Shivarajkumar's Birthday: ಶಿವಣ್ಣನ ಹುಟ್ಟುಹಬ್ಬಕ್ಕೆ ಅನಾವರಣಗೊಂಡ ಭಜರಂಗಿ-2 ಸ್ಪೆಷಲ್ ಟೀಸರ್

ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-೨ ಸಿನಿಮಾ ತನ್ನ ಪೋಸ್ಟರ್ ಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ.

Written by - Zee Kannada News Desk | Last Updated : Jul 12, 2021, 04:24 PM IST
  • ಈಗ ಶಿವಣ್ಣನ 59 ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಭಜರಂಗಿ-೨ ಚಿತ್ರದ 4 ಕೆ ಟೀಸರ್ ಬಿಡುಗಡೆ ಮಾಡುವ ಮೂಲಕ ಶಿವಣ್ಣ ಭಜರಂಗಿ ಅವತಾರವನ್ನು ಅನಾವರಣಗೊಳಿಸಿದ್ದಾರೆ.
  • ಚಿಕ್ಕದಾಗಿರುವ ಈ ಟೀಸರ್ನಲ್ಲಿ ಶಿವರಾಜ್ ಕುಮಾರ್ (Shivarajkumar) ಪವರ್ ಫುಲ್ ಲುಕ್ ನೊಂದಿಗೆ ಕಂಗೊಳಿಸುತ್ತಾರೆ.
  • ಈ ಟೀಸರ್ ಜೊತೆಗೆ ಹಿನ್ನಲೆಯಲ್ಲಿನ ಮ್ಯೂಸಿಕ್ ಅಭಿಮಾನಿಗಳಿಗೆ ರೋಮಾಂಚನವನ್ನುಂಟು ಮಾಡುತ್ತಿದೆ.
Shivarajkumar's Birthday: ಶಿವಣ್ಣನ ಹುಟ್ಟುಹಬ್ಬಕ್ಕೆ ಅನಾವರಣಗೊಂಡ ಭಜರಂಗಿ-2 ಸ್ಪೆಷಲ್ ಟೀಸರ್ title=
Photo Courtesy: Twitter

ಬೆಂಗಳೂರು: ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-೨ ಸಿನಿಮಾ ತನ್ನ ಪೋಸ್ಟರ್ ಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ.

ಈಗ ಶಿವಣ್ಣನ 59 ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಿತ್ರ ತಂಡ ಭಜರಂಗಿ-೨ ಚಿತ್ರದ 4 ಕೆ ಟೀಸರ್ ಬಿಡುಗಡೆ ಮಾಡುವ ಮೂಲಕ ಶಿವಣ್ಣ ಭಜರಂಗಿ ಅವತಾರವನ್ನು ಅನಾವರಣಗೊಳಿಸಿದೆ.ಚಿಕ್ಕದಾಗಿರುವ ಈ ಟೀಸರ್ನಲ್ಲಿ ಶಿವರಾಜ್ ಕುಮಾರ್ (Shivarajkumar) ಪವರ್ ಫುಲ್ ಲುಕ್ ನೊಂದಿಗೆ ಕಂಗೊಳಿಸುತ್ತಾರೆ.ಈ ಟೀಸರ್ ಜೊತೆಗೆ ಹಿನ್ನಲೆಯಲ್ಲಿನ ಮ್ಯೂಸಿಕ್ ಅಭಿಮಾನಿಗಳಿಗೆ ರೋಮಾಂಚನವನ್ನುಂಟು ಮಾಡುತ್ತಿದೆ.

ಇದನ್ನೂ ಓದಿ: Special Birthday Teaser: ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಟೀಸರ್ ರಿಲೀಸ್

ಇದಕ್ಕೂ ಮೊದಲು ಚಿತ್ರದ್ದ ನಿರ್ದೇಶಕ ಎ ಹರ್ಷ ಶಿವಣ್ಣನ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಬಿಡುಗಡೆ ಮಾಡುವ ಬಗ್ಗೆ ಘೋಷಿಸಿದ್ದರು.ಕಥೆ ಮತ್ತು ನಿರ್ದೇಶವನ್ನು ಹರ್ಷ ನಿರ್ವಹಿಸಿದ್ದು,ಈ ಚಿತ್ರದಲ್ಲಿ ಶಿವಣ್ಣ ಜೊತೆ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Richard Antony: ರಕ್ಷಿತ್ ಶೆಟ್ಟಿಯ ಸಮುದ್ರ ದೇವನ ಅವತಾರಕ್ಕೆ ಫ್ಯಾನ್ಸ್ ಗಳು ಫಿದಾ

ಈಗ ಚಿತ್ರದ ಮುಖ್ಯಭಾಗದ ಶೂಟಿಂಗ್ ಮುಕ್ತಾಯವಾಗಿರುವುದಲ್ಲದೆ, ಫಿಲಂ ಪೋಸ್ಟ್ ಪ್ರೊಡಕ್ಷನ್ ಕೂಡ ಮುಗಿದಿರುತ್ತೆ. ಈಗ ಈ ಸಿನಿಮಾದ ಬಗ್ಗೆ ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಇಡೀ ದಕ್ಷಿಣ ಭಾರತವೇ ಕುತೂಹಲದಿಂದ ಕಾಯ್ದುಕೊಂಡು ಕುಳಿತಿದೆ. ಒಟ್ಟಿನಲ್ಲಿ ಶಿವಣ್ಣ ತಮ್ಮ 59 ನೇ ವಯಸ್ಸಿನಲ್ಲಿಯೂ ಕೂಡ ಸವಾಲಿನ ಪಾತ್ರವನ್ನು ನಿರ್ವಹಿಸುವ ಮೂಲಕ ತಾವು ನಿಲ್ಲದ ಕುದುರೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News