Free Service Offer: ಈ Automobile ಕಂಪನಿಯ ಗ್ರಾಹಕರಿಗೊಂದು ಸಂತಸದ ಸುದ್ದಿ, ಜುಲೈ 31 ರವೆರೆಗೆ ಎಲ್ಲಾ ವಾಹನ ಮಾಡೆಲ್ ಗಳ ಉಚಿತ ಸರ್ವಿಸ್

Bajaj Auto ತನ್ನ ಎಲ್ಲಾ ಮಾಡೆಲ್ ಗಳ ವಾಹನಗಳ ಉಚಿತ ಸರ್ವಿಸ್ ಅವಧಿಯನ್ನು ಜುಲೈ 31ರವರೆಗೆ ಹೆಚ್ಚಿಸಿದೆ.

Written by - Nitin Tabib | Last Updated : May 19, 2021, 03:11 PM IST
  • ತನ್ನ ಕಂಪನಿಗಳ ವಾಹನಗಳ ಉಚಿತ ಸರ್ವಿಸ್ ಅವಧಿ ಹೆಚ್ಚಿಸಿದ Bajaj Auto,
  • ಕೊರೊನಾ ಮಹಾಮಾರಿಯ ಕಾರಣ ಉಚಿತ ಸರ್ವಿಸ್ ಅವಧಿ ಜುಲೈ 31ರವರೆಗೆ ವಿಸ್ತರಣೆ
  • ಇದಕ್ಕೂ ಮೊದಲು Honda Motorcycle & Scooter India ಕೂಡ ಈ ನಿರ್ಣಯ ಕೈಗೊಂಡಿದೆ.
Free Service Offer: ಈ Automobile ಕಂಪನಿಯ ಗ್ರಾಹಕರಿಗೊಂದು ಸಂತಸದ ಸುದ್ದಿ,  ಜುಲೈ 31 ರವೆರೆಗೆ ಎಲ್ಲಾ ವಾಹನ ಮಾಡೆಲ್ ಗಳ ಉಚಿತ ಸರ್ವಿಸ್  title=
Bajaj Auto Free Service Offer(File Photo)

Bajaj Auto: ದೇಶದ ಪ್ರಮುಖ ಆಟೋಮೊಬೈಲ್ ಕಂಪನಿ ಬಜಾಜ್ ಆಟೋ ತನ್ನ ಎಲ್ಲಾ ಗ್ರಾಹಕರಿಗೆ ಬಹುದೊಡ್ಡ ಉಡುಗೊರೆಯೊಂದನ್ನು ಪ್ರಕಟಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ ತನ್ನ ಎಲ್ಲಾ ಮಾಡೆಲ್ ವಾಹನಗಳ ಫ್ರೀ ಸರ್ವಿಸಿಂಗ್ ಅವಧಿಯನ್ನು ಜುಲೈ 31ರವರೆಗೆ ಹೆಚ್ಚಿಸಿದೆ ಎಂದು ಹೇಳಿದೆ. ಕೊವಿಡ್-19 ಮಹಾಮಾರಿಯ (Covid Pandemic) ಹಿನ್ನೆಲೆ ವಿವಿಧ ರಾಜ್ಯಗಳಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಏಪ್ರಿಲ್ 1 ರಿಂದ ಮೇ 31 ರವರೆಗೆ ಯಾವ ವಾಹನಗಳ ಉಚಿತ ಸರ್ವಿಸ್ (Bajaj Auto Free Service Offer) ಅವಧಿ ಮುಕ್ತಾಯಗೊಳ್ಳುತ್ತಿದೆಯೋ, ಅವುಗಳ ಫ್ರೀ ಸರ್ವಿಸಿಂಗ್ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ ಎಂದು ಕಂಪನಿ ಹೇಳಿದೆ.

ಎಲ್ಲ ದ್ವಿಚಕ್ರ ವಾಹನಗಳು ಹಾಗೂ ಕಮರ್ಷಿಯಲ್ ವೆಹಿಕಲ್ ಗಳು ಇದರಲ್ಲಿ ಶಾಮೀಲು
ಇದಕ್ಕೆ ಸಂಬಂಧಿಸಿದಂತೆ ಕಂಪನಿ ಹೊರಡಿಸಿರುವ ಹೇಳಿಕೆ ಪ್ರಕಾರ, ಈ ಫ್ರೀ ಸರ್ವಿಸ್ ಸೌಕರ್ಯ ಎಲ್ಲಾ ದ್ವಿಚಕ್ರ ವಾಹನಗಳು ಹಾಗೂ ಕಮರ್ಷಿಯಲ್ ವೆಹಿಕಲ್ ಗಳಿಗೆ ಅನ್ವಯಿಸುತ್ತದೆ ಎನ್ನಲಾಗಿದೆ. ಕೊರೊನಾ ವೈರಸ್ ಸೊಂಕಿನ ಎರಡನೆಯ ಅಲೆಯ (Coronavirus Second Wave In India) ಕಾರಣ ನಮ್ಮ ಕಂಪನಿಯ ಗ್ರಾಹಕರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕಳೆದ ವರ್ಷದಂತೆ ಈ ವರ್ಷವೂ ಕೂಡ ನಾವು ಉಚಿತ ಸರ್ವಿಸಿಂಗ್ ಅವಧಿಯನ್ನು ಎರಡು ತಿಂಗಳವರೆಗೆ ಹೆಚ್ಚಿಸಲಾಗಿದೆ ಮತ್ತು ಗ್ರಾಹಕರ ವಾಹನಗಳ ಕಾಳಜಿವಹಿಸುವುದು ನಮ್ಮ ಈ ಪ್ರಯತ್ನದ ಹಿಂದಿನ ಉದ್ದೇಶ ಎಂದು ಕಂಪನಿ ಹೇಳಿದೆ. 

