Covid-19 ಆತಂಕ: ಈ ದೇಶದಲ್ಲಿ ಮದ್ಯ ನಿಷೇಧಕ್ಕೆ ಸಿದ್ಧತೆ, ಆದರೂ ತೆರೆದಿರುತ್ತಂತೆ ಬಾರ್‌ಗಳು

ಕರೋನಾ ಹರಡುವುದನ್ನು ತಡೆಗಟ್ಟಲು, ಈಸ್ಟರ್ 2021 ರಂದು ದಕ್ಷಿಣ ಆಫ್ರಿಕಾದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು, ಆದರೂ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ದಿನವೂ ಮದ್ಯ ದೊರೆಯಲಿದೆ.

Written by - Yashaswini V | Last Updated : Mar 31, 2021, 12:40 PM IST
  • ಈಸ್ಟರ್‌ಗೆ ಕೆಲವು ನಿರ್ಬಂಧ ವಿಧಿಸಿದ ದಕ್ಷಿಣ ಆಫ್ರಿಕಾ ಸರ್ಕಾರ
  • ಈಸ್ಟರ್ 2021ರ ಆಚರಣೆಯ ಸಂದರ್ಭದಲ್ಲಿ ಕೇವಲ ಒಂದು ದಿನದ ಮಟ್ಟಿಗೆ ಮದ್ಯ ನಿಷೇಧ
  • ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ
Covid-19 ಆತಂಕ: ಈ ದೇಶದಲ್ಲಿ ಮದ್ಯ ನಿಷೇಧಕ್ಕೆ ಸಿದ್ಧತೆ, ಆದರೂ ತೆರೆದಿರುತ್ತಂತೆ ಬಾರ್‌ಗಳು  title=
Alcohol ban on Easter 2021

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ (South Africa) ಹೆಚ್ಚುತ್ತಿರುವ  ಕೋವಿಡ್ -19 (Covid-19) ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಮದ್ಯ ಮಾರಾಟವನ್ನು ನಿಷೇಧಿಸಲು ಮುಂದಾಗಿದೆ. ಆದಾಗ್ಯೂ, ಈಸ್ಟರ್ 2021 (Easter 2021) ರ ಆಚರಣೆಯ ಸಂದರ್ಭದಲ್ಲಿ ಕೇವಲ ಒಂದು ದಿನದ ಮಟ್ಟಿಗೆ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಹಬ್ಬದಂದು ಮದ್ಯ ಮಾರಾಟವನ್ನು ನಿಷೇಧಿಸುವ ಮೂಲಕ, ಸಾಮಾಜಿಕ ಕೂಟಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರದ ಹಿನ್ನಲೆಯಲ್ಲಿ ಸರ್ಕಾರವು ಈ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. 

ರಾಷ್ಟ್ರಪತಿಯವರ ಸಂದೇಶ:
ಕರೋನಾ (Coronavirus) ಹರಡುವುದನ್ನು ತಡೆಗಟ್ಟಲು ಈಸ್ಟರ್ 2021 ರಂದು ದಕ್ಷಿಣ ಆಫ್ರಿಕಾದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲು ಹಾಗೂ ಈ ದಿನ, ಧಾರ್ಮಿಕ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಜನರ ಸಂಖ್ಯೆಯನ್ನು ಮಿತಿಗೊಳಿಸಲು ಸರ್ಕಾರ ಸೂಚನೆಗಳನ್ನು ನೀಡಿದೆ. ವಾಸ್ತವವಾಗಿ ದೇಶವ್ಯಾಪಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ಸಿರಿಲ್ ರಾಮಾಫೋಸಾ (Cyril Ramaphosa) 'ಮದ್ಯಪಾನ, ಬೇಜವಾಬ್ದಾರಿಯುತ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈಸ್ಟರ್‌ಗೆ ಕೆಲವು ನಿರ್ಬಂಧಗಳನ್ನು ವಿಧಿಸುತ್ತೇವೆ' ಎಂದು ಹೇಳಿದರು.

ಇದನ್ನೂ ಓದಿ - ಈ ರಾಜ್ಯದಲ್ಲಿ ‘ಎಣ್ಣೆ’ ಬ್ಯಾನ್, ಆದರೂ ‘ಡ್ರಿಂಕ್ಸ್’ ವಿಚಾರದಲ್ಲಿ ಮಹಿಳೆಯರೇ ಫಸ್ಟ್..!

ಬಾರ್‌ಗಳಲ್ಲಿ ವೈನ್ ಲಭ್ಯ:
ಈಸ್ಟರ್ 2021 (Easter 2021) ರ ಆಚರಣೆಯ ಸಂದರ್ಭದಲ್ಲಿ ಕೇವಲ ಒಂದು ದಿನದ ಮಟ್ಟಿಗೆ ಮದ್ಯ (Alcohol) ನಿಷೇಧಿಸುವ  ಬಗ್ಗೆ ಮಾತನಾಡಿರುವ ರಾಷ್ಟ್ರಪತಿ ಸಿರಿಲ್ ರಾಮಾಫೋಸಾ ಅವರು ಮದ್ಯದ ಚಿಲ್ಲರೆ ಮಾರಾಟವನ್ನು ನಿಷೇಧಿಸಲಾಗುವುದು. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯವನ್ನು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ರಾತ್ರಿ 11 ಗಂಟೆಯ ಬಳಿಕ ಇದಕ್ಕೆ ಅವಕಾಶ ಇರುವುದಿಲ್ಲ ಎಂದಿದ್ದಾರೆ. ಇದಲ್ಲದೆ ಒಳಾಂಗಣದಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಗರಿಷ್ಠ 250 ಜನರನ್ನು ಒಟ್ಟುಗೂಡಿಸಲು ಅವಕಾಶ ನೀಡಲಾಗಿದ್ದು, ಹೊರಾಂಗಣಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ 500 ಜನರನ್ನು ಒಟ್ಟುಗೂಡಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ - Alcohol ಸೇವನೆಯ ಬಳಿಕ ಜನ English ಯಾಕೆ ಮಾತನಾಡುತ್ತಾರೆ? ಬಹಿರಂಗಗೊಂಡ ಸತ್ಯ ಇದು

1.5 ದಶಲಕ್ಷಕ್ಕೂ ಹೆಚ್ಚು ಕರೋನಾ ಪ್ರಕರಣಗಳು :
ವಾಸ್ತವವಾಗಿ ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳವಾರ ಆರೋಗ್ಯ ತಜ್ಞರು ಮತ್ತು ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ರಾಷ್ಟ್ರಪತಿ ರಮಾಫೋಸಾ ಈ ಘೋಷಣೆ ಮಾಡಿದ್ದಾರೆ. 

ದಕ್ಷಿಣ ಆಫ್ರಿಕಾದಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಕೊರೋನವೈರಸ್ ಪ್ರಕರಣಗಳು ವರದಿಯಾಗಿವೆ, ಇದು ಆಫ್ರಿಕಾದಲ್ಲಿ ಹೊರಹೊಮ್ಮಿರುವ ಅತಿ ಹೆಚ್ಚು ಪ್ರಕರಣಗಳು. ಇದಲ್ಲದೆ ದೇಶದಲ್ಲಿ ಇದುವರೆಗೂ ಈ ಸಾಂಕ್ರಾಮಿಕ ರೋಗದಿಂದ 52,788 ಜನರು ಸಾವನ್ನಪ್ಪಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News