Two New Coronavirus Will Come Soon - ಈಗಿರುವ ಕೊರೊನಾ ವೈರಸ್ ನಿಂದಲೇ ಇನ್ನೂ ಮುಕ್ತಿ ಸಿಕ್ಕಿಲ್ಲ, ದಾಳಿಗೆ ಮತ್ತೆರಡು ವೈರಸ್ ರೆಡಿಯಾಗಿವೆಯಂತೆ

Two New Coronavirus Will Come Soon - ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ (Coronavirus Second Wave In India) ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.  

Two New Coronavirus Will Come Soon - ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ (Coronavirus Second Wave In India) ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.  ಪ್ರತಿನಿತ್ಯ ಲಕ್ಷಾಂತರ ಜನರು ಮಾರಕ ವೈರಸ್ ಸೋಂಕಿಗೆ ಒಳಗಾಗುತ್ತಿದ್ದರೆ, ಈ ಸಾಂಕ್ರಾಮಿಕ ರೋಗದ (Corona Pandemic) ಕಪಿಮುಷ್ಠಿಯಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿರುವಾಗ ವಿಜ್ಞಾನಿಗಳು ನೀಡಿರುವ ಹೇಳಿಕೆಯೊಂದರಿಂದ ಎಲ್ಲರಿಗೂ ದಿಗ್ಭ್ರಮೆಗೊಂಡಿದ್ದಾರೆ. ಈ ಬಗ್ಗೆ ಹೇಳಿರುವ ವಿಜ್ಞಾನಿಗಳು ಶೀಘ್ರದಲ್ಲಿಯೇ ಜನರು ಕೊರೊನಾ ವೈರಸ್ ನ (Covid-19) ಮತ್ತೆರಡು ರೂಪಾಂತರಿ ವೈರಸ್ ಸೋಂಕಿಗೆ ಗುರಿಯಾಗಲಿದ್ದಾರೆ ಎಂದಿದ್ದಾರೆ.

 

ಇದನ್ನೂ ಓದಿ- Human Life On Earth - ಭೂಮಿಯ ಮೇಲೆ ಮಾನವ ಸಂಕುಲದ ಅಸ್ತಿತ್ವದ ಕುರಿತು ಕರಾಳ ಭವಿಷ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

1. ನಾಯಿಗಳಿಂದ ಮನುಷ್ಯರಿಗೆ ಹರಡಿದ ವೈರಸ್ - ಕೆಲವು ವರ್ಷಗಳ ಹಿಂದೆ ಮಲೇಷ್ಯಾದಲ್ಲಿ 8 ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು, ಅವರಿಗೆ ನ್ಯುಮೋನಿಯಾ ಇತ್ತು ಎಂದು ಅಯೋವಾ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಸ್ಟಾನ್ಲಿ ಪರ್ಲ್ಮನ್ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರ ಸ್ಯಾಂಪಲ್ ನಡೆಸಲಾಗಿ, ಅವರು ಹೊಸ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ, ಇದು ನಾಯಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದು ಅವರ ಅನಿಸಿಕೆ. ಈ ವಿಷಯ ಹಳೆಯದಾಗಿದ್ದರೂ ಕೂಡ ಇನ್ನೂ ಜಾಗತಿಕ ಮಟ್ಟದಲ್ಲಿ ಜನರಿಗೆ ಬೆದರಿಕೆಯಾಗಿ ಉಳಿದಿದೆ.

2 /7

2. ಮನುಷ್ಯರ ಜಿ-ನೋಮ್ (Human Genome) ಪರೀಕ್ಷೆಯಲ್ಲಿ ಕಂಡುಬಂದ ನಾಲ್ಕು ವೈರಸ್ ಗಳು - ಈ ನಿತ್ತಿನಲ್ಲ್ಲಿ ವಿಜ್ಞಾನಿಗಳು ನಡೆಸಿರುವ ಪರೀಕ್ಷೆಯಲ್ಲಿ  ವೈರಸ್ ಯಾವುದೇ ಮನುಷ್ಯ ಅಥವಾ ಜೀವಿಗಳಲ್ಲಿ ತನ್ನನ್ನು ತಾನು ರೂಪಾಂತರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ತಿಳಿದುಬಂದಿದೆ. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಮಲೇಷ್ಯಾದಲ್ಲಿ ರೋಗಿಯೊಂದರಲ್ಲಿ ಕಂಡುಬರುವ ಕರೋನಾ ವೈರಸ್‌ನ ಜೀನೋಮ್ ಅನುಕ್ರಮವನ್ನು ವಿಜ್ಞಾನಿಗಳು ಪರೀಕ್ಷೆ ಕೈಗೊಂಡಾಗ, ಅಲ್ಲಿ ಒಟ್ಟು 4 ಕರೋನಾ ವೈರಸ್‌ಗಳಿವೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಎರಡು ನಾಯಿಗಳಲ್ಲಿ ಕಂಡುಬರುತ್ತವೆ. ಮೂರನೆಯದು ಬೆಕ್ಕಿನಲ್ಲಿ ಮತ್ತು ನಾಲ್ಕನೆಯದು ಹಂದಿಯಲ್ಲಿ ಕಂಡು ಬಂದಿದ್ದವು. ಈ ಕುರಿತು ಹಲವು ಮಾಧ್ಯಮಗಳೂ ಕೂಡ ವರದಿ ಮಾಡಿದ್ದವು.

