Covid Vaccine ಪಡೆಯುವವರು ಎಷ್ಟು ದಿನ ಆಲ್ಕೋಹಾಲ್ ಕುಡಿಯಬಾರದು? ತಜ್ಞರು ಏನ್ ಹೇಳ್ತಾರೆ

ಕೋವಿಡ್ ಲಸಿಕೆ ಪಡೆಯುವ 2 ದಿನಗಳ ಮೊದಲು ಮತ್ತು 2 ದಿನಗಳ ನಂತರ ಜನರು ಆಲ್ಕೊಹಾಲ್ ಸೇವಿಸುವುದನ್ನು ತಪ್ಪಿಸಬೇಕು ಎಂದು ವೈದ್ಯ ತಲ್ವಾರ್ ಹೇಳಿದರು.

Written by - Yashaswini V | Last Updated : May 8, 2021, 03:36 PM IST
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ವೈರಸ್ ವಿರುದ್ಧ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತಿದೆ
  • ಆಲ್ಕೋಹಾಲ್ ಸೇವಿಸುವುದರಿಂದ ಕರೋನಾ ವೈರಸ್ ಸಾಯಬಹುದು ಎಂಬುದು ಕೇವಲ ಊಹಾಪೋಹ ಎಂದು ವೈದ್ಯರು ಹೇಳಿದ್ದಾರೆ
  • ಆಲ್ಕೋಹಾಲ್ ಸೇವನೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ
Covid Vaccine ಪಡೆಯುವವರು ಎಷ್ಟು ದಿನ ಆಲ್ಕೋಹಾಲ್ ಕುಡಿಯಬಾರದು? ತಜ್ಞರು ಏನ್ ಹೇಳ್ತಾರೆ title=
Advice On Drinking Alcohol Before Or After Covid Vaccine

ನವದೆಹಲಿ: ಕರೋನಾದ ಎರಡನೇ ತರಂಗವು ದೇಶದಲ್ಲಿ ತೀವ್ರ ಹಾನಿಯನ್ನುಂಟುಮಾಡುತ್ತಿದೆ. ಭಾರತದಲ್ಲಿ ಪ್ರತಿದಿನ 3-4 ಲಕ್ಷಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇದಲ್ಲದೆ ನಿತ್ಯ ದಾಖಲೆಯ ಮಟ್ಟದಲ್ಲಿ ಕರೋನಾದಿಂದಾಗಿ ಜನರು ಸಾವನ್ನಪ್ಪುತ್ತಿರುವುದು ಎಲ್ಲರ ಆತಂಕವನ್ನು ಹೆಚ್ಚಿಸಿದೆ. ಇತ್ತೀಚೆಗೆ ಆಲ್ಕೊಹಾಲ್ ಕುಡಿಯುವುದರಿಂದ ಕರೋನಾವೈರಸ್ ಉಂಟಾಗುವುದಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಅದೇ ಸಮಯದಲ್ಲಿ, ಕರೋನಾ ಲಸಿಕೆ ತೆಗೆದುಕೊಳ್ಳುವ ಮೊದಲು ಅಥವಾ ನಂತರ ಎಷ್ಟು ಸಮಯದವರೆಗೆ ಕುಡಿಯಬಾರದು ಎಂಬ ಕುತೂಹಲವೂ ಕುಡಿಯುವವರ ಮನಸ್ಸಿನಲ್ಲಿದೆ. ಕೋವಿಡ್ ಕುರಿತ ಪಂಜಾಬ್‌ನ ತಜ್ಞರ ಸಮಿತಿಯ ಮುಖ್ಯಸ್ಥ ಡಾ.ಕೆ.ಕೆ.ತಲ್ವಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವೈಜ್ಞಾನಿಕ ಮೇಲ್ವಿಚಾರಣೆಯ ಆಧಾರದ ಮೇಲೆ ಜನರು ಕೋವಿಡ್ ಲಸಿಕೆ ಪಡೆಯುವ 2 ದಿನಗಳ ಮೊದಲು ಮತ್ತು 2 ದಿನಗಳ ನಂತರ ಆಲ್ಕೊಹಾಲ್ ಸೇವನೆಯನ್ನು ತಪ್ಪಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಆಲ್ಕೋಹಾಲ್ (Alcohol) ಮತ್ತು ಕರೋನಾಗೆ ಸಂಬಂಧಿಸಿದ ವದಂತಿಗಳ ಬಗ್ಗೆಯೂ ಪ್ರತಿಕ್ರಿಯಿಸಿರುವ ಡಾ.ಕೆ.ಕೆ.ತಲ್ವಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ವದಂತಿಗಳ ಬಗ್ಗೆ ಗಮನ ಹರಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ - Watermelon: ಆಲ್ಕೋಹಾಲ್ ಸೇವಿಸುವವರೇ ಕಲ್ಲಂಗಡಿ ತಿನ್ನುವ ಮೊದಲು ಇರಲಿ ಎಚ್ಚರ

ಆಲ್ಕೋಹಾಲ್ ಸೇವನೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ:
ಹೆಚ್ಚು ಆಲ್ಕೊಹಾಲ್ ಸೇವಿಸುವುದರಿಂದ ಜನರ ರೋಗನಿರೋಧಕ ಶಕ್ತಿ ಕಡಿಮೆ ಆಗಬಹುದು ಮತ್ತು ಇದು ಸೋಂಕಿಗೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆಯ ಸಂದೇಶವನ್ನು ಸಹ ನೀಡಿದ್ದಾರೆ. 

ವಾಸ್ತವವಾಗಿ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುವ ಸಂದೇಶದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ವೈರಸ್ ವಿರುದ್ಧ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ತಪ್ಪು ಕಲ್ಪನೆಯು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ - Coronavirus: ಭಾರತಕ್ಕೆ ಕರೋನಾದಿಂದ ಯಾವಾಗ ಸಿಗಲಿದೆ ಮುಕ್ತಿ? ವಿಜ್ಞಾನಿಗಳು ಏನಂತಾರೆ!

"ಜನರು ಹೆಚ್ಚು ಆಲ್ಕೊಹಾಲ್ ಸೇವಿಸಿದರೆ ಅವರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು" ಎಂದು ಅವರು ಹೇಳಿದರು. ಆಲ್ಕೋಹಾಲ್ ಸೇವಿಸುವುದರಿಂದ ಕರೋನಾ ವೈರಸ್ ಸಾಯಬಹುದು ಎಂಬುದು ಕೇವಲ ಊಹಾಪೋಹವಾಗಿದೆ. ಆದರೆ, ಬಹಳ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News