ನವದೆಹಲಿ: Aadhaar-PAN Card Linking Deadline Extended - ಕೇಂದ್ರ ಸರ್ಕಾರ ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವ ಅಂತಿಮ ಗಡುವನ್ನು ಪುನಃ ವಿಸ್ತರಣೆ ಮಾಡಿದೆ. ಹೀಗಾಗಿ ಇನ್ಮುಂದೆ ನೀವು ನಿಮ್ಮ Aadhaar-PAN ಕಾರ್ಡ್ ಅನ್ನು ಜೂನ್ 30, 2021 ರವರೆಗೆ ಲಿಂಕ್ ಮಾಡಿಸಬಹುದು. ಈ ಮೊದಲು ಈ ಎರಡೂ ದಾಖಲೆಗಳನ್ನು ಜೋಡಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು.
ಇದನ್ನೂ ಓದಿ- PAN-Aadhaar Link: ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲಾಗಿದೆಯೇ?
ಆದಾಯ ತೆರಿಗೆ ಇಲಾಖೆ (Income Tax Department) ಟ್ವೀಟ್ ಮಾಡುವ ಮೂಲಕ ಈ ಕುರಿತು ಮಾಹಿತಿ ನೀಡಿದ್ದು PAN-Aadhaar ಜೋಡಣೆಯ ಅಂತಿಮ ಗಡುವನ್ನು ವಿಸ್ತರಿಸಿರುವುದಾಗಿ ಘೋಷಿಸಿದೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಆದಾಯ ತೆರಿಗೆ ಇಲಾಖೆ, ಕೊರೊನಾ ಮಹಾಮಾರಿಗೆ ಹಿನ್ನೆಲೆ, ಜನರಿಗೆ PAN-Aadhaar ಜೋಡಣೆಯಲ್ಲಿ ಅಡಚಣೆ ಎದುರಾಗುತ್ತಿದೆ. ಜನರ ಈ ಸಮಸ್ಯೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಈ ಗಡುವನ್ನು ಮಾರ್ಚ್ 31, 2021 ರಿಂದ ಜೂನ್ 30, 2021ರವರೆಗೆ ವಿಸ್ತರಿಸಿದೆ ಎಂದು ಹೇಳಿದೆ.
ಇದನ್ನೂ ಓದಿ- PAN-Aadhaar ಲಿಂಕ್‌ಗೆ ಕೆಲವೇ ದಿನಗಳು ಬಾಕಿ, ಈ ಕೆಲಸ ಮಾಡದಿದ್ದರೆ 10 ಸಾವಿರ ದಂಡ
Central Government extends the last date for linking of Aadhaar number with PAN from 31st March, 2021 to 30th June, 2021, in view of the difficulties arising out of the COVID-19 pandemic.(1/2)@nsitharamanoffc@Anurag_Office@FinMinIndia
— Income Tax India (@IncomeTaxIndia) March 31, 2021
ದಂಡ ನಿಗದಿಪಡಿಸಲಾಗಿತ್ತು.
ಇದಕ್ಕೂ ಮೊದಲು ಸರ್ಕಾರ ಪ್ಯಾನ್ (PAN Card) ಹಾಗೂ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡುವ ಅಂತಿಮ ದಿನಾಂಕವನ್ನು 31 ಮಾರ್ಚ್, 2021ಕ್ಕೆ ನಿಗದಿಪಡಿಸಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಆದಾಯ ತೆರಿಗೆ ಇಲಾಖೆ ಈ ಅರದೂ ದಾಖಲೆಗಳನ್ನು ಜೋಡಿಸದ ವ್ಯಕ್ತಿಯ ಪ್ಯಾನ್ ಕಾರ್ಡ್ ಏಪ್ರಿಲ್ 1, 2021 ರಿಂದ ನಿಷ್ಕ್ರೀಯಗೊಳಿಸಲಾಗುವುದು ಹಾಗೂ ಮಾರ್ಚ್ 31ರ ಬಳಿಕ ಲಿಂಕ್ ಮಾಡಿಸಲು ರೂ.1000 ದಂಡ ವಿಧಿಸಲಾಗುವುದು.
ಇದನ್ನೂ ಓದಿ- ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುವ ಈ 8 ಕೆಲಸಗಳನ್ನು ಜೂನ್ 30ರ ಮೊದಲು ಪೂರ್ಣಗೊಳಿಸಿ