Pumpkin- ಕುಂಬಳಕಾಯಿಯನ್ನು ಈ ರೀತಿ ಬಳಸಿ ಸುಂದರ ತ್ವಚೆ, ಕೂದಲು ನಿಮ್ಮದಾಗಿಸಿ

Pumpkin For Hair And Skin: ಕುಂಬಳಕಾಯಿ ಚರ್ಮ ಮತ್ತು ಕೂದಲಿಗೆ ಹೇಗೆ ಪ್ರಯೋಜನಕಾರಿ ಆಗಿದೆ ಎಂದು ತಿಳಿಯೋಣ.

Written by - Yashaswini V | Last Updated : Mar 31, 2021, 03:10 PM IST
  • ಕುಂಬಳ ಕಾಯಿ ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ
  • ಆರೋಗ್ಯದ ಜೊತೆಗೆ, ಕುಂಬಳಕಾಯಿ ಚರ್ಮ ಮತ್ತು ಕೂದಲಿಗೆ ಕೂಡ ತುಂಬಾ ಒಳ್ಳೆಯದು
  • ಕುಂಬಳಕಾಯಿಯಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ವಿಟಮಿನ್ ಎ, ಕೆ ಮತ್ತು ಇ ಸಮೃದ್ಧವಾಗಿದೆ
Pumpkin- ಕುಂಬಳಕಾಯಿಯನ್ನು ಈ ರೀತಿ ಬಳಸಿ ಸುಂದರ ತ್ವಚೆ, ಕೂದಲು ನಿಮ್ಮದಾಗಿಸಿ title=
Pumpkin For Hair And Skin

Pumpkin For Hair And Skin: ಹಲವರಿಗೆ ಕುಂಬಳಕಾಯಿ ಬಹಳ ಪ್ರಿಯವಾದ ತರಕಾರಿ. ಆದರೆ ಇನ್ನೂ ಕೆಲವರು ಶೀತ, ಮಂಡಿನೋವಿನ ಸಮಸ್ಯೆಯ ನೆಪ ಹೇಳಿ ಕುಂಬಳಕಾಯಿ ತಿನ್ನಲು ಹಿಂಜರಿಯುತ್ತಾರೆ. ಆದರೆ ಕುಂಬಳ ಕಾಯಿ ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆರೋಗ್ಯದ ಜೊತೆಗೆ, ಕುಂಬಳಕಾಯಿ ಚರ್ಮ ಮತ್ತು ಕೂದಲಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. 

ಕುಂಬಳಕಾಯಿ (Pumpkin) ಯಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ವಿಟಮಿನ್ ಎ, ಕೆ ಮತ್ತು ಇ ಸಮೃದ್ಧವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಚರ್ಮ ಮತ್ತು ಕೂದಲಿನ ಸಮಸ್ಯೆಗಳೊಂದಿಗೆ ಸಹ ಹೋರಾಡುತ್ತಿದ್ದರೆ, ಕುಂಬಳಕಾಯಿ ನಿಮಗೆ ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಕುಂಬಳಕಾಯಿ ಚರ್ಮ ಮತ್ತು ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.

ಇದನ್ನೂ ಓದಿ - ಪ್ರತಿದಿನದ ಈ ಸಣ್ಣ ಕೆಲಸ ನಿಮಗೆ ನೀಡುತ್ತೆ ಸುಂದರ, ಹೊಳೆಯುವ ತ್ವಚೆ!

- ವಿಟಮಿನ್ ಎ, ಸಿ ಮತ್ತು ಇ ಕುಂಬಳಕಾಯಿಯಲ್ಲಿ ಕಂಡುಬರುತ್ತವೆ, ಇದು ಚರ್ಮದ (Skin) ನಮ್ಯತೆಯನ್ನು ಕಾಪಾಡುತ್ತದೆ. ಇದರ ಬಳಕೆಯು ಸುಕ್ಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

- ತೂಕ ನಷ್ಟ: ಕುಂಬಳಕಾಯಿ ತೆಂಗಿನಕಾಯಿ ಸಾರು ತೂಕವನ್ನು ಕಡಿಮೆ ಮಾಡುತ್ತದೆ.

- ಕುಂಬಳಕಾಯಿಯಲ್ಲಿ ಕಂಡುಬರುವ ಸತು ಮತ್ತು ವಿಟಮಿನ್ ಇ ಕಾರಣ, ಇದು ಚರ್ಮದ ಮೊಡವೆಗಳನ್ನು ನಿವಾರಿಸಲು ಸಹಾಯಕವಾಗಿವೆ.

ಇದನ್ನೂ ಓದಿ -  Hair Care Tips: ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಹಾಕಿ ದಟ್ಟವಾದ ಕೂದಲು ನಿಮ್ಮದಾಗಿಸಿ

- ನಿಮ್ಮ ಕೂದಲು (Hair) ತುಂಬಾ ಒಣಗಿದ್ದರೆ, ನೀವು ಕುಂಬಳಕಾಯಿ ಮಾಸ್ಕ್ ಬಳಸಬೇಕು. ಇದನ್ನು ತಯಾರಿಸಲು, ನೀವು 2 ಕಪ್ ಮಾಗಿದ ಕುಂಬಳಕಾಯಿಯಲ್ಲಿ 1 ಚಮಚ ತೆಂಗಿನ ಎಣ್ಣೆ, 1 ಟೀಸ್ಪೂನ್ ಜೇನುತುಪ್ಪ ಮತ್ತು 1 ಟೀಸ್ಪೂನ್ ಮೊಸರನ್ನು ಮಿಶ್ರಣ ಮಾಡಬೇಕು. ನಂತರ ಕೂದಲಿಗೆ ಪ್ಯಾಕ್ ಹಾಕಿ. ಬಳಿಕ ಅದನ್ನು  ಸುಮಾರು 15 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ.

- ಕುಂಬಳಕಾಯಿ ಬೀಜಗಳಲ್ಲಿರುವ ಖನಿಜಗಳು ಮತ್ತು ಜೀವಸತ್ವಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅದರಲ್ಲಿರುವ ಈ ಸಂಯುಕ್ತಗಳು ಸ್ಥಗಿತ ಪ್ರಕ್ರಿಯೆಯನ್ನು ಕಡಿಮೆ ಮಾಡಲು ಮತ್ತು ಕೂದಲನ್ನು ಬಲಿಷ್ಠವಾಗಿಸಲು ಸಹಾಯ ಮಾಡುತ್ತದೆ. ನೀವು ಉದ್ದ ಮತ್ತು ಹೊಳೆಯುವ ಕೂದಲನ್ನು ಹೊಂದಲು ಬಯಸಿದರೆ, ನಿಯಮಿತವಾಗಿ ಕುಂಬಳಕಾಯಿ ಬೀಜಗಳನ್ನು ಬಳಸಲು ಪ್ರಾರಂಭಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News