ಜಕಾರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಪೂರ್ವ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಹಲವು ಭಾಗಗಳಲ್ಲಿ ಪ್ರವಾಹ, ಭೂಕುಸಿತ ಸಂಭವಿಸಿದ್ದು ಘಟನೆಯಲ್ಲಿ ಇದುವರೆಗೂ ಸುಮಾರು 23 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಎಂದು ವರದಿಯಾಗಿದೆ.
ಬೆಟ್ಟಗಳಿಂದ ಬೀಳುತ್ತಿರುವ ಮಣ್ಣು:
ದೇಶದ (Indonesia) ಪೂರ್ವ ಭಾಗದಲ್ಲಿ ಪ್ರವಾಹ ಸಂಭವಿಸಿದೆ ಎಂದು ರಾಷ್ಟ್ರೀಯ ವಿಪತ್ತು ಪಾರುಗಾಣಿಕಾ ಸಂಸ್ಥೆ ವಕ್ತಾರ ರಾಡಿತ್ಯ ಜಾತಿ ತಿಳಿಸಿದ್ದಾರೆ. ಇದರಿಂದಾಗಿ ಫ್ಲೋರೆಸ್ ದ್ವೀಪದಲ್ಲಿರುವ ಲ್ಯಾಮೆನೆಲೆ ಗ್ರಾಮದಲ್ಲಿ ಸುಮಾರು 50 ಮನೆಗಳ ಮೇಲೆ ಮಧ್ಯರಾತ್ರಿಯ ನಂತರ ಸುತ್ತಮುತ್ತಲಿನ ಬೆಟ್ಟಗಳಿಂದ ಅಪಾರ ಪ್ರಮಾಣದ ಮಣ್ಣು ಬೀಳುತ್ತಿದೆ. ಮಳೆ ಮತ್ತು ಬೀಳುತ್ತಿರುವ ಭಗ್ನಾವಶೇಷವು ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಸಿತು. ಜನರು ಅವಸರದಲ್ಲಿ ಹೊರಗೆ ಧಾವಿಸಿದರು. ಘಟನೆಯ ನಂತರ 9 ಮಂದಿಯನ್ನು ಪಾರುಗಾಣಿಕ ತಂಡವು ರಕ್ಷಿಸಿದೆ. 20 ಮೃತ ದೇಹಗಳನ್ನು ಪತ್ತೆ ಹಚ್ಚಲಾಗಿದೆ. ಓಯಾಂಗ್ ಬಯಾಂಗ್ ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರ ಶವಗಳು ಪತ್ತೆಯಾಗಿವೆ ಎಂದವರು ವಿವರಿಸಿದರು.
ಇದನ್ನೂ ಓದಿ - Indonesiaದಲ್ಲಿ ರಸ್ತೆಗಳ ಮೇಲೆ ಹರಿದ ರಕ್ತ ? 'ರಕ್ತದ ನೆರೆ' ಹಿಂದಿನ ಸತ್ಯಾಸತ್ಯತೆ ಏನು?
ನೂರಾರು ಮನೆಗಳು ಪ್ರವಾಹದಲ್ಲಿ ಮುಳುಗಿವೆ:
ವೈಬುರಕ್ ಎಂಬ ಹಳ್ಳಿಯಲ್ಲಿ ರಾತ್ರಿ ಭಾರಿ ಮಳೆಯ ನಂತರ ನಾಲ್ಕು ಜನರು ಗಾಯಗೊಂಡಿದ್ದಾರೆ ಮತ್ತು ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪಾರುಗಾಣಿಕಾ ಸಂಸ್ಥೆ ವಕ್ತಾರ ಹೇಳಿದ್ದಾರೆ. ಪ್ರವಾಹದ (Flood) ನೀರು ಪೂರ್ವ ಫ್ಲೋರ್ಸ್ ಜಿಲ್ಲೆಯ ಹೆಚ್ಚಿನ ಭಾಗಕ್ಕೆ ನುಗ್ಗಿ ನೂರಾರು ಮನೆಗಳು ನೀರಿನಲ್ಲಿ ಮುಳುಗಿವೆ. ಈ ಮನೆಗಳಲ್ಲಿ ಹಲವು ಪ್ರವಾಹದಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿವೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ - ಮಹಿಳಾ ವಿಜ್ಞಾನಿಯನ್ನು ಜೀವಂತ ತಿಂದು ಹಾಕಿದ ಮೊಸಳೆ
10 ಸಾವಿರ ಜನರು ಬಲವಂತವಾಗಿ ಮನೆ ತೊರೆಯಬೇಕಾಯಿತು :
ನೂರಾರು ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ವಿದ್ಯುತ್ ಕಡಿತ, ರಸ್ತೆ ಕಡಿತ ಮತ್ತು ದೂರದ ಪ್ರದೇಶಗಳಿಂದಾಗಿ ಪರಿಹಾರ ನೀಡುವಲ್ಲಿ ಸಮಸ್ಯೆ ಇದೆ. ನೆರೆಯ ಪ್ರಾಂತ್ಯದ ಪಶ್ಚಿಮ ನುಸಾ ಟೆಂಗ್ರಾದ ವಿಮಾ ನಗರದಲ್ಲಿ ಪ್ರವಾಹದ ವರದಿಗಳು ಕಂಡುಬಂದಿವೆ. ಪ್ರವಾಹದಿಂದಾಗಿ ಸುಮಾರು 10 ಸಾವಿರ ಜನರು ಅನಿವಾರ್ಯವಾಗಿ ಮನೆ ತೊರೆಯುವಂತಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.