ಮಂಗಳೂರು : ಬ್ಲ್ಯೂ ವೇಲ್ ಎಂಬ ಮಕ್ಕಳ ಪ್ರಾಣ ತೆಗೆಯುವ ಗೇಮ್ ಈಗ ಸಾಗರಗಳ ನಗರಿ ಮಂಗಳೂರಿಗೆ ಕಾಲಿರಿಸಿದೆ. ಮಂಗಳೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ ಬ್ಲ್ಯೂ ವೇಲ್ ಆಕೃತಿಯಲ್ಲಿ ತನ್ನ ಕೈ ಕುಯ್ದುಕೊಂದಿದ್ದಾನೆ. ಸದ್ಯ ಪೋಷಕರು ಮತ್ತು ಶಿಕ್ಷಕರ ಸಮಯ ಪ್ರಜ್ಞೆಯಿಂದ ನಡೆಯಬೇಕಿದ್ದ ಬಾರಿ ಅವಗಢ ತಪ್ಪಿದೆ.
ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಬ್ಲ್ಯೂ ವೇಲ್ ಗೇಮನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದ. ವಿದ್ಯಾರ್ಥಿಯು ಬ್ಲ್ಯೂ ವೇಲ್ ಆಕೃತಿಯಲ್ಲಿ ತನ್ನ ಕೈ ಕುಯ್ದುಕೊಂಡಿದ್ದನು ಕಂಡ ಪೋಷಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮೊಬೈಲ್ ನಲ್ಲಿ ಡೌನ್ಲೋಡ್ ಆಗಿದ್ದ ಗೇಮನ್ನು ಡಿಲೀಟ್ ಮಾಡಿದ್ದಾರೆ. ಹುಡುಗನ ಪೋಷಕರು ಮತ್ತು ಶಿಕ್ಷಕರು ಬುದ್ದಿವಾದ ಹೇಳಿ ಹುಡುಗನನ್ನು ರಕ್ಷಿಸಿದ್ದಾರೆ.
ಎಲ್ಲಾ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ವಹಿಸಿ ಮತ್ತು ಅವರು ಮೊಬೈಲ್ ನಲ್ಲಿ ಯಾವುದೇ ಆಟವಾದದಂತೆ ಜಾಗೃತಿವಹಿಸಿ ಎಂದು ಹುಡುಗನ ಪೋಷಕರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.