3 /7

3. ಈ ಎರಡು ಹೊಸ ಕೊರೊನಾ ವೈರಸ್ ಗಳ ಹೆಸರೇನು? - ಆದರೆ, ಕರೋನಾ ವೈರಸ್ ಒಂದು ಪ್ರಜಾತಿಯಿಂದ ಇನ್ನೊಂದು ಪ್ರಜಾತಿಗೆ ಹೇಗೆ ಪ್ರವೇಶಿಸುತ್ತಿದೆ ಎಂಬುದರ ಅಧ್ಯಯನ ಇನೂ ಪೂರ್ಣಗೊಂಡಿಲ್ಲ.  ಕ್ಯಾನಿನೆಲಿಕ್ ಕೊರೊನಾ ವೈರಸ್ (Caninelike Coronavirus) ಮತ್ತು ಫೆಲೈನ್ ಕೊರೊನಾ ವೈರಸ್ (Feline Coronavirus) ಅನ್ನು ಕಂಡುಹಿಡಿದ ವಿಜ್ಞಾನಿಗಳು, ಇದು ಜನರಲ್ಲಿ ಕಂಡುಬಂದಿದೆ ಎಂದಿದ್ದಾರೆ. ಆದರೆ, ಇದು ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನಿಗೆ ಹರಡುತ್ತದೆ ಎಂಬುದನ್ನು ಇದುವರೆಗೆ ದೃಢಪಡಿಸಿಲ್ಲ.

4 /7

4. ನಾಯಿಗಳಲ್ಲಿನ ಕೊರೊನಾ ವೈರಸ್ ರೆಪ್ಲಿಕೆಟ್ ಆಗುವ ಸಾಧ್ಯತೆ ಇದೆ -  ತನ್ನ ಮೊದಲ ವರದಿಯಲ್ಲಿ, ಓಹಿಯೋ ಸ್ಟೇಟ್ ಯೂನಿವರ್ಸಿಟಿ ವೂಸ್ಟರ್‌ನ ಸಂಶೋಧಕ ಮತ್ತು ಪಶುವೈದ್ಯಕೀಯ ವೈರಾಲಜಿಸ್ಟ್, ಅನಸ್ತಾಸಿಯಾ ವ್ಲಾಸೊವಾ, ನಾಯಿಗಳಲ್ಲಿ ಕಂಡುಬರುವ ಕರೋನಾ ವೈರಸ್ ಮಾನವರಲ್ಲಿ ಪ್ರತಿಕೃತಿಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ನಾಯಿಗಳ ಗೆಡ್ಡೆ ಕೋಶಗಳಲ್ಲಿ ನಾವು ಈ ವೈರಸ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