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, 7ನೇ ವೇತನ ಆಯೋಗದ ಅಪ್ರೆಸಲ್ ಅವಧಿ ವಿಸ್ತರಣೆ

HMSI ಕೂಡ ಈ ಸೌಕರ್ಯ ಒದಗಿಸಿದೆ
ಇದಕ್ಕೂ ಮೊದಲು  Honda Motorcycle & Scooter India Pvt. Ltd. (HMSI) ಕೂಡ ಕೊವಿಡ್ -19 ಮಹಾಮಾರಿಯ ಎರಡನೇ ಅಲೆಯ ಹಿನ್ನೆಲೆ ದೇಶದ ಎಲ್ಲಾ ಡೀಲರ್ ಶಿಪ್ ಗಳಲ್ಲಿ ವಾರಂಟಿ ಹಾಗೂ ಉಚಿತ ಸರ್ವಿಸ್ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸುವ ಘೋಷಣೆ ಮಾಡಿದೆ. ಈ ಕುರಿತು ಹೇಳಿಕೆಯೊಂದನ್ನು ನೀಡಿರುವ HMSI, ಯಾರ ವಾಹನಗಳ ಉಚಿತ ಸರ್ವಿಸ್, ವಾರಂಟಿ ಹಾಗೂ ಎಕ್ಸ್ಟೆಂಡೆಡ್ ವಾರಂಟಿ ಏಪ್ರಿಲ್ ನಿಂದ ಮೇ 31ರೊಳಗೆ ಮುಗಿಯಬೇಕಿದೆಯೋ ಅವರಿಗೆ ಇದು ಅನ್ವಯಿಸಲಿದೆ ಎಂದು ಹೇಳಿತ್ತು. ಹಲವು ರಾಜ್ಯಗಳಲ್ಲಿ ಸಾರಿಗೆ ವ್ಯವಸ್ಥೆಯ ಮೇಲೆ ನಿರ್ಭಂಧನೆ ವಿಧಿಸಲಾಗಿರುವ ಕಾರಣ ತೊಂದರೆಗೊಳಗಾಗಿರುವ ಗ್ರಾಹಕರಿಗೆ ಭರವಸೆ ನೀಡಿದ್ದ ಕಂಪನಿ, ಇಂತಹ ಗ್ರಾಹಕರು ಜುಲೈ 31ರವರೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸೇವೆಗಳ ಲಾಭ ಪಡೆಯಬಹುದು ಎಂದಿತ್ತು.

ಇದನ್ನೂ ಓದಿ- WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್

ಬಜಾಜ್ ಗ್ರೂಪ್ ಕೂಡ ಈ ಹೆಜ್ಜೆಯನ್ನಿಟ್ಟಿದೆ
ಕೊರೊನಾ ಮಹಾಮಾರಿಯ ಎರಡನೆಯ ಅಲೆಯ ವಿರುದ್ಧ ಹೋರಾಡಲು ಬಜಾಜ್ ಗ್ರೂಪ್ 200 ಕೋಟಿ ರೂ. ಸಹಾಯ ಧನ ನೀಡುವುದಾಗಿಯೂ ಕೂಡ ಘೋಷಿಸಿದೆ. ಕೊರೊನಾ ಸೋಂಕಿನಿಂದ ಗಂಭೀರವಾಗಿ  ಬಳಲುತ್ತಿರುವ ರೋಗಿಗಳ ಪ್ರಾಣ ಉಳಿಸುವ ಉದ್ದೇಶದಿಂದ ಕಂಪನಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಸುತ್ತಿದೆ. ಇದಲ್ಲದೆ ಕಂಪನಿ ವೆಂಟಿಲೆಟರ್, ಮಾಸ್ಕ್, PPE ಕಿಟ್ ಹಾಗೂ ಹಲವು ಚಿಕಿತ್ಸೆಯ ಉಪಕರಣಗಳನ್ನು ಕೂಡ ಪೂರೈಸುತ್ತಿದೆ. ಇದರ ಜೊತೆಗೆ ತನ್ನ ಕಂಪನಿಯ ನೌಕರರ ಕಾಳಜಿವಹಿಸಿರುವ ಗ್ರೂಪ್, ಹಲವು ಹಿತಕರ ನಿರ್ಣಯಗಳನ್ನು ಕೈಗೊಂಡಿದೆ. ಕಂಪನಿಯ ಯಾವ ನೌಕರರು Covid-19 ಸೋಂಕಿನಿಂದ ಮೃತಪಟ್ಟಿದ್ದಾರೆಯೋ ಅಂತಹ ನೌಕರರ ಕುಟುಂಬ ಸದಸ್ಯರಿಗೆ ಮುಂದಿನ ಎರಡು ವರ್ಷದವರೆಗೆ ವೇತನ ಪಾವತಿಸುವುದಾಗಿದೆ ಹೇಳಿದೆ. ಇದಲ್ಲದೆ ಮೃತ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಫಂಡ್ ನೀಡಲಾಗುವುದು ಎಂದು ಕಂಪನಿ ಘೋಷಿಸಿದೆ.

ಇದನ್ನೂ ಓದಿ- ಈ ನಕ್ಷತ್ರದಲ್ಲಿ ಜನಿಸಿದ ಜನರು ಭಾಗ್ಯಶಾಲಿಗಳು, ಶನಿ, ಬೃಹಸ್ಪತಿಯ ವಿಶೇಷ ಕೃಪೆ ಇವರ ಮೇಲಿರುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News