Chanakya Niti - ಜೀವನವಿಡಿ ಕಷ್ಟಪಟ್ಟು ದುಡಿದರೂ ಬಡತನದಿಂದ (Poverty) ಹೊರಬರಲು ಸಾಧ್ಯವಾಗದ ಅನೇಕ ಜನರು ಜಗತ್ತಿನಲ್ಲಿದ್ದಾರೆ. ಇದೇ ವೇಳೆ, ಅನೇಕ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯಿಂದ ಬಡತನವನ್ನು ಹೋಗಲಾಡಿಸಿ ಶ್ರೀಮಂತರಾಗುತ್ತಾರೆ.
ನವದೆಹಲಿ: Chanakya Niti - ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಶ್ರೀಮಂತರಾಗುವ ಕನಸು ಯಾರಿಗಿರಲ್ಲ ಹೇಳಿ. ಇದರ ಹೊರತಾಗಿಯೂ ಕೂಡ ಎಲ್ಲರ ಈ ಕನಸು ಈಡೇರುವುದಿಲ್ಲ. ಈ ಕನಸು (Dream) ಪೂರೈಸಲು ನಾವು ನಮ್ಮ ಕೆಲಸ ಮಾಡುವ ವಿಧಾನವನ್ನು ಬದಲಾವಣೆ (Habits) ಮಾಡಬೇಕು.
ಇದನ್ನೂ ಓದಿ-Lover Expect : ಪ್ರೀತಿಯ ಹೊರತಾಗಿಯು ನಿಮ್ಮ ಸಂಗಾತಿ ನಿಮ್ಮಿಂದ ಏನು ಬಯಸುತ್ತಾರೆ? ಈ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಚಾಣಕ್ಯ ನೀತಿಯಲ್ಲಿದೆ (Chanakya Niti) ಜೀವನದ ಸಾರ - ಚಾಣಕ್ಯ ನೀತಿಯಲ್ಲಿ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಮತ್ತು ವ್ಯಕ್ತಿಗಳ ಬಗ್ಗೆ ತಿಳಿಸಲಾಗಿದೆ. ಚಾಣಕ್ಯ ಬಡತನದ (Poverty) ಬಗ್ಗೆಯೂ ಮಾತನಾಡಿದ್ದಾರೆ. ಇಂದು ನಾವು ಅಂತಹ ಕೆಲ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ. ಸಮಯಕ್ಕೆ ಇರುವಂತೆ ಈ ಅಭ್ಯಾಸಗಳನ್ನು ಸರಿಪಡಿಸದೆ ಹೋದರೆ, ನಂತರ ವ್ಯಕ್ತಿಯ ಜೀವನವು ಯಾವಾಗಲೂ ಬಡತನದಲ್ಲಿ ಕಳೆದುಹೋಗುತ್ತದೆ.
2. ಬೆಳಗ್ಗೆ ಬೇಗನೆ ಏಳಲು ಪ್ರಯತ್ನಿಸಿ - ಪ್ರತಿಯೊಬ್ಬರೂ ಬೆಳಗ್ಗೆ ಬೇಗನೆ ಎದ್ದು, ಬೆಳಗಿನ ಸಮಯದ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಬೆಳಗ್ಗೆ ಬೇಗನೆ ಏಳದೆ ತುಂಬಾ ಹೊತ್ತು ಹಾಸಿಗೆಯಲ್ಲಿ ಕಾಲ ಕಳೆಯುವವರಿಂದ ದೇವಿ ಲಕುಮಿ (Goddess Lakshmi) ಮುನಿಸಿಕೊಳ್ಳುವ ಸಾಧ್ಯತೆ ಇದೆ ಮತ್ತು ಇದರಿಂದ ಮನೆಯಲ್ಲಿ ದಾರಿದ್ರ್ಯ ಬರಬಹುದು.
3. ನಿತ್ಯ ಸ್ನಾನ ಮಾಡಿ ಸ್ವಚ್ಛ ಬಟ್ಟೆ ಧರಿಸಿ - ಬೆಳಿಗ್ಗೆ ಎದ್ದಾಕ್ಷಣ ನಿತ್ಯ ಕರ್ಮಗಳನ್ನು ಮುಗಿಸಿ ಹಲ್ಲುಗಳನ್ನು ಉಜ್ಜಬೇಕು. ಹೇಗೆ ಮಾಡದೆ ಹೋದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಹಾಗೂ ನೀವು ಸಂಗ್ರಹಿಸಿಟ್ಟ ಹಣ ಅನಾರೋಗ್ಯಕ್ಕೆ ಖರ್ಚಾಗುವ ಸಾಧ್ಯತೆ ಇದೆ.
4. ಸಂತುಲಿತ ಆಹಾರ ಸೇವಿಸಿ - ಶರೀರವನ್ನು ಸರಿಯಾಗಿಡಲು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅವಶ್ಯಕ. ಇದರಿಂದ ನಮ್ಮ ಶರೀರದಲ್ಲಿ ಶಕ್ತಿ ಇರುತ್ತದೆ. ಊಟ ಮಾಡುವಾಗ ನಾವು ನಮ್ಮ ಶಾರೀರಿಕ ಅಗತ್ಯತೆಗಳನ್ನು ತಿಳಿದುಕೊಳ್ಳಬೇಕು. ಅತಿ ಹೆಚ್ಚು ಊಟ ಮಾಡುವುದರಿಂದ ಬೊಜ್ಜು, ಸಕ್ಕರೆ ಕಾಯಿಲೆಗಳು (Diabetes) ಬರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನೆಯಿಂದ ಹಣ ಹೊರಟುಹೋಗಬಹುದು.
5. ಪ್ರತಿ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿರಿ - ಜೀವನದ ಪ್ರತಿಯೊಂದು ಪರಿಸ್ಥಿತಿಯಲ್ಲಿ ಮೃದುಭಾಷೆ ನಿಮ್ಮದಾಗಿರಲಿ ಮತ್ತು ಸಕಾರಾತ್ಮಕವಾಗಿ ಯೋಚಿಸಿ. ಸಿಹಿಯಾಗಿ ಮಾತನಾಡುವವರು ಎಲ್ಲರನ್ನು ತಮ್ಮತ್ತ ಆಕರ್ಷಿಸುತ್ತಾರೆ. ಕಹಿ ಮಾತನಾಡುವವರು, ಚಾಡಿ ಹೇಳುವವರನ್ನು ಜನರು ಮೆಚ್ಚುವುದಿಲ್ಲ. ಈ ಚರಿತ್ರೆ ಇರುವವರ ಬಳಿಯೂ ಕೂಡ ಲಕ್ಷ್ಮಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ ಹಾಗೂ ಕೆಲವೇ ದಿನಗಳಲ್ಲಿ ಬಡತನ ಎದುರಾಗುತ್ತದೆ.