ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ಬಿಜೆಪಿ ಪಕ್ಷವನ್ನು ತಮ್ಮ ಸಿಎಂ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಸವಾಲು ಹಾಕಿದೆ.
'ನೀವು ವಿನಾಶಕಾರಿ ಪಕ್ಷ, ನಾನು ಪ್ರಧಾನಮಂತ್ರಿಯನ್ನು ಒಂದೇ ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ನಮಗೆ ಮಮತಾ ಬ್ಯಾನರ್ಜಿ ಇದ್ದಾರೆ. ನೀವು ಯಾಕೆ ಒಬ್ಬರನ್ನು ಹೆಸರಿಸಲು ಸಾಧ್ಯವಿಲ್ಲ? ಯಾಕೆ ಗೊತ್ತಾ? ಯಾಕೆಂದರೆ ನೀವು ಎ, ಬಿ ಮತ್ತು ಸಿ ಹೆಸರಿಸಿದರೆ ದಂಗೆ ಏಳುತ್ತದೆ ನಾನು ನಿಮಗೆ ಸವಾಲು ಹಾಕುತ್ತೇನೆ. ನಿಮ್ಮ ಮುಖ್ಯಮಂತ್ರಿಯನ್ನು ಹೆಸರಿಸಿ "ಎಂದು ತೃಣಮೂಲ ಸಂಸದ ಡೆರೆಕ್ ಒ'ಬ್ರಿಯೆನ್ (Derek O'Brien) ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಸಂಸತ್ತು ನಿಮ್ಮ ಪಕ್ಷದ ಆಫೀಸ್ ಅಲ್ಲ,ಇಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ- ಬಿಜೆಪಿಗೆ ಟಾಂಗ್ ಕೊಟ್ಟ ತೃಣಮೂಲ
ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರಿಂದ,ಹಿಡಿದು ಚಲನಚಿತ್ರ ತಾರೆ ಮಿಥುನ್ ಚಕ್ರವರ್ತಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಮುಖ ಪಕ್ಷಾಂತರಕಾರರೆಲ್ಲರೂ ಕೂಡ ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿರುವ ಬೆನ್ನಲ್ಲೇ ಈಗ ತೃಣಮೂಲ ಪ್ರತಿಕ್ರಿಯೆ ಬಂದಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರು ಭರವಸೆ ನೀಡಿದಂತೆ ನಡೆಯುತ್ತಾರೆ, ಆದರೆ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರು ಭರವಸೆ ನೀಡಿದಂತೆ ನಡೆಯುವುದಿಲ್ಲ. 15 ಲಕ್ಷ ಎಲ್ಲಿದೆ? ಈ ಚುನಾವಣೆಯೂ ಸಂವಿಧಾನದ ಹೋರಾಟವಾಗಿದೆ ಎಂದು ಡೆರೆಕ್ ಒಬ್ರಿಯನ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