Afghans ತಮ್ಮ ಭವಿಷ್ಯವನ್ನು ನಿರ್ಧರಿಸಬೇಕು: ಯುಎಸ್ ಅಧ್ಯಕ್ಷ ಬಿಡೆನ್

ಅಫ್ಘಾನಿಸ್ತಾನದಲ್ಲಿ (Afghanistan) ಅಮೇರಿಕ ತನ್ನ ಗುರಿ ಸಾಧಿಸಿದೆ. 9/11 ರಂದು ನಮ್ಮ ಮೇಲೆ ಹಲ್ಲೆ ಮಾಡಿದ ಭಯೋತ್ಪಾದಕರನ್ನು ಹುಡುಕುವುದು ಮತ್ತು ಒಸಾಮಾ ಬಿನ್ ಲಾಡೆನ್‌ಗೆ ನ್ಯಾಯದ ಸಂದೇಶವನ್ನು ನೀಡುವುದು ಈ ಅಭಿಯಾನದ ಉದ್ದೇಶವಾಗಿತ್ತು- ಅಮೇರಿಕ ಅಧ್ಯಕ್ಷ ಜೋ ಬಿಡೆನ್

Written by - Yashaswini V | Last Updated : Jul 9, 2021, 08:25 AM IST
  • ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆಗಸ್ಟ್ 31 ರೊಳಗೆ ಪೂರ್ಣಗೊಳ್ಳಲಿದೆ ಎಂದು ಅಧ್ಯಕ್ಷ ಬಿಡನ್ ಹೇಳಿದ್ದಾರೆ
  • ಅಮೆರಿಕದ ಸಮನ್ವಯದೊಂದಿಗೆ ನ್ಯಾಟೋ ರಾಷ್ಟ್ರಗಳು ಕೂಡ ಅಫ್ಘಾನಿಸ್ತಾನದಿಂದ ತಮ್ಮ ಸೈನ್ಯವನ್ನು ವೇಗವಾಗಿ ಹಿಂತೆಗೆದುಕೊಳ್ಳುತ್ತಿವೆ
  • ಕಳೆದ ವಾರ, ಯುಎಸ್ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದ ಅತಿದೊಡ್ಡ ಮಿಲಿಟರಿ ವಿಮಾನ ನಿಲ್ದಾಣವಾದ ಬಾಗ್ರಾಮ್ ಏರ್ ಬೇಸ್ ಅನ್ನು ಸಹ ಸ್ಥಳಾಂತರಿಸಿದ್ದವು
Afghans ತಮ್ಮ ಭವಿಷ್ಯವನ್ನು ನಿರ್ಧರಿಸಬೇಕು: ಯುಎಸ್ ಅಧ್ಯಕ್ಷ ಬಿಡೆನ್ title=
ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಿಂದ ಯುಎಸ್ ಸೈನ್ಯ ಮರಳಲಿದೆ: ಅಧ್ಯಕ್ಷ ಬಿಡೆನ್ (Image courtesy: Reuters)

ವಾಷಿಂಗ್ಟನ್- ಯು.ಎಸ್. ಮಿಲಿಟರಿ ಪಡೆಗಳನ್ನು ಅಫ್ಘಾನಿಸ್ತಾನದಿಂದ ಹೊರಗೆಳೆಯುವ ನಿರ್ಧಾರವನ್ನು ಅಧ್ಯಕ್ಷ ಜೋ ಬಿಡನ್ (President Joe Biden) ಗುರುವಾರ ಬಲವಾಗಿ ಸಮರ್ಥಿಸಿಕೊಂಡರು. ಅಫಘಾನ್ ಜನರು ಮತ್ತೊಂದು ತಲೆಮಾರಿನ ಅಮೆರಿಕನ್ನರನ್ನು ಅಜೇಯ ಯುದ್ಧದಲ್ಲಿ ತ್ಯಾಗ ಮಾಡುವ ಬದಲು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಬೇಕು ಎಂದವರು ಕರೆ ನೀಡಿದ್ದಾರೆ.

ಶ್ವೇತಭವನದ ಪೂರ್ವ ಕೋಣೆಯಲ್ಲಿ ಮಾತನಾಡಿದ ಅಧ್ಯಕ್ಷ ಜೋ ಬಿಡೆನ್ (President Joe Biden), ಅಫ್ಘಾನಿಸ್ತಾನದಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆ ಆಗಸ್ಟ್ 31 ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದರು. ಹೆಚ್ಚಿನ ಸೈನಿಕರು ಹಿಂದೆ ಸರಿದಿದ್ದಾರೆ. ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಸುರಕ್ಷಿತ ಮತ್ತು ಕ್ರಮಬದ್ಧ ರೀತಿಯಲ್ಲಿ ಮುಂದುವರಿಯುತ್ತಿದೆ ಮತ್ತು ಈ ಕಾರ್ಯಾಚರಣೆಯಲ್ಲಿ 'ವೇಗವು ಸುರಕ್ಷತೆ' ನೀತಿಯನ್ನು ಅನುಸರಿಸಲಾಗುತ್ತಿದೆ ಎಂದವರು ತಿಳಿಸಿದರು.

ನಾನು (ಜೋ ಬಿಡೆನ್) ಏಪ್ರಿಲ್ನಲ್ಲಿ ಹೇಳಿದಂತೆ, ಅಫ್ಘಾನಿಸ್ತಾನದಲ್ಲಿ (Afghanistan) ಅಮೇರಿಕ ತನ್ನ ಗುರಿ ಸಾಧಿಸಿದೆ. 9/11 ರಂದು ನಮ್ಮ ಮೇಲೆ ಹಲ್ಲೆ ಮಾಡಿದ ಭಯೋತ್ಪಾದಕರನ್ನು ಹುಡುಕುವುದು ಮತ್ತು ಒಸಾಮಾ ಬಿನ್ ಲಾಡೆನ್‌ಗೆ ನ್ಯಾಯದ ಸಂದೇಶವನ್ನು ನೀಡುವುದು ಈ ಅಭಿಯಾನದ ಉದ್ದೇಶವಾಗಿತ್ತು.  2001 ರಲ್ಲಿ ದೇಶವನ್ನು ಆಕ್ರಮಿಸಲು ಯುನೈಟೆಡ್ ಸ್ಟೇಟ್ಸ್ ತನ್ನ ಮೂಲ ತಾರ್ಕಿಕತೆಯನ್ನು ಸಾಧಿಸಿದೆ. ಅಲ್-ಖೈದಾ ಉಗ್ರರನ್ನು ಬೇರುಸಹಿತ ನಿರ್ಮೂಲನೆ ಮಾಡಲು ಮತ್ತು ಯುನೈಟೆಡ್ ಸ್ಟೇಟ್ಸ್ ಮೇಲೆ ಮತ್ತೊಂದು ದಾಳಿಯನ್ನು ತಡೆಯಲು ಸೆಪ್ಟೆಂಬರ್ 11, 2001 ರಂದು ಪ್ರಾರಂಭಿಸಲಾಯಿತು. ಆ ದಾಳಿಯ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ (Osama bin Laden) ಅವರನ್ನು ಯುಎಸ್ ಮಿಲಿಟರಿ ತಂಡವು 2011 ರಲ್ಲಿ ನೆರೆಯ ಪಾಕಿಸ್ತಾನದಲ್ಲಿ ಕೊಲ್ಲಲಾಯಿತು. ತಾಲಿಬಾನ್ ದೇಶದ ಪ್ರಮುಖ ನೆಲೆಗಳಲ್ಲಿ ಪ್ರಗತಿ ಸಾಧಿಸಿದೆ ಎಂದವರು ತಿಳಿಸಿದರು.

ಇದನ್ನೂ ಓದಿ- "ಲಡಾಖ್ ವಿವಾದದಿಂದಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೆ ತೊಂದರೆಯಾಗಿದೆ"

ಅದೇ ಸಮಯದಲ್ಲಿ, ನಾವು ರಾಷ್ಟ್ರವನ್ನು ನಿರ್ಮಿಸಲು ಅಫ್ಘಾನಿಸ್ತಾನಕ್ಕೆ  (Afghanistan) ಹೋಗಲಿಲ್ಲ. ಅಫಘಾನ್ ನಾಯಕರು ಒಗ್ಗೂಡಿ ಭವಿಷ್ಯವನ್ನು ಕಟ್ಟಬೇಕು ಎಂದ ಜೋ ಬಿಡೆನ್, ಅಫ್ಘಾನಿಸ್ತಾನವನ್ನು ಉಳಿಸಲು, ಭಯೋತ್ಪಾದಕ ಬೆದರಿಕೆಯನ್ನು ಕಡಿಮೆ ಮಾಡಬೇಕಾಗಿತ್ತು. ಏಕೆಂದರೆ ಅಫ್ಘಾನಿಸ್ತಾನವು ಅಮೆರಿಕದ ವಿರುದ್ಧ ನಿರಂತರವಾಗಿ ದಾಳಿ ಮಾಡುವ ಭಯೋತ್ಪಾದಕರ ಭದ್ರಕೋಟೆಯಾಗಿ ಮಾರ್ಪಟ್ಟಿದೆ ಎಂದು ಉಲ್ಲೇಖಿಸಿದರಲ್ಲದೆ ಯುಎಸ್ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸುವ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.

ಇದಕ್ಕೂ ಮುನ್ನ ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಮಂಗಳವಾರ ತಿಳಿಸಿದೆ. ಇಲ್ಲಿಯವರೆಗೆ ಶೇಕಡಾ 90 ಕ್ಕಿಂತ ಹೆಚ್ಚು ವಾಪಸಾತಿ ಪೂರ್ಣಗೊಂಡಿದೆ. ಇಲ್ಲಿನ ಏಳು ಮಿಲಿಟರಿ ನೆಲೆಗಳನ್ನು ಔಪಚಾರಿಕವಾಗಿ ಅಫಘಾನ್ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಅಫ್ಘಾನಿಸ್ತಾನದಿಂದ ಮಿಲಿಟರಿ ಉಪಕರಣಗಳನ್ನು ಹೊತ್ತ ಸುಮಾರು 1,000 ಸಿ -17 ಸರಕು ವಿಮಾನಗಳು ಹಾರಾಟ ನಡೆಸಿವೆ ಎಂದು ಯುಎಸ್ ರಕ್ಷಣಾ ಇಲಾಖೆ (ಪೆಂಟಗನ್) ಹೇಳಿದೆ.

ಪೆಂಟಗನ್ ಪ್ರಕಾರ, ಅಫ್ಘಾನಿಸ್ತಾನದಿಂದ (Afghanistan) ಮಿಲಿಟರಿ ಉಪಕರಣಗಳೊಂದಿಗೆ ಹೊರಡುವ ಮೊದಲು ವಿಲೇವಾರಿಗಾಗಿ ಹಲವಾರು ಮಿಲಿಟರಿ ಉಪಕರಣಗಳನ್ನು ರಕ್ಷಣಾ ಲಾಜಿಸ್ಟಿಕ್ಸ್ ಏಜೆನ್ಸಿಗೆ ಹಸ್ತಾಂತರಿಸಲಾಗಿದೆ. ಅಮೆರಿಕದ ಸಮನ್ವಯದೊಂದಿಗೆ ನ್ಯಾಟೋ ರಾಷ್ಟ್ರಗಳು ಕೂಡ ಅಫ್ಘಾನಿಸ್ತಾನದಿಂದ ತಮ್ಮ ಸೈನ್ಯವನ್ನು ವೇಗವಾಗಿ ಹಿಂತೆಗೆದುಕೊಳ್ಳುತ್ತಿವೆ. ಜರ್ಮನಿ ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಂಡಿದೆ ಮತ್ತು ಉತ್ತರ ಅಫ್ಘಾನಿಸ್ತಾನದ ಮಜಾರ್-ಇ-ಷರೀಫ್‌ನಲ್ಲಿರುವ ತನ್ನ ದೂತಾವಾಸವನ್ನು ಮುಚ್ಚಿದೆ.

ಇದನ್ನೂ ಓದಿ- ಜುಲೈ19 ರಿಂದ ಅನ್ ಲಾಕ್ ಮಾಡಲು ಮುಂದಾದ ಬ್ರಿಟನ್, ಎಚ್ಚರಿಕೆ ನೀಡಿದ ವಿಜ್ಞಾನಿಗಳು

ಕಳೆದ ವಾರ, ಯುಎಸ್ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದ ಅತಿದೊಡ್ಡ ಮಿಲಿಟರಿ ವಿಮಾನ ನಿಲ್ದಾಣವಾದ ಬಾಗ್ರಾಮ್ ಏರ್ ಬೇಸ್ ಅನ್ನು ಸಹ ಸ್ಥಳಾಂತರಿಸಿದ್ದವು. ವಿದೇಶಿ ಸೈನ್ಯವನ್ನು ಹಿಂತೆಗೆದುಕೊಳ್ಳುವುದರೊಂದಿಗೆ, ತಾಲಿಬಾನ್ ಸರ್ಕಾರಿ ಪಡೆಗಳ ವಿರುದ್ಧ ಹೋರಾಡಿದ ನಂತರ ಉತ್ತರ ಅಫ್ಘಾನಿಸ್ತಾನ ಮತ್ತು ದೇಶದ ಇತರ ಭಾಗಗಳಲ್ಲಿ ಹಲವಾರು ಜಿಲ್ಲೆಗಳನ್ನು ವಶಪಡಿಸಿಕೊಂಡಿದೆ. ಆದರೆ, ತಾಲಿಬಾನ್ ಮುನ್ನಡೆಯುವುದನ್ನು ತಡೆಯಲು ಅಫಘಾನ್ ಭದ್ರತಾ ಪಡೆಗಳು ನಿರ್ಧರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News