ನವದೆಹಲಿ: ನ್ಯೂಜಿಲೆಂಡ್ ತಂಡದ ಆಟಗಾರ ಬ್ರೆಂಡನ್ ಮೆಕಲಮ್ ಅವರು ಟ್ವೆಂಟಿ -20 ಕ್ರಿಕೆಟ್ ನಲ್ಲಿ ಒಂದು ವಿಶಿಷ್ಟ ದಾಖಲೆ ಸಿಡಿಸಿದ್ದಾರೆ. ಅದೇನಪ್ಪಾ ಅಂತೀರಾ?. ಹೌದು ಈಗ ಅವರು ಸಿಡಿಸಿರುವ ವಿಶ್ವ ದಾಖಲೆ ಏನೆಂದರೆ ಟ್ವೆಂಟಿ ಕ್ರಿಕೆಟ್ ನಲ್ಲಿ ಅತಿ ಹೆಚ್ಹು ರನ್ ಗಳಿಸಿದ ಎರಡನೇ ಆಟಗಾರ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.
ನಿನ್ನೆ ನಡೆದ ಕೋಲ್ಕತ್ತಾ ವಿರುದ್ದದ ಪಂದ್ಯದಲ್ಲಿ 9000 ರನ್ ಗಳಿಸುವ ಮೂಲಕ ವೆಸ್ಟ್ ಇಂಡಿಸ್ ತಂಡದ ಕ್ರಿಸ್ ಗೆಲ್ ನಂತರ ಈ ಸಾಧನೆ ಮಾಡಿದ ಎರಡನೆ ಆಟಗಾರ ಎನ್ನುವ ಶ್ರೆಯವನ್ನು ತಮ್ಮ ದಾಗಿಸಿಕೊಂಡರು.
ಮೆಕಲಂ ಒಟ್ಟು 30.94 ರ ಸರಾಸರಿಯಲ್ಲಿ 9,035 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 137.81 ಹೊಂದಿದ್ದಾರೆ.ಇನ್ನೊಂದೆಡೆಗೆ ಕ್ರಿಸ್ ಗೆಲ್ ಅವರು ಈವರೆಗೆ ಆಡಿದ 323 ಪಂದ್ಯಗಳಲ್ಲಿ 11,068 ರನ್ ಗಳಿಸಿದ್ದಾರೆ.
ಏತನ್ಮಧ್ಯೆ, ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ (8,048 ), ಪಾಕಿಸ್ತಾನದ ಶೋಯೆಬ್ ಮಲಿಕ್ (7,728) ಮತ್ತು ಮಾಜಿ ಆಸ್ಟ್ರೇಲಿಯಾದ ಉಪನಾಯಕ ಡೇವಿಡ್ ವಾರ್ನರ್ (7,668) ಟ್ವೆಂಟಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ನು ಗಳಿಸಿದ ಆಟಗಾರರಾಗಿದ್ದಾರೆ.