5 /7

5. ವಿಶ್ವದ ಎಲ್ಲೆಡೆ ಇದೆ ನಾಯಿ-ಬೆಕ್ಕುಗಳಲ್ಲಿ ಕಂಡುಬರುವ ಕೊರೊನಾ ವೈರಸ್ - ಸ್ಟಾನ್ಲಿ ಹೇಳುವ ಪ್ರಕಾರ, 'ನಾಯಿಗಳು ಮತ್ತು ಬೆಕ್ಕುಗಳಲ್ಲಿ ಕಂಡುಬರುವ ಕರೋನಾ ವೈರಸ್ ಪ್ರಪಂಚದ ಎಲ್ಲೆಡೆ ಕಂಡುಬರುತ್ತದೆ. ಮಲೇಷ್ಯಾದಲ್ಲಿ ಮಕ್ಕಳಲ್ಲಿ ಕಂಡುಬರುವ ಕರೋನಾ ವೈರಸ್ ನಾಯಿಗಳಿಗೂ ಸಂಬಂಧಿಸಿದೆ. ಅವರ ಸ್ಪೈಕ್ ಪ್ರೋಟೀನ್ಗಳು ಕೋರೆನ್ ಕರೋನಾ ವೈರಸ್ ಟೈಪ್ 1 ಅನ್ನು ಹೋಲುತ್ತವೆ. ಇದೇ ವೇಳೆ, ಪೋರ್ಸಿನ್ ಕರೋನಾ ವೈರಸ್ನೊಂದಿಗೆ ಎರಡನೇ ಸ್ಪೈಕ್ ಪ್ರೋಟೀನ್ ಕಂಡುಬಂದಿದೆ. ಇದನ್ನು ಹರಡುವ ಗ್ಯಾಸ್ಟ್ರೋಎಂಟರಿಟಸ್ ವೈರಸ್ ಅಥವಾ  TGEV ಎಂದು ಕರೆಯಲಾಗುತ್ತದೆ. ಇದು ಬೆಕ್ಕುಗಳ ಸ್ಪೈಕ್ ಪ್ರೋಟೀನ್ನ ಶೇ.97 ರಷ್ಟು ಹೋಲಿಕೆಯಾಗುತ್ತವೆ.

6 /7

6. ಕೊರೊನಾ ವೈರಸ್ ಗಳ ಜನ್ಮ ಏಕಕಾಲಕ್ಕೆ ಸಂಭವಿಸಿಲ್ಲ - ಈ ಕುರಿತು ಹೇಳಿಕೆ ನೀಡಿರುವ ಟೆಕ್ಸಾಸ್ ನ ವಿಜ್ಯಾನಿಯೋಬ್ಬರು, ಎಲ್ಲ ರೀತಿಯ ಕೊರೊನಾ ವೈರಸ್ ಗಳ ಜನನ ಏಕಕಾಲಕ್ಕೆ ಸಂಭವಿಸಿಲ್ಲ ಎಂದಿದ್ದಾರೆ. ಇದು ಕ್ರಮೇಣ ಒಂದು ಪ್ರಜಾತಿಯಿಂದ ಇನ್ನೊಂದು ಪ್ರಜಾತಿಗೆ ಹರಡಿ ಮ್ಯೂಟೆಟ್ ಗೊಂಡಿದೆ. ಆದರೆ, ಇದರತ್ತ ಯಾರೂ ವಿಶೇಷ ಗಮನ ನೀಡದ ಕಾರಣ ಇದು ವೇಗವಾಗಿ ಹರಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

7 /7

7. ನೆಗಡಿ-ಶೀತಕ್ಕೆ ಕಾರಣ ಅಲ್ಫಾ ಕೊರೊನಾ ವೈರಸ್ - ಪರೀಕ್ಸೆಗೆ ಒಳಪಡಿಸಲಾದ 8 ಮಕ್ಕಳಲ್ಲಿ 7 ಮಕ್ಕಳು 5 ವರ್ಷದೊಳಗಿನವರಾಗಿದ್ದಾರೆ,  4 ಜನ ನವಜಾತ ಶಿಶುಗಳಾಗಿದ್ದರು. ಈ ಎಲ್ಲ ಮಕ್ಕಳು 4 ರಿಂದ 7 ದಿನಗಳವರೆಗೆ ಆಸ್ಪತ್ರೆಯಲ್ಲಿದ್ದರು, ನಂತರ ಅವರು ಚೇತರಿಸಿಕೊಂಡು ತಮ್ಮ ಮನೆಗೆ ಹೋದರು. ವಿಜ್ಞಾನಿಗಳು ಕರೋನಾ ವೈರಸ್ ಅನ್ನು ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ಎಂದು ನಾಲ್ಕು ಪ್ರಭೇದಗಳಾಗಿ ವಿಂಗಡಿಸಿದ್ದಾರೆ. ಹೊಸದನ್ನು ಆಲ್ಫಾ ಎಂದು ಕರೆಯಲಾಗುತ್ತದೆ. ಇದು ಮಾನವರಿಗೆ ಸೋಂಕು ತಗಲುತ್ತಿರುವ ಮೂರನೇ ಆಲ್ಫಾ ವೈರಸ್ ಆಗಿದೆ. ಉಳಿದ ಎರಡು ಆಲ್ಫಾ ಕರೋನಾ ವೈರಸ್‌ಗಳು ಸಾಮಾನ್ಯವಾಗಿ ಶೀತಕ್ಕೆ ಕಾರಣವಾಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.