7th Pay Commission Latest News: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ನೀಡಿದೆ ಭರ್ಜರಿ ಉಡುಗೊರೆ

7th Pay Commission Latest News - ಸರ್ಕಾರಿ ನೌಕರರಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ಬಹುದೊಡ್ಡ ಕೊಡುಗೆಯೊಂದನ್ನು ಪ್ರಕಟಿಸಿದೆ. 

7th Pay Commission Latest News - ಸರ್ಕಾರಿ ನೌಕರರಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ಬಹುದೊಡ್ಡ ಕೊಡುಗೆಯೊಂದನ್ನು ಪ್ರಕಟಿಸಿದೆ. ಜನವರಿ 1, 2004 ಅಥವಾ ಅದಕ್ಕಿಂತ ಮೊದಲು ಕೇಂದ್ರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಹಳೆ ಪೆನ್ಷನ್ ಯೋಜನೆಯ ಲಾಭ ನೀಡುವುದಾಗಿ ಘೋಷಿಸಿದೆ.  ಹೀಗಾಗಿ ಈ ನೌಕರರಿಗೆ ಹಳೆ ಪೆನ್ಷನ್ ಯೋಜನೆಯ (Old Pension Scheme) ಲಾಭ ಇದೀಗ ಮೇ 31, 2021ರವರೆಗೆ ಸಿಗಲಿದೆ.

 

ಇದನ್ನೂ ಓದಿ- India's most expensive Bungalow:ದೇಶದ ಅತ್ಯಂತ ದುಬಾರಿ Bungalow 1001 ಕೋಟಿ ರೂ.ಗೆ ಮಾರಾಟ, ಖರೀದಿಸಿದ್ದು ಯಾರು?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /10

1. 7th Pay Commission Latest News - ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದ ನೌಕರರು - ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಇಂತಹ ಸಾವಿರಾರು ನೌಕರರಿದ್ದು, ಅವರ ನಿಯುಕ್ತಿ (Appointment) ಏಪ್ರಿಲ್ 1ರ ಬಳಿಕ ನಡೆದಿದ್ದು, ಆದರೆ, ಅವರ ಆಯ್ಕೆ ಪ್ರಕ್ರಿಯೆ ಏಪ್ರಿಲ್ 1ರ ಮೊದಲೇ ಪೂರ್ಣಗೊಂಡಿದೆ. ರಾಜ್ಯ ಸರ್ಕಾರಿ ನೌಕರರ ಸಂಯುಕ್ತ ಪರಿಷತ್, ಯುಪಿ ಸರ್ಕಾರದಲ್ಲಿ ಮಹಾಮಂತ್ರಿಯಾಗಿರುವ ಆರ್.ಕೆ ನಿಗಮ್ ಸರ್ಕಾರದ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಹಳೆ ಪೆನ್ಷನ್ ಯೋಜನೆಯ (OPS) ಲಾಭ ಸಿಗದ ಸರ್ಕಾರಿ ನೌಕರರು ಇದರ ವಿರುದ್ಧ ನ್ಯಾಯಾಲಯಕ್ಕೆ ಮೊರೆಹೋಗಿದ್ದರು. ಹೀಗಾಗಿ ಕೇಂದ್ರ ಸರ್ಕಾರದ ಈ ಆದೇಶದ ಬಳಿಕ ಇಂತಹ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲಿದ್ದು, ಇವರಲ್ಲಿ ಹೆಚ್ಚಿನ ನೌಕರರು ಶಿಕ್ಷಕರಾಗಿದ್ದಾರೆ ಎಂದು ಹೇಳಿದ್ದಾರೆ.

2 /10

2. ಪ್ರಕರಣ ಏನು? : 7th Pay Commission Latest News - ಸರ್ಕಾರ ನೀಡಿರುವ ಆದೇಶದ ಪ್ರಕಾರ ಸೇವಾವಧಿಯಲ್ಲಿ ಒಂದು ವೇಳೆ ರಿಕ್ರ್ಯೂಟ್ಮೆಂಟ್ ಫಲಿತಾಂಶಗಳು ಜನವರಿ 1, 2004ಕ್ಕಿಂತ ಮೊದಲು ಘೋಷಣೆಯಾಗಿದ್ದು, ನಿಯುಕ್ತಿ ಒಂದು ವೇಳೆ ಪೊಲೀಸ್ ಪರಿಶೀಲನೆ, ವೈದ್ಯಕೀಯ ಪರಿಶೀಲನೆಯ ಕಾರಣ ತಡವಾಗಿದ್ದರೆ ಇದಕ್ಕೆ ನೌಕರರು ಹೊಣೆಗಾರರಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ ಇದೊಂದು ಆಡಳಿತಾತ್ಮಕ ನ್ಯೂನ್ಯತೆಯಾಗಿದೆ. ಹೀಗಾಗಿ ಇಂತಹ ನೌಕರರಿಗೆ ಒನ್ ಟೈಮ್ ಆಪ್ಶನ್ (One Time Option) ನೀಡಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

3 /10

3. OPSಗಾಗಿ ಅರ್ಹತೆ: 7th Pay Commission Latest News - ಈ ಕುರಿತು ಹೇಳಿಕೆ ನೀಡಿರುವ ಎಜಿ ಕಚೇರಿ ಬ್ರದರ್ ಹುಡ್, ಪ್ರಯಾಗರಾಜ್ ಮಾಜಿ ಅಧ್ಯಕ್ಷ ಹರಿವಂಶ ತಿವಾರಿ, ಹಳೆ ಪೆನ್ಷನ್ NPS ಯೋಜನೆ ಹೆಚ್ಚು ಲಾಭಕಾರಿಯಾಗಿದೆ ಎಂದಿದ್ದಾರೆ. ಇದರಿಂದ ಪೆನ್ಷನ್ ಪಡೆಯುವವರು ಸೇರಿದಂತೆ ಅವರ ಕುಟುಂಬ ಸದಸ್ಯರಿಗೂ ಕೂಡ ರಕ್ಷಣೆ ಸಿಗುತ್ತದೆ. ಉಳಿದ ನೌಕರರಿಗೂ ಕೂಡ ಒಂದು ವೇಳೆ ಈ ಯೋಜನೆಯ ಲಾಭ ದೊರೆತರೆ ಅವರ ನಿವೃತ್ತಿ ಭವಿಷ್ಯ ಕೂಡ ಸುರಕ್ಷಿತವಾಗಲಿದೆ. OPSಗೆ ಅರ್ಹತೆ ಪಡೆದ ಬಳಿಕ ಈ ನೌಕರರ NPS ಖಾತೆ ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ. ಅಷ್ಟೇ ಅಲ್ಲ ಸರ್ಕಾರದ ಎಲ್ಲ ವಿಭಾಗಗಳಿಗೆ ಈ ಆದೇಶವನ್ನು ಅನುಷ್ಠಾನಗೊಳಿಸಲು ಸರ್ಕಾರ ಸೂಚಿಸಿದೆ.

4 /10

4. ಜನವರಿ 1, 2004 ರಿಂದ OPS ಅನ್ವಯ: 7th Pay Commission Latest News -ಕೇಂದ್ರ ಸರ್ಕಾರ ಇದೀಗ OPS ಅನ್ನು ಜನವರಿ 1, 2004 ರಿಂದ ಜಾರಿಗೊಳಿಸಿತ್ತು. ಇದರ ಬಳಿಕ ಹೊಸ ಪೆನ್ಷನ್ ಯೋಜನೆ  (New Pension Scheme, NPS) ಅನ್ನು ಜಾರಿಗೊಳಿಸಿತ್ತು. ಆದರೆ, ಸರ್ಕಾರದ ಈ ನಿರ್ಧಾರದಿಂದ ನೌಕರರು ಸಂತುಷ್ಟರಾಗಿರಲಿಲ್ಲ ಮತ್ತು ಹಳೆ ಪೆನ್ಷನ್ ಯೋಜನೆಯೇ ಉತ್ತಮ ಎಂದು ಅವರು ವಾದ ಮಂಡಿಸಿದ್ದರು.  

5 /10

5.ಹಳೆ ಪೆನ್ಷನ್ ಯೋಜನೆಯ ಮೂರು ದೊಡ್ಡ ಲಾಭಗಳು: 7th Pay Commission Latest Newsa) ಹಳೆ ಪೆನ್ಷನ್ ಯೋಜನೆಯಲ್ಲಿ ಪೆನ್ಷನ್ ಲೆಕ್ಕವನ್ನು ನೌಕರರು ತಮ್ಮ ಸೇವಾವಧಿಯ ಕೊನೆಯ ತಿಂಗಳಲ್ಲಿ ಪಡೆಯುವ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿತ್ತು.  b)OPS ನಲ್ಲಿ ಹಣದುಬ್ಬರ ಹೆಚ್ಚಾಗುತ್ತಿದ್ದಂತೆ DA ಕೂಡ ಹೆಚ್ಚಾಗುತ್ತಿತ್ತು. c) ನೂತನ ವೇತನ ಆಯೋಗ ಜಾರಿಯಾದ ಬಳಿಕ ಅದರ ಲಾಭ ಕೂಡ ಪೆನ್ಷನ್ ಧಾರಕರಿಗೆ ಸಿಗುತ್ತಿತ್ತು.

6 /10

6.NPS ಏನು?:  7th Pay Commission Latest News- ನ್ಯಾಷನಲ್ ಪೆನ್ಷನ್ ಸಿಸ್ಟಂ ಅಡಿ ಬರುವ ನ್ಯೂ ಪೆನ್ಷನ್ ಸ್ಕೀಮ್  18 ರಿಂದ 60 ವರ್ಷದೊಳಗಿನವರು ಹೂಡಿಕೆಯನ್ನು ಮಾಡಬಹುದು. ಎಲ್ಲ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಅಕೌಂಟ್ ಗಳನ್ನೂ ತೆರೆಯಬಹುದು. ಸರ್ಕಾರಿ ನೌಕರರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80CCDನ ಸಬ ಸೆಕ್ಷನ್ 80CCD (1)ರ ಅಡಿ ತೆರಿಗೆ ವಿನಾಯಿತಿಯ ಲಾಭ ಕೂಡ ಸಿಗುತ್ತದೆ. ವೇತನ ಪಡೆಯುವ ನೌಕರರು ತಮ್ಮ ವೇತನದ ಶೇ. 10 ರಷ್ಟು ಮತ್ತು ವೇತನ ಪಡೆಯದ ನೌಕರರು ತಮ್ಮ ಒಟ್ಟು ಆದಾಯದ ಶೇ.20ರಷ್ಟನ್ನು ಪೆನ್ಷನ್ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕಾಗಿ ಅವರಿಗೆ 1.5ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.

7 /10

7. ಎರಡು ವಿಧದ NPS ಖಾತೆಗಳಿವೆ: 7th Pay Commission Latest News - Wealth Management at Transcend Consultants ಮ್ಯಾನೇಜರ್ ಕಾರ್ತಿಕ್ ಝವೇರಿ ಪ್ರಕಾರ ಒಟ್ಟು ಎರಡು ವಿಧದ NPSನಲ್ಲಿ ಹೂಡಿಕೆ ಮಾಡಬಹುದಾಗಿದೆ. ಆಕ್ಟಿವ್ ಮೋಡ್ ಹೆಸರಿನ ಮೊದಲ ಆಯ್ಕೆಯಲ್ಲಿ ಹೂಡಿಕೆದಾರರು ಪ್ರತಿವರ್ಷ ತಮ್ಮ ರಿಟರ್ನ್ ಅನ್ನು ಗಮನಿಸಿ ಅದನ್ನು ಇಕ್ವಿಟಿ ಹಾಗೂ ಡೆಟ್ ಆಯ್ಕೆಗಳಲ್ಲಿ ಬದಲಾವಣೆ ಮಾಡಬಹುದಾಗಿದೆ.

8 /10

8. ಎಂಟು ಫಂಡ್ ಮ್ಯಾನೇಜರ್ ಮೂಲಕ ಹೂಡಿಕೆಯ ನಿರ್ವಹಣೆ: 7th Pay Commission Latest News - ಇನ್ನೊಂದೆಡೆ ಆಟೋ ಮಾಡ್ ಆಯ್ಕೆಯಲ್ಲಿ ಹೂಡಿಕೆದಾರರ ಹಣವನ್ನು ಒಟ್ಟು ಎಂಟು ಫಂಡ್ ಮ್ಯಾನೇಜರ್ ಗಳು ನಿರ್ವಹಿಸುತ್ತಾರೆ ಹಾಗೂ ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಹೂಡಿಕೆದಾರರ ಹಣವನ್ನು ಇಕ್ವಿಟಿ ಹಾಗೂ ಡೆಟ್ ಫಂಡ್ ಗಳಲ್ಲಿ ಬದಲಾಯಿಸುತ್ತಾರೆ. NPSನಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80CCD ಅಡಿ ತೆರಿಗೆ ವಿನಾಯ್ತಿ ಪಡೆಯಬಹುದು.

9 /10

9. ಖಾತೆ ಹೇಗೆ ತೆರೆಯಬೇಕು?: 7th Pay Commission Latest News - ಖಾತೆ ತೆರೆಯಲು ಬಯಸುವ ಹೊಸ ಜನರು KYCಗಾಗಿ ಯಾವುದೇ ದಾಖಲೆ ನೀಡುವ ಅವಶ್ಯಕತೆ ಇಲ್ಲ. ಕೇವಲ ನೀವು ಆಫ್ಲೈನ್ Aadhaar ಮೂಲಕ ನೀವು ಖಾತೆ ತೆರೆಯಬಹುದು ಹಾಗೂ ಅದರ ಫೋಟೋ ಕಾಪಿ ಅಂದರೆ ಝೆರಾಕ್ಸ್ ನೀಡುವ ಅವಶ್ಯಕತೆ ಇಲ್ಲ.

10 /10

10. E-NPS ಖಾತೆ ಹೇಗೆ ತೆರೆಯಬೇಕು?: 7th Pay Commission Latest News -Pfrda ಈ ಮೊದಲೇ E-NPS/ ಪಾಯಿಂಟ್ ಆಫ್ ಪ್ರೆಜೆನ್ಸ್ ಕೇಂದ್ರಗಳ ಮೂಲಕ ಸಂಭಾವ್ಯ ಹೂಡಿಕೆದಾರರ ಅನುಮತಿಯ ಜೊತೆಗೆ ಆಫ್ಲೈನ್ ಆಧಾರ್ ಕಾರ್ಡ್ ಮೂಲಕ NPS ಖಾತೆ ತೆರೆಯಲು ಅನುಮತಿ ನೀಡಿದೆ.