Kerala Assembly Election: ಜೀವನೋಪಾಯಕ್ಕಾಗಿ ಹಾಲು ಮಾರುವ 27 ವರ್ಷದ ಅರಿಥಾ ಬಾಬುಗೆ ಕಾಂಗ್ರೆಸ್ ಟಿಕೆಟ್

ಅರಿಥಾ ಬಾಬು ಅವರು ಈ ಹಿಂದೆ 2015 ರಲ್ಲಿ ಆಲಪ್ಪುಳ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು, ಆ ಸಮಯದಲ್ಲಿ ಕಿರಿಯ ಸದಸ್ಯರಾಗಿದ್ದರು ಎಂದು ವರದಿಯಾಗಿದೆ.

Written by - Yashaswini V | Last Updated : Mar 17, 2021, 08:30 AM IST
  • ಬಡ ಕುಟುಂಬದಿಂದ ಬಂದಿರುವ ಅರಿಥಾ ಬಾಬು ಪಕ್ಷದ ಮಾದರಿ ಅಭ್ಯರ್ಥಿ- ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್
  • ಅರಿಥಾ ಅಂಚಿನಲ್ಲಿರುವ ಸಮುದಾಯದಿಂದ ಬಂದವರು
  • ತನ್ನ ಹಾಗೂ ಕುಟುಂಬದ ಜೀವನ ಸಾಗಿಸಲು ಹಸುವಿನ ಹಾಲಿನ ಮಾರಾಟವನ್ನು ಅವಲಂಬಿಸಿರುವ ಅವರು ತನ್ನ ಉಳಿದ ಸಮಯವನ್ನು ವಿವಿಧ ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಿಗಾಗಿ ಕಳೆಯುತ್ತಿದ್ದಾರೆ
Kerala Assembly Election: ಜೀವನೋಪಾಯಕ್ಕಾಗಿ ಹಾಲು ಮಾರುವ 27 ವರ್ಷದ ಅರಿಥಾ ಬಾಬುಗೆ ಕಾಂಗ್ರೆಸ್ ಟಿಕೆಟ್  title=
Congress ticket for 27-year-old Aritha Babu

ತಿರುವನಂತಪುರಂ : 2021 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಘೋಷಿಸುವಾಗ, ಪಕ್ಷದ ಕೇರಳ ಮುಖ್ಯಸ್ಥ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರು ನಿರ್ದಿಷ್ಟವಾಗಿ ಒಬ್ಬ ಅಭ್ಯರ್ಥಿಯನ್ನು ವಿಶೇಷವಾಗಿ ಪರಿಚಯಿಸುತ್ತಿರುವುದಾಗಿ ಹೇಳಿದ್ದರು. ಅವರೇ 27 ವರ್ಷದ ಅರಿಥಾ ಬಾಬು (Aritha Babu). ಇತ್ತೀಚಿಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಮುಲ್ಲಪ್ಪಲ್ಲಿ ಅವರು "ಕಾಂಗ್ರೆಸ್ ನ ಕಿರಿಯ ಅಭ್ಯರ್ಥಿ" ಅರಿಥಾ ಬಾಬು ಅವರನ್ನು ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಲಂ ಕ್ಷೇತ್ರದಿಂದ ಕಣಕ್ಕಿಳಿಸಿದೆ ಎಂದರು.

ಬಡ ಕುಟುಂಬದಿಂದ ಬಂದಿರುವ ಅರಿಥಾ ಬಾಬು ಕಾಂಗ್ರೆಸ್ (Congress) ಪಕ್ಷದ ಮಾದರಿ ಅಭ್ಯರ್ಥಿ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರನ್ನು ಹಾಡಿ ಹೊಗಳಿದ್ದರು. ಅರಿಥಾ ಅಂಚಿನಲ್ಲಿರುವ ಸಮುದಾಯದಿಂದ ಬಂದವರು. ತನ್ನ ಹಾಗೂ ಕುಟುಂಬದ ಜೀವನ ಸಾಗಿಸಲು ಹಸುವಿನ ಹಾಲಿನ ಮಾರಾಟವನ್ನು ಅವಲಂಬಿಸಿರುವ ಅವರು ತನ್ನ ಉಳಿದ ಸಮಯವನ್ನು ವಿವಿಧ ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಿಗಾಗಿ ಕಳೆಯುತ್ತಿದ್ದಾರೆ. ಇಂತಹವರು ನಿಜವಾಗಿಯೂ ಕಾಂಗ್ರೆಸ್ ಪಕ್ಷದ ಮಾದರಿ ಅಭ್ಯರ್ಥಿ. ಅವರನ್ನು ಚುನಾವಣಾ ಕಣಕ್ಕಿಳಿಸಲು ಪಕ್ಷ ಹೆಮ್ಮೆಪಡುತ್ತದೆ ಎಂದು ಮುಲ್ಲಪ್ಪಲ್ಲಿ ಹೇಳಿದರು.

ಅರಿಥಾ ಸಾಮಾಜಿಕ ಕಾರ್ಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪ್ರಸ್ತುತ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಅವರು ಕಾಯಂಕುಲಂನಲ್ಲಿ ಸಿಪಿಐ (ಎಂ) ನ ಪ್ರಮುಖ ಮತ್ತು ಹಾಲಿ ವಿಧಾನಸಭೆಯ ಶಾಸಕರಾದ ಯು ಪ್ರತಿಬಾ ವಿರುದ್ಧ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ - By Election Date: ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಗೆ 'ದಿನಾಂಕ ಫಿಕ್ಸ್'..!

ಅರಿಥಾ ಈ ಹಿಂದೆ 2015-20ರಲ್ಲಿ ಆಲಪ್ಪುಳ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು. ವರದಿಗಳ ಪ್ರಕಾರ, ಅರಿಥಾ 2015 ರಲ್ಲಿ ಆಯ್ಕೆಯಾದಾಗ ಕಿರಿಯ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.

ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಗೆ (Kerala Assembly Election) ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ ನಂತರ ಅರಿಥಾ ಬಾಬು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ “ನನ್ನೊಂದಿಗೆ ಇರಿ” ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.

ವರದಿಗಳ ಪ್ರಕಾರ, ವಿದ್ಯಾರ್ಥಿ ರಾಜಕೀಯದ ಮೂಲಕ ಅರಿಥಾ ರಾಜಕೀಯ ಪ್ರವೇಶಿಸಿದಳು, ಅವರು ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು), ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗ ಮತ್ತು ಪಕ್ಷದ ಯುವ ವಿಭಾಗವಾದ ಯೂತ್ ಕಾಂಗ್ರೆಸ್‌ನಲ್ಲಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅರಿಥಾ 2015-16ರ ಅವಧಿಯಲ್ಲಿ ಕಾಯಂಕುಲಂ ಕ್ಷೇತ್ರದಲ್ಲಿ ಕೆಎಸ್‌ಯು ಉಪಾಧ್ಯಕ್ಷರಾಗಿದ್ದರು. ಅವರು 2011 ರಲ್ಲಿ ಯುವ ಕಾಂಗ್ರೆಸ್ ನ ಮಂಡಲ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರಸ್ತುತ, ಅವರು ಯುವ ಕಾಂಗ್ರೆಸ್ ನ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ - Karnataka BJP: CD ಪ್ರಕರಣದ ಬಗ್ಗೆ ಬಿಜೆಪಿಯಿಂದ 'ಪ್ರಪ್ರಥಮ' ಭಾರಿಗೆ ಅಧಿಕೃತ ಹೇಳಿಕೆ!

ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರಿಥಾ ಬಾಬು, ತಾವು  ಕಾಯಂಕುಲಂ ಮೂಲದವರಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಜನತೆ ಖಂಡಿತವಾಗಿಯೂ ನನ್ನ ಕೈ ಹಿಡಿಯಲಿದ್ದಾರೆ ಎಂದು ನಂಬಿರುವುದಾಗಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News