಯಾವ್ಯಾವ ಸೆಲೆಬ್ರೆಟಿಗಳು ತಮ್ಮ ಬಾಡಿಗಾರ್ಡ್ ಗಳಿಗೆ ಎಷ್ಟು ಸ್ಯಾಲರಿ ನೀಡುತ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಬಾಡಿಗಾರ್ಡ್ ಹೆಸರು ಶೇರಾ. ಸಲ್ಲುಮಿಯಾಗೆ ಬಾಡಿಗಾರ್ಡ್ ಆಗುವುದಕ್ಕಿಂತಲೂ ಮುಂಚೆ ಶೇರಾ ಅನೇಕ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳಿಗೆ ಬಾಡಿಗಾರ್ಡ್ ಆಗಿದ್ದರು. ಮೈಕಲ್ ಜ್ಯಾಕ್ಸನ್, ವಿಲ್ ಸ್ಮೀತ್, ಪ್ಯಾರಿಸ್ ಹಿಲ್ಟನ್ ಮತ್ತು ಜಾಕಿ ಜಾನ್ ಅವರು ಭಾರತಕ್ಕೆ ಬಂದಾಗ ಶೇರಾ ಅವರಿಗೆ ಪರ್ಸನಲ್ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದರು. ಬಳಿಕ ಸಲ್ಮಾನ್ ಖಾನ್ ಅವರ ಫುಲ್ ಟೈಮ್ ಬಾಡಿಗಾರ್ಡ್ ಆಗಿರುವ ಶೇರ್ ತಿಂಗಳಿಗೆ ಸುಮಾರು 15 ಲಕ್ಷ ರೂ. ಅಂದರೆ ವರ್ಷಕ್ಕೆ 2 ಕೋಟಿ ರೂ.ವರೆಗೆ ಸಂಬಳ ಪಡೆಯುತ್ತಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾಗುವುದಕ್ಕಿಂತಲೂ ಮುಂಚೆಯೇ ಅವರಿಗೆ ಸೋನು ಅಕಾ ಪ್ರಕಾಶ್ ಸಿಂಗ್ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಪತಿ-ಪತ್ನಿ ಇಬ್ಬರಿಗೂ ಸೋನು ಪರ್ಸನಲ್ ಬಾಡಿಗಾರ್ಡ್ ಆಗಿದ್ದು, ಯಾವ ಕಂಪನಿ ಸಿಇಓಗೂ ಕಮ್ಮಿಯಿಲ್ಲದಂತೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಸೋನು ಅವರ ವಾರ್ಷಿಕ ಸಂಬಳ 1.2 ಕೋಟಿ ರೂ. ಎಂದು ಹೇಳಲಾಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಬಾಡಿಗಾರ್ಡ್ ರವಿ ಸಿಂಗ್, ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾಗಿಂತಲೂ ಹೆಚ್ಚು ಪಾಪುಲರ್ ಅಲ್ಲ. ಆದರೆ ಆತ ಕಳೆದ 10 ವರ್ಷಳಿಂದ ಸೂಪರ್ ಸ್ಟಾರ್ ಜೊತೆಯಲ್ಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ರವಿ ಸಿಂಗ್ ವಾರ್ಷಿಕವಾಗಿ 2.7 ಕೋಟಿ ರೂ. ಪಡೆಯುತ್ತಾರಂತೆ. ಹಿಂದಿ ಚಲನಚಿತ್ರರಂಗದಲ್ಲೇ ಅತಿಹೆಚ್ಚು ಸ್ಯಾಲರಿ ಪಡೆಯುವ ಬಾಡಿಗಾರ್ಡ್ ರವಿಸಿಂಗ್ ಎಂದು ಹೇಳಲಾಗಿದೆ.
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಬಾಡಿಗಾರ್ಡ್ ಶ್ರೇಯೇಸ್ ಥೆಲೆ ವಾರ್ಷಿಕವಾಗಿ 1.2 ಕೋಟಿ ರೂ. ಸಂಭಾವಣೆ ಪಡೆದುಕೊಳ್ಳುತ್ತಾರೆ. ಅಕ್ಷಯ್ ಕುಮಾರ್ ಗೆ ಮಾತ್ರವಲ್ಲದೆ ಅವರ ಪುತ್ರ ಆರವ್ ಗೂ ಅವರು ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಾರೆ.
ಬಾಲಿವುಡ್ ನ ಮಿಸ್ಟರ್ ಫರ್ಪೆಕ್ಟ್ ಅಮೀರ್ ಖಾನ್ ಬಾಡಿಗಾರ್ಡ್ ಯುವರಾಜ್ ಘೋರ್ಪಡೆ ವಾರ್ಷಿಕವಾಗಿ 2 ಕೋಟಿ ಸ್ಯಾಲರಿ ಪಡೆದುಕೊಳ್ಳುತ್ತಾರಂತೆ. ಆರಂಭದ ದಿನಗಳಲ್ಲಿ ಮುಂಬೈನಲ್ಲಿ ಭಾರೀ ಕಷ್ಟದಲ್ಲಿದ್ದ ಯುವರಾಜ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರು. ಅಮಿರ್ ಖಾನ್ ಗೆ ಬಾಡಿಗಾರ್ಡ್ ಆದ ಮೇಲೆ ಅವರ ಜೀವನ ಬದಲಾಯಿತು.
ಬಾಲಿವುಡ್ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಭ್ ಬಚ್ಚನ್ ಅಮಿತಾಭ್ ಬಚ್ಚನ್ ಬಾಡಿಗಾರ್ಡ್ ಆಗಿರುವ ಜಿತೇಂದ್ರ ಶಿಂಧೆ ವಾರ್ಷಿಕವಾಗಿ 1.5 ಕೋಟಿ ರೂ. ಸ್ಯಾಲರಿ ಪಡೆದುಕೊಳ್ಳುತ್ತಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಆಗಿರುವ ಜಲಾಲ್ ಅವರು ವಾರ್ಷಿಕವಾಗಿ 80 ಲಕ್ಷ ರೂ. ನಿಂದ 1.2 ಕೋಟಿ ರೂ. ಸಂಬಳ ಪಡೆಯುತ್ತಾರೆ